ETV Bharat / sports

ಪಂತ್​ 100ಕ್ಕೂ ಹೆಚ್ಚು ಟೆಸ್ಟ್​ ಪಂದ್ಯಗಳನ್ನಾಡಿದರೆ, ಅವರ ಹೆಸರು ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಇರಲಿದೆ: ಸೆಹ್ವಾಗ್! - ರಿಷಭ್ ಪಂತ್ ಬಗ್ಗೆ ಸೆಹ್ವಾಗ್ ಮಾತು

ರಿಷಭ್ ಪಂತ್​ ಕೇವಲ ವೈಟ್ ಬಾಲ್​ ಕ್ರಿಕೆಟ್ ಆಡಿದರೆ ಯಾವುದೇ ಕ್ರೀಡಾಭಿಮಾನಿ ಅವರ ಹೆಸರು ನೆನಪಿನಲ್ಲಿಟ್ಟುಕೊಳ್ಳಲ್ಲ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

Virender Sehwag on Rishabh Pant
Virender Sehwag on Rishabh Pant
author img

By

Published : May 27, 2022, 4:02 PM IST

ಮುಂಬೈ: ಟೀಂ ಇಂಡಿಯಾ ವಿಕೆಟ್​ ಕೀಪರ್ ಬ್ಯಾಟರ್​ ರಿಷಭ್ ಪಂತ್​ ಟೆಸ್ಟ್​ ಕ್ರಿಕೆಟ್​​ನಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿದರೆ, ಅವರ ಹೆಸರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಇರಲಿದೆ ಎಂದು ವಿರೇಂದ್ರ ಸೆಹ್ವಾಗ್​​ ಅಭಿಪ್ರಾಯಪಟ್ಟಿದ್ದಾರೆ. ಟಿ-20 ಕ್ರಿಕೆಟ್​ನಲ್ಲಿ ದೊಡ್ಡ ಹೊಡೆತಗಳಿಂದ ಗುರುತಿಸಲ್ಪಟ್ಟಿರುವ ಪಂತ್, ತಡವಾಗಿ ಟೆಸ್ಟ್ ಕ್ರಿಕೆಟ್​ಗೆ ಲಗ್ಗೆ ಹಾಕಿದ್ದು, ಇದೀಗ ಆಡಿರುವ 30 ಪಂದ್ಯಗಳಿಂದ 40.85ರ ಸರಾಸರಿಯಲ್ಲಿ ನಾಲ್ಕು ಶತಕ, ಒಂಬತ್ತು ಅರ್ಧಶತಕ ಸೇರಿ 1920 ರನ್​ಗಳಿಸಿದ್ದಾರೆ.

ಭಾರತದಲ್ಲಿ ಆಯೋಜನೆಗೊಂಡಿದ್ದ ಲಂಕಾ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳಲ್ಲಿ 24 ವರ್ಷದ ಪಂತ್​ ಕ್ರಮವಾಗಿ 120.12 ಸ್ಟ್ರೇಕ್​ ರೇಟ್​ನಲ್ಲಿ 185 ರನ್​​ಗಳಿಸಿದ್ದಾರೆ. ಇವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ವಿರೇಂದ್ರ ಸೆಹ್ವಾಗ್, ಒಂದು ವೇಳೆ ಪಂತ್​ 100ಕ್ಕೂ ಅಧಿಕ ಟೆಸ್ಟ್​ ಪಂದ್ಯಗಳನ್ನಾಡಿದರೆ, ಅವರ ಹೆಸರು ಇತಿಹಾಸದ ಪುಟದಲ್ಲಿ ಶಾಶ್ವತವಾಗಿರಲಿದ್ದು, ಅದನ್ನ ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ ಚೊಚ್ಚಲ ಪ್ರಶಸ್ತಿಗೆ ಇನ್ನೆರಡು ಹೆಜ್ಜೆ.. ಬೆಂಗಳೂರು ತಂಡಕ್ಕೆ ರಾಜಸ್ಥಾನ ಚಾಲೆಂಜ್​!

ಪಂತ್​​ ಕೇವಲ ಸಿಮೀತ ಓವರ್​ಗಳ ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ, ಯಾರು ಸಹ ಆತನನ್ನ ನೆನಪಿನಲ್ಲಿಟ್ಟುಕೊಳ್ಳಲ್ಲ. ವಿರಾಟ್​ ಕೊಹ್ಲಿ ಇದೇ ಕಾರಣಕ್ಕಾಗಿ ಹೆಚ್ಚು ಟೆಸ್ಟ್​ ಕ್ರಿಕೆಟ್​ ಬಗ್ಗೆ ಒತ್ತು ನೀಡುತ್ತಾರೆ ಎಂದರು. ಒಂದು ವೇಳೆ ಅವರು 100-150 ಅಥವಾ 200 ಟೆಸ್ಟ್​ ಪಂದ್ಯಗಳನ್ನಾಡಿದರೆ ಖಂಡಿತವಾಗಿ ಅವರ ಹೆಸರು ದಾಖಲೆಯ ಪುಸ್ತಕ ಸೇರಿಕೊಳ್ಳಲಿದೆ ಎಂದರು.

ಟೀ ಇಂಡಿಯಾದಲ್ಲಿ ಸ್ಫೋಟಕ ಬ್ಯಾಟರ್ ಎಂದು ಗುರುತಿಸಿಕೊಳ್ಳುವ ಸೆಹ್ವಾಗ್​, ಟೆಸ್ಟ್​ನಲ್ಲಿ 8,586 ರನ್​ಗಳಿಸಿದ್ದು, ಏಕದಿನದಲ್ಲಿ 8273ರನ್​ಗಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.