ದುಬೈ : ಭಾರತ ತಂಡದ ಮುಂಚೂಣಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ 5ರೊಳಗೆ ಪ್ರವೇಶಿಸಿದ್ದಾರೆ.
ಬುಮ್ರಾ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 5 ವಿಕೆಟ್ ಗೊಂಚಲು ಸೇರಿದಂತೆ ಸರಣಿಯಲ್ಲಿ 8 ವಿಕೆಟ್ ಪಡೆದಿದ್ದರು. ಈ ಪ್ರದರ್ಶನದ ನೆರವಿನಿಂದ ಅವರು 6 ಸ್ಥಾನ ಬಡ್ತಿ ಪಡೆದು 4ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಪ್ಯಾಟ್ ಕಮಿನ್ಸ್(892), ರವಿಚಂದ್ರನ್ ಅಶ್ವಿನ್(850), ಕಗಿಸೊ ರಬಾಡ(835) ಅಗ್ರ ಮೂರರಲ್ಲಿದ್ದಾರೆ.
ಇನ್ನು ಲಂಕಾ ಸರಣಿಯಲ್ಲಿ ವಿಫಲರಾದ ವಿರಾಟ್ ಕೊಹ್ಲಿ(742) ಬ್ಯಾಟಿಂಗ್ ಶ್ರೇಯಾಂಕದಲ್ಲಿ 4 ಸ್ಥಾನ ಕುಸಿದು 9ಕ್ಕೆ ಜಾರಿದ್ದಾರೆ. ರೋಹಿತ್ ಶರ್ಮಾ 6ನೇ ಮತ್ತು ರಿಷಭ್ ಪಂತ್ 10ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಮಾರ್ನಸ್ ಲ್ಯಾಬುಶೇನ್(936), ಜೋ ರೂಟ್(872), ಸ್ಟೀವ್ ಸ್ಮಿತ್(851), ಕೇನ್ ವಿಲಿಯಮ್ಸನ್(844) ಮತ್ತು ದಿಮುತ್ ಕರುಣರತ್ನೆ(781) ಅಗ್ರ 5ರಲ್ಲಿದ್ದಾರೆ.
-
🔹 Jasprit Bumrah breaks into top 5 💪
— ICC (@ICC) March 16, 2022 " class="align-text-top noRightClick twitterSection" data="
🔹 Jason Holder reclaims top spot 🔝
🔹 Dimuth Karunaratne rises 📈
Some big movements in the latest @MRFWorldwide ICC Men's Test Player Rankings 🔢
Details 👉 https://t.co/MQENhZlPP8 pic.twitter.com/8OClbDeDtS
">🔹 Jasprit Bumrah breaks into top 5 💪
— ICC (@ICC) March 16, 2022
🔹 Jason Holder reclaims top spot 🔝
🔹 Dimuth Karunaratne rises 📈
Some big movements in the latest @MRFWorldwide ICC Men's Test Player Rankings 🔢
Details 👉 https://t.co/MQENhZlPP8 pic.twitter.com/8OClbDeDtS🔹 Jasprit Bumrah breaks into top 5 💪
— ICC (@ICC) March 16, 2022
🔹 Jason Holder reclaims top spot 🔝
🔹 Dimuth Karunaratne rises 📈
Some big movements in the latest @MRFWorldwide ICC Men's Test Player Rankings 🔢
Details 👉 https://t.co/MQENhZlPP8 pic.twitter.com/8OClbDeDtS
ಶ್ರೀಲಂಕಾ ಸರಣಿಯಲ್ಲಿ ಮಿಂಚಿದ್ದ ಶ್ರೇಯಸ್ ಅಯ್ಯರ್(37) ಬರೋಬ್ಬರಿ 40 ಸ್ಥಾನ ಏರಿಕೆ ಕಂಡಿದ್ದಾರೆ. ಜಡೇಜಾ 42, ಅಗರ್ವಾಲ್ 3ಸ್ಥಾನ ಕುಸಿದು 19ರಲ್ಲಿದ್ದಾರೆ. ಹನುಮ ವಿಹಾರಿ 53ನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ ಶ್ರೇಯಾಂಕದಲ್ಲಿ ಕಳೆದ ವಾರ ಅಗ್ರಸ್ಥಾನಕ್ಕೇರಿದ್ದ ರವೀಂದ್ರ ಜಡೇಜಾ ಮತ್ತೆ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್(393) ಅಗ್ರಸ್ಥಾನಕ್ಕೆ ಮರಳಿದ್ದಾರೆ. ಅಶ್ವಿನ್(341) 3ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಬೈ ಬೈ, ಐಪಿಎಲ್ಗೆ ಜೈ ಅಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು