ETV Bharat / sports

ಮೊದಲ ಬಾರಿಗೆ ಟೀಂ ಇಂಡಿಯಾ ಜರ್ಸಿಯಲ್ಲಿ ಮಿಂಚಿದ ದೇವದತ್​ ಪಡಿಕ್ಕಲ್!!

author img

By

Published : Jul 14, 2021, 5:04 PM IST

ದೇಶಿ ಕ್ರಿಕೆಟ್​​ನಲ್ಲಿ ಸ್ಥಿರ ಪ್ರದರ್ಶನ ಮತ್ತು ಐಪಿಎಲ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದರಿಂದ ಆಯ್ಕೆ ಸಮಿತಿ ಲಂಕಾ ಪ್ರವಾಸಕ್ಕೆ ಪಡಿಕ್ಕಲ್​ರನ್ನು ಆಯ್ಕೆ ಮಾಡಿದೆ. ಆದರೆ, ಪೃಥ್ವಿ ಶಾ ಮತ್ತು ಶಿಖರ್ ಧವನ್​ ಇರುವುದರಿಂದ ಯುವ ಆಟಗಾರನಿಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ..

ದೇವದತ್​ ಪಡಿಕ್ಕಲ್
ದೇವದತ್​ ಪಡಿಕ್ಕಲ್

ಕೊಲಂಬೊ : ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಕರ್ನಾಟಕದ ಯುವ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್ ಮತ್ತು ಆಲ್​ರೌಂಡರ್​ ಕೆ ಗೌತಮ್ ಭಾರತದ ಜರ್ಸಿಯಲ್ಲಿ ಮಿಂಚಿದ್ದಾರೆ. ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ಮೊದಲು ಬಿಸಿಸಿಐ ಫೋಟೋ ಶೂಟ್‌ನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ, ಕೆ ಎಲ್ ರಾಹುಲ್‌ರಂತಹ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಐಪಿಎಲ್​ನಲ್ಲಿ ಮಿಂಚಿದ್ದ ಯುವ ಆಟಗಾರರನ್ನೊಳಗೊಂಡ ವೈಟ್​ ಬಾಲ್ ತಂಡವನ್ನು ಲಂಕಾ ಪ್ರವಾಸಕ್ಕೆ ಕಳುಹಿಸಲಾಗಿದೆ. ಈ ತಂಡಕ್ಕೆ ಶಿಖರ್‌ ಧವನ್ ನಾಯಕ, ಭುವನೇಶ್ವರ್ ಕುಮಾರ್ ಉಪನಾಯಕ ಮತ್ತು ಕನ್ನಡಿಗ ರಾಹುಲ್​​ ದ್ರಾವಿಡ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಅಂಡರ್ 19, ಕೆಪಿಎಲ್, ಕರ್ನಾಟಕ ತಂಡದಲ್ಲಿ ರನ್​ಗಳ ಸುರಿಮಳೆ ಸುರಿಸಿದ್ದ ದೇವದತ್ ಪಡಿಕ್ಕಲ್ ಕಳೆದ ಆವೃತ್ತಿಯಲ್ಲಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದರು. ಅವರು 2020ರ ಆವೃತ್ತಿಯಲ್ಲಿ 15 ಪಂದ್ಯಗಳಿಂದ 473 ರನ್​ಗಳಿಸಿ ಆರ್​ಸಿಬಿ ತಂಡದ ಗರಿಷ್ಠ ಸ್ಕೋರರ್ ಎನಿಸಿದ್ದರು.

ದೇಶಿ ಕ್ರಿಕೆಟ್​​ನಲ್ಲಿ ಸ್ಥಿರ ಪ್ರದರ್ಶನ ಮತ್ತು ಐಪಿಎಲ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದರಿಂದ ಆಯ್ಕೆ ಸಮಿತಿ ಲಂಕಾ ಪ್ರವಾಸಕ್ಕೆ ಪಡಿಕ್ಕಲ್​ರನ್ನು ಆಯ್ಕೆ ಮಾಡಿದೆ. ಆದರೆ, ಪೃಥ್ವಿ ಶಾ ಮತ್ತು ಶಿಖರ್ ಧವನ್​ ಇರುವುದರಿಂದ ಯುವ ಆಟಗಾರನಿಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.

ಇವರಲ್ಲದೆ ಮತ್ತೊಬ್ಬ ಕನ್ನಡಿಗ ಆಲ್​ರೌಂಡರ್ ಕೆ.ಗೌತಮ್, ಯುವ ವೇಗಿ ಚೇತನ್ ಸಕಾರಿಯಾ, ನಿತೀಶ್ ರಾಣಾ, ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ರುತುರಾಜ್ ಗಾಯಕ್ವಾಡ್​ ಭಾರತ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ಪಡೆದಿದ್ದು, ಪದಾರ್ಪಣೆ ಮಾಡಲು ಕಾತುರದಿಂದಿದ್ದಾರೆ.

ಅನುಭವಿಗಳಾದ ಮನೀಶ್ ಪಾಂಡೆ, ಕುಲ್ದೀಪ್ ಯಾದವ್​ ಕೂಡ ಕಮ್​ಬ್ಯಾಕ್ ಮಾಡಿದ್ದು, ಮತ್ತೆ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳಲು ಕಾಯುತ್ತಿದ್ದಾರೆ. ಜುಲೈ 18ರಿಂದ ಏಕದಿನ ಸರಣಿ ಆರಂಭವಾಗಲಿದೆ.

ಇದನ್ನೂ ಓದಿ: ನಾಯಕನಾಗಿ ತಂಡದಲ್ಲಿ ಒಗ್ಗಟ್ಟು ಮತ್ತು ಖುಷಿಯಿಂದಿರುವಂತೆ ನೋಡಲು ಬಯಸುತ್ತೇನೆ: ಧವನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.