ETV Bharat / sports

ವಿಶ್ವಕಪ್ 2023: ಆಸ್ಟ್ರೇಲಿಯಾ ವಿರುದ್ಧ ಸೋತ ಶ್ರೀಲಂಕಾದ ಪಾತುಮ್ ನಿಸ್ಸಾಂಕ ಹೇಳಿದ್ದು ಹೀಗೆ... - Australia Vs Sri Lanka

ಸೋಮವಾರ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್‌ನ ಪಂದ್ಯದಲ್ಲಿ ಶ್ರೀಲಂಕಾ ತಂಡವು ಸತತ ಮೂರನೇ ಸೋಲನ್ನು ಅನುಭವಿಸಿತು. ಆಸೀಸ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕ ಬೇಸರ ವ್ಯಕ್ತಪಡಿಸಿದರು.

World Cup
ವಿಶ್ವಕಪ್ 2023: ಆಸ್ಟ್ರೇಲಿಯಾ ವಿರುದ್ಧ ಸೋತ ಶ್ರೀಲಂಕಾದ ಪಾತುಮ್ ನಿಸ್ಸಾಂಕಾ ಹೇಳಿದ್ದು ಹೀಗೆ...
author img

By ETV Bharat Karnataka Team

Published : Oct 17, 2023, 2:30 PM IST

ಲಕ್ನೋ (ಉತ್ತರ ಪ್ರದೇಶ): ಸೋಮವಾರ ನಡೆದ ವಿಶ್ವಕಪ್​ನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾದ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕ ಅವರು ಕುಸಲ್ ಪೆರೆರಾ ಅವರೊಂದಿಗೆ 125 ರನ್‌ಗಳ ಜೊತೆಯಾಟವಾಡಿದರು. ಆದರೆ, ಅದು ಶ್ರೀಲಂಕಾ ತಂಡಕ್ಕೆ ಸಾಕಾಗಲಿಲ್ಲ. ಏಕೆಂದರೆ, ಆಸ್ಟ್ರೇಲಿಯಾ ತಂಡದ ಎದುರು ಐದು ವಿಕೆಟ್‌ಗಳಿಂದ ಸೋಲು ಅನುಭವಿಸಿತು.

ಪಾತುಮ್​ ನಿಸ್ಸಾಂಕ 67 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 61 ರನ್ ಗಳಿಸಿದರು. ಆದಾಗ್ಯೂ 22ನೇ ಓವರ್‌ನಲ್ಲಿ ಪ್ರತಿಸ್ಪರ್ಧಿ ನಾಯಕ ಪ್ಯಾಟ್ ಕಮ್ಮಿನ್ಸ್, ನಿಸ್ಸಾಂಕ ವಿಕೆಟ್​ ಕಬಳಿಸಿದರು. ಕುಸಲ್ ಪೆರೆರಾ (82 ಎಸೆತಗಳಲ್ಲಿ 78) ಔಟಾದ ನಂತರ ಶ್ರೀಲಂಕಾ ಸತತವಾಗಿ ವಿಕೆಟ್ ಕಳೆದುಕೊಂಡು 209 ಕ್ಕೆ ಆಲೌಟ್ ಆಯಿತು. ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಅವರ ಅರ್ಧಶತಕಗಳ ಅಬ್ಬರದಿಂದ ಆಸ್ಟ್ರೇಲಿಯಾ ಕೇವಲ 35.2 ಓವರ್‌ಗಳಲ್ಲಿ ಗುರಿಯನ್ನು ತಲುಪಿತು.

ಪಾತುಮ್ ನಿಸ್ಸಾಂಕ ಮಾತು: 300ರ ಸಮೀಪವಿರುವ ಯಾವುದಾದರೂ ಒಂದು ಸವಾಲಿನ ಮೊತ್ತ ಕಲೆ ಹಾಕಬೇಕಿತ್ತು. ಆದರೆ, ಏಷ್ಯನ್ ತಂಡವು ಭರವಸೆಯ ಆರಂಭವನ್ನು ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ಪಾತುಮ್ ನಿಸ್ಸಾಂಕ ಹೇಳಿದರು.

"ನಮ್ಮ ಭರವಸೆಯ ಆರಂಭದ ಹೊರತಾಗಿಯೂ, ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವಿಕೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಇದರ ಪರಿಣಾಮವಾಗಿ ನಾವು 210 ರನ್‌ಗಳ ಸ್ಕೋರ್‌ಗೆ ಸೀಮಿತವಾಗಬೇಕಾಯಿತು. ವಿಕೆಟ್‌ಗಳನ್ನು ಕಾಯ್ದುಕೊಂಡು ಒಟ್ಟು 300 ರನ್‌ಗಳ ಸಮೀಪದ ಗುರಿಯನ್ನು ಹೊಂದಬೇಕೆಂದು ನಾವು ಬಯಸಿದ್ದೆವು. ಇದು ನಮ್ಮ ಸೋಲಿಗೆ ಕಾರಣವಾಯಿತು" ಎಂದು ಪಂದ್ಯದ ನಂತರದ ಮಾಧ್ಯಮಗೋಷ್ಟಿಯಲ್ಲಿ ನಿಸ್ಸಾಂಕ ತಿಳಿಸಿದ್ದಾರೆ.

"ತಂಡಕ್ಕಾಗಿ ನಾನು ನನ್ನ ಅತ್ಯುತ್ತಮವಾದುದನ್ನು ನೀಡಿದ್ದೇನೆ ಎಂದು ನಂಬುತ್ತೇನೆ. ಮುಂಬರುವ ಪಂದ್ಯಗಳಲ್ಲಿ ಗಣನೀಯ ಸಂಖ್ಯೆಯ ರನ್ ಗಳಿಸುವ ಮೂಲಕ ಉತ್ತಮ ಇನ್ನಿಂಗ್ಸ್ ಆಡಿ ಗಮನಾರ್ಹ ಕೊಡುಗೆ ನೀಡಬಲ್ಲೆ ಎಂದು ನಾನು ಭಾವಿಸುತ್ತೇನೆ. ಸ್ಪರ್ಧೆಯಲ್ಲಿ ಸ್ಥಾವನ್ನು ಗಟ್ಟಿಗೊಳಿಸಲು ಶ್ರೀಲಂಕಾ ಈಗ ಉಳಿದಿರುವ ಎಲ್ಲಾ ಆರು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ನಾವು ಮಾಡಿದ ತಪ್ಪುಗಳಿಂದ ಕಲಿಯುವುದರತ್ತ ತಂಡದ ಗಮನಹರಿಸಿದೆ'' ಎಂದು ನಿಸ್ಸಾಂಕ ಹೇಳಿದ್ದಾರೆ.

"ನಮ್ಮ ಗಮನ ಈಗ ನಮ್ಮ ತಪ್ಪುಗಳಿಂದ ಕಲಿಯುವುದು ಮತ್ತು ಮುಂಬರುವ ಪಂದ್ಯಗಳಲ್ಲಿ ಬಲವಾದ ಪ್ರದರ್ಶನಕ್ಕಾಗಿ ಶ್ರಮಿಸುವುದು. ನಮ್ಮ ಮಾನಸಿಕ ಮಟ್ಟ ಉತ್ತಮವಾಗಿದೆ. ನಾವು ಮುಂಬರುವ ಪಂದ್ಯಗಳಲ್ಲಿ ಉತ್ತಮವಾಗಿ ಆಡುತ್ತೇವೆ. ಉಳಿದ ಪಂದ್ಯಗಳನ್ನು ಗೆಲ್ಲುತ್ತೇವೆ" ಎಂದು ನಿಸ್ಸಾಂಕ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಲಂಕಾ ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಅನ್ನು ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ಅಕ್ಟೋಬರ್ 21 ರಂದು (ಶನಿವಾರ) ಎದುರಿಸಲಿದೆ.

ಇದನ್ನೂ ಓದಿ: World Cup 2023: ಹೆಚ್ಚು ವಿಕೆಟ್​ ಪಡೆಯುವುದೇ ನನ್ನ ಗುರಿ.. ಎಕಾನಮಿ ರೇಟ್​ ಬಗ್ಗೆ ಚಿಂತೆ ಮಾಡಲ್ಲ: ಆಸ್ಟ್ರೇಲಿಯಾದ ಸ್ಪಿನ್ನರ್​ ಆಡಮ್ ಝಂಪಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.