ETV Bharat / sports

ಬೆನ್ನು ನೋವಿನ ಮಧ್ಯೆಯೂ ತಂಡದ ಗೆಲುವಿಗಾಗಿ ಆಡಮ್​ ಹೋರಾಟ.. ಝಂಪಾ ಹೇಳಿದ್ದು ಹೀಗೆ.. - ಪಂದ್ಯ ಶ್ರೇಷ್ಠ ಪ್ರಶಸ್ತಿ

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಶ್ರೀಲಂಕಾವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತನ್ನ ಮೊದಲ ಗೆಲುವು ದಾಖಲಿಸಿದೆ. ಲೆಗ್ ಸ್ಪಿನ್ನರ್ ಆಡಮ್ ಝಂಪಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Adam Zampa reveals  Adam Zampa reveals had a bit of a back spasm  feeling great after win against Sri Lanka  Cricket World Cup  ತಂಡದ ಗೆಲುವಿಗಾಗಿ ಆಡಮ್​ ಹೋರಾಟ  ಝಂಪಾ ಹೇಳಿದ್ದು ಹೀಗೆ  ಐಸಿಸಿ ಕ್ರಿಕೆಟ್ ವಿಶ್ವಕಪ್ 2023  ಆಸ್ಟ್ರೇಲಿಯಾ ತನ್ನ ಮೊದಲ ಗೆಲುವು  ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣ  ಲೆಗ್ ಸ್ಪಿನ್ನರ್ ಆಡಮ್ ಝಂಪಾ  ಪಂದ್ಯ ಶ್ರೇಷ್ಠ ಪ್ರಶಸ್ತಿ  ಟಾಸ್​ ಸೋತು ಮೊದಲು ಬೌಲಿಂಗ್​ ಮಾಡಿದ್ದ ಆಸ್ಟ್ರೇಲಿಯಾ
ಬೆನ್ನು ನೋವಿನ ಮಧ್ಯೆಯೂ ತಂಡದ ಗೆಲುವಿಗಾಗಿ ಆಡಮ್​ ಹೋರಾಟ
author img

By ETV Bharat Karnataka Team

Published : Oct 17, 2023, 7:23 AM IST

ಲಖನೌ(ಉತ್ತರ ಪ್ರದೇಶ): ಈ ಬಾರಿಯ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನದಿಂದ ಎರಡು ಪಂದ್ಯಗಳನ್ನು ಕೈಚೆಲ್ಲಿದ್ದ ಆಸ್ಟ್ರೇಲಿಯಾ ಸೋಮವಾರ ನಡೆದ ಮ್ಯಾಚ್​ನಲ್ಲಿ ಗೆಲುವಿನ ಕೇಕೆ ಹಾಕಿದೆ. ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಅವರು ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಐದು ವಿಕೆಟ್‌ಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಡಮ್ ಝಂಪಾ ಕಳೆದ ಎರಡು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.

31 ವರ್ಷದ ಝಂಪಾ ಅವರು 47 ರನ್​ಗಳನ್ನು ನೀಡಿ 4 ವಿಕೆಟ್​ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಟಾಸ್​ ಸೋತು ಮೊದಲು ಬೌಲಿಂಗ್​ ಮಾಡಿದ್ದ ಆಸ್ಟ್ರೇಲಿಯಾ ತಂಡ ಶ್ರೀಲಂಕಾವನ್ನು 209 ರನ್‌ಗಳಿಗೆ ಕಟ್ಟಿಹಾಕಿತ್ತು. ನಂತರ ಶ್ರೀಲಂಕಾ ನೀಡಿದ್ದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಸ್ವಲ್ಪ ಬೆನ್ನು ನೋವು ಇದ್ದಿದ್ದರಿಂದ ನಾನು ಉತ್ತಮವಾಗಿ ಆಟವಾಡುತ್ತೇನೆ ಎಂಬ ಭಾವನೆ ಹೊಂದಿರಲಿಲ್ಲ. ಕಳೆದೆರಡು ದಿನಗಳಿಂದ ನಾನು ಇದೇ ಭಾವನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಈ ಪಂದ್ಯದಲ್ಲಿ ನಾನು ಉತ್ತಮವಾಗಿದ್ದೇನೆ ಮತ್ತು ಉತ್ತಮವಾಗಿ ಬೌಲಿಂಗ್ ಮಾಡಿದ್ದೇನೆ ಎಂದು ಝಂಪಾ ಆಟದ ನಂತರ ಹೇಳಿದರು.

"ವೈಯಕ್ತಿಕವಾಗಿ ನನ್ನ ಅತ್ಯುತ್ತಮ ಮತ್ತು ಕೊನೆಯ ಆಟದಲ್ಲಿ ವಿಶೇಷವಾಗಿ ಆಡಬಹುದಿತ್ತು ಎಂದು ಭಾವಿಸಿದೆ. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ಗಳನ್ನು ಪಡೆಯುವುದು ಈ ತಂಡದಲ್ಲಿ ನನ್ನ ಕೆಲಸವಾಗಿದೆ. ಕೊನೆಯ ಪಂದ್ಯದಲ್ಲಿ ನನ್ನ ಫರ್ಮಾಮೆನ್ಸ್​​ ಅಷ್ಟೊಂದು ಸರಿಯಾಗಿರಲಿಲ್ಲ. ಈ ಬಾರಿ ನಾನು ಡೆತ್ ಬೌಲರ್‌ಗಳ ಮೇಲೆ ಒತ್ತಡ ಹೇರಲಿಲ್ಲ. ನಾನು ಉತ್ತಮ ಭಾವನೆ ಹೊಂದಿದ್ದೇನೆ. ಸ್ವಲ್ಪ ರನ್ ನೀಡಿದ್ರೂ ಪರವಾಗಿಲ್ಲ, ನಾನು ವಿಕೆಟ್ ತೆಗೆದುಕೊಳ್ಳುವ ಮನೋಭಾವವನ್ನು ಮುಂದುವರಿಸಬೇಕು'' ಎಂದು ಲೆಗ್ ಸ್ಪಿನ್ನರ್ ಹೇಳಿದರು.

ಆಸ್ಟ್ರೇಲಿಯಾ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಆದ್ರೆ ಶ್ರೀಲಂಕಾ ವಿರುದ್ಧದ ಗೆಲುವಿನ ನಂತರ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಸಂತೋಷದ ವ್ಯಕ್ತಿಯಾಗಿದ್ದರು. ಹೌದು, ಇಂದು ಸಂತೋಷವಾಗಿದೆ. ಈಗ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ. ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದೇವೆ. ಮೈದಾನದಲ್ಲಿ ಶಕ್ತಿ ಪ್ರಾರಂಭಿಸಲು ಸಂತೋಷವಾಗಿದೆ ಎಂದು ಕಮ್ಮಿನ್ಸ್ ಹೇಳಿದರು. ಅಕ್ಟೋಬರ್​ 20ರಂದು ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಮುಂದಿನ ಪಂದ್ಯ ನಡೆಯಲಿದೆ.

ಓದಿ: ವಿಶ್ವಕಪ್ ಕ್ರಿಕೆಟ್: ಮಾರ್ಷ್, ಜೋಶ್ ಅರ್ಧಶತಕದಾಟ; ಲಂಕಾ ಮಣಿಸಿದ ಆಸ್ಟ್ರೇಲಿಯಾಕ್ಕೆ ಮೊದಲ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.