ಬರ್ಮಿಂಗ್ಹ್ಯಾಮ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್(146), ರವೀಂದ್ರ ಜಡೇಜಾ(104) ಹಾಗೂ ನಾಯಕ ಜಸ್ಪ್ರೀತ್ ಬುಮ್ರಾ ಸ್ಫೋಟಕ(31) ರನ್ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 416ರನ್ಗಳಿಕೆ ಮಾಡಿದೆ.
-
Innings Break!
— BCCI (@BCCI) July 2, 2022 " class="align-text-top noRightClick twitterSection" data="
Centuries from @RishabhPant17 (146) & @imjadeja (104) and an entertaining 31* from @Jaspritbumrah93 as #TeamIndia post 416 in the first innings.
Scorecard - https://t.co/xOyMtKJzWm #ENGvIND pic.twitter.com/M9RtB5Hu02
">Innings Break!
— BCCI (@BCCI) July 2, 2022
Centuries from @RishabhPant17 (146) & @imjadeja (104) and an entertaining 31* from @Jaspritbumrah93 as #TeamIndia post 416 in the first innings.
Scorecard - https://t.co/xOyMtKJzWm #ENGvIND pic.twitter.com/M9RtB5Hu02Innings Break!
— BCCI (@BCCI) July 2, 2022
Centuries from @RishabhPant17 (146) & @imjadeja (104) and an entertaining 31* from @Jaspritbumrah93 as #TeamIndia post 416 in the first innings.
Scorecard - https://t.co/xOyMtKJzWm #ENGvIND pic.twitter.com/M9RtB5Hu02
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 98ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್(17), ಪೂಜಾರಾ(13), ಹನುಮ ವಿಹಾರಿ(20), ವಿರಾಟ್ ಕೊಹ್ಲಿ(15) ಹಾಗೂ ಶ್ರೇಯಸ್ ಅಯ್ಯರ್(15)ರನ್ಗಳಿಕೆ ಮಾಡಿ, ನಿರಾಸೆ ಅನುಭವಿಸಿದರು. ಆದರೆ, ಈ ವೇಳೆ ಒಂದಾದ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತ ಹಿಗ್ಗಿಸಿದರು.
ವಿರಾಟ್ ಮತ್ತೊಮ್ಮೆ ವೈಫಲ್ಯ: ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. 19 ಎಸೆತಗಳಲ್ಲಿ 11ರನ್ಗಳಿಕೆ ಮಾಡಿದ್ದ ವೇಳೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಮುಂದುವರೆಸಿದರು. ವಿರಾಟ್ ಕೊಹ್ಲಿ 2019ರಲ್ಲಿ ಕೊನೆಯದಾಗಿ ಶತಕ ಸಿಡಿಸಿದ್ದಾರೆ.
ಆರಂಭದಿಂದಲೂ ರಿಷಭ್ ಪಂತ್ ಸ್ಫೋಟಕ ಆಟಕ್ಕೆ ಮೊರೆ ನೀಡಿದರು. ಈ ಮೂಲಕ ತಾವು ಎದುರಿಸಿದ 111 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸರ್ ಸೇರಿದಂತೆ 146ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ್ದ ಜಡೇಜಾ ನಿನ್ನೆ ದಿನದಾಟದ ಅಂತ್ಯಕ್ಕೆ 83ರನ್ಗಳಿಕೆ ಮಾಡಿ, ಇದೀಗ ವಿಕೆಟ್ ಕಾಯ್ದಿರಿಸಿಕೊಂಡಿದ್ದರು. ಇಂದು ಬ್ಯಾಟಿಂಗ್ ಮುಂದುವರೆಸಿದ ಟೀಂ ಇಂಡಿಯಾ ತನ್ನೆಲ್ಲ ವಿಕೆಟ್ ಕಳೆದುಕೊಂಡು 416ರನ್ಗಳಿಸಿದೆ. ತಂಡದ ಪರ ಇಂದು ಶಮಿ(16), ಸಿರಾಜ್(2)ರನ್ಗಳಿಸಿದರೆ, ನಾಯಕ ಜಸ್ಪ್ರೀತ್ ಬುಮ್ರಾ ಅಜೇಯ 31ರನ್ಗಳಿಸಿದರು.
ದಾಖಲೆ ಬರೆದ ಪಂತ್-ಜಡೇಜಾ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎಡಗೈ ಬ್ಯಾಟರ್ಗಳಾದ ಪಂತ್ ಹಾಗೂ ಜಡೇಜಾ ಶತಕ ಸಿಡಿಸುವ ಮೂಲಕ ಹೊಸದೊಂದು ದಾಖಲೆ ಸಹ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ತಂಡದ ಪರ ಜೇಮ್ಸ್ ಆ್ಯಂಡರ್ಸನ್ 5 ವಿಕೆಟ್ ಪಡೆದರೆ, ಪ್ಯಾಟ್ಸ್ 2 ವಿಕೆಟ್, ಬ್ರಾಂಡ್, ಸ್ಟೋಕ್ಸ್ ಹಾಗೂ ರೂಟ್ ತಲಾ 1 ವಿಕೆಟ್ ಪಡೆದುಕೊಂಡರು.