ETV Bharat / sports

ICC ODI Ranking: ಬಾಬರ್​ಗೆ ಅಗ್ರಸ್ಥಾನ, 2ರಲ್ಲಿ ಕೊಹ್ಲಿ: ಟಿ20ಯಲ್ಲಿ 16 ಸ್ಥಾನ ಬಡ್ತಿ ಪಡೆದ ಫ್ಯಾಬಿಯನ್ ಅಲೆನ್ - ಫ್ಯಾಬಿಯನ್ ಅಲೆನ್

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವೆಸ್ಟ್​ ಇಂಡೀಸ್​ ಆಲ್​ರೌಂಡರ್ ಫ್ಯಾಬಿಯನ್ ಅಲೆನ್ ಬೌಲಿಂಗ್ ಶ್ರೇಯಾಂಕದಲ್ಲಿ​ ಬರೋಬ್ಬರಿ 16 ಸ್ಥಾನ ಏರಿಕೆ ಕಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಅಗ್ರ 10 ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ಏಕದಿನ ಶ್ರೇಯಾಂಕ
ಐಸಿಸಿ ಏಕದಿನ ಶ್ರೇಯಾಂಕ
author img

By

Published : Jul 14, 2021, 4:30 PM IST

ದುಬೈ: ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ 158 ರನ್​ಗಳಿಸಿದ್ದ ಅವರು, 8 ರೇಟಿಂಗ್ ಅಂಕವನ್ನು ಹೆಚ್ಚಿಸಿಕೊಂಡಿದ್ದು, ವೃತ್ತಿ ಜೀವನದ ಗರಿಷ್ಠ ರೇಟಿಂಗ್ ಪಾಯಿಂಟ್ ಸಂಪಾದಿಸಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ನ್ಯೂಜಿಲ್ಯಾಂಡ್​ನ ಟ್ರೆಂಟ್ ಬೌಲ್ಟ್​, ಬಾಂಗ್ಲಾದೇಶದ ಮೆಹಿದಿ ಹಸನ್, ಅಫ್ಘಾನಿಸ್ತಾನ ಮುಜೀಬ್ ಅಗ್ರ ಮೂರರಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ 6ನೇ ಸ್ಥಾನ ಪಡೆದಿದ್ದಾರೆ.

ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಅಲೆನ್​ ಭಾರಿ ಏರಿಕೆ

ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವೆಸ್ಟ್​ ಇಂಡೀಸ್​ ಆಲ್​ರೌಂಡರ್ ಫ್ಯಾಬಿಯನ್ ಅಲೆನ್ ಬೌಲಿಂಗ್ ಶ್ರೇಯಾಂಕದಲ್ಲಿ​ ಬರೋಬ್ಬರಿ 16 ಸ್ಥಾನ ಏರಿಕೆ ಕಂಡಿದ್ದು, ಇದೇ ಮೊದಲ ಬಾರಿಗೆ ಅಗ್ರ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.

26 ವರ್ಷದ ಎಡಗೈ ಸ್ಪಿನ್ನರ್​ ಆಸೀಸ್​ ವಿರುದ್ಧದ ಮೊದಲ ಮೂರು ಪಂದ್ಯಗಳಿಂದ ಉತ್ತಮ ಎಕಾನಮಿಯೊಂದಿಗೆ 3 ವಿಕೆಟ್ ಪಡೆದಿದ್ದರು. ಈ ಮೂರು ಪಂದ್ಯಗಳನ್ನು ವೆಸ್ಟ್​ ಇಂಡೀಸ್ ಗೆಲುವು ಸಾಧಿಸಿ ಸರಣಿ ಜಯಸಿತ್ತು.

ವಿಂಡೀಸ್ ತಂಡದ ಶೆಲ್ಡಾನ್ ಕಾಟ್ರೆಲ್ 2 ಸ್ಥಾನ ಮೇಲೇರಿ 22ಕ್ಕೆ, ಡ್ವೇನ್ ಬ್ರಾವೋ 7 ಸ್ಥಾನ ಮೇಲೇರಿ 37ಕ್ಕೆ ಹಾಗೂ ಒಬೆಡ್ ಮಕಾಯ್ 15 ಸ್ಥಾನ ಬಡ್ತಿ ಪಡೆದು 38ನೇ ಶ್ರೇಯಾಂಕ ಪಡೆದಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್​ 7 ಸ್ಥಾನ ಮೇಲೇರಿ 29ನೇ ಶ್ರೇಯಾಂಕ ಪಡೆದಿದ್ದಾರೆ. ದಕ್ಷಿಣ ಆಫ್ರಿಖಾದ ತಬ್ರೈಜ್ ಶಂಸಿ , ಅಫ್ಘಾನಿಸ್ತಾನದ ರಶೀದ್ ಖಾನ್, ಇಂಗ್ಲೆಂಡ್​ನ ಆದಿಲ್ ರಶೀದ್ ಅಗ್ರ ಮೂರರಲ್ಲಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್​ ಮಲನ್ (888), ಬಾಬರ್ ಅಜಮ್ (828), ಆ್ಯರೋನ್ ಫಿಂಚ್ (805), ಡಿವೋನ್ ಕಾನ್ವೆ (774) ಮತ್ತು ವಿರಾಟ್ ಕೊಹ್ಲಿ (762) ಅಗ್ರ 5 ಸ್ಥಾವ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊಹ್ಲಿ, ಆಮ್ಲಾರನ್ನು ಮೀರಿಸಿ ಮತ್ತೊಂದು ದಾಖಲೆ ಬರೆದ ಬಾಬರ್ ಅಜಮ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.