ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ 2021ರ ಐಸಿಸಿ ಏಕದಿನ ತಂಡವನ್ನು ಘೋಷಣೆ ಮಾಡಿದ್ದು, ಈ ತಂಡಕ್ಕೆ ಪಾಕಿಸ್ತಾನದ ಬಾಬರ್ ಅಜಮ್ ನಾಯಕನಾಗಿ ನೇಮಕಗೊಂಡಿದ್ದಾರೆ. ಆದರೆ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡದ ಒಬ್ಬ ಆಟಗಾರನೂ ಅವಕಾಶ ಪಡೆದಿಲ್ಲ.
ಕೋವಿಡ್ 19 ಕಾರಣ ಹಲವಾರು ಟೂರ್ನಮೆಂಟ್ಗಳು ರದ್ದಾದ ಕಾರಣ ಪ್ರಮುಖ ತಂಡಗಳು ಹೆಚ್ಚಿನ ಏಕದಿನ ಪಂದ್ಯಗಳನ್ನಾಡಿಲ್ಲ. ಹಾಗಾಗಿ ಪಾಕಿಸ್ತಾನದ ಇಬ್ಬರು, ದಕ್ಷಿಣ ಆಫ್ರಿಕಾದ ಇಬ್ಬರು, ಶ್ರೀಲಂಕಾದ ಇಬ್ಬರು, ಬಾಂಗ್ಲಾದೇಶದ ಮೂವರು ಮತ್ತು ಐರ್ಲೆಂಡ್ ತಂಡದಿಂದ ಇಬ್ಬರು ಆಟಗಾರರು ಐಸಿಸಿ ವರ್ಷದ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
-
Power-hitters, terrific all-rounders, fiery pacers 🔥
— ICC (@ICC) January 20, 2022 " class="align-text-top noRightClick twitterSection" data="
The 2021 ICC Men's ODI Team of the Year has all the bases covered 🤩 pic.twitter.com/R2SCJl04kQ
">Power-hitters, terrific all-rounders, fiery pacers 🔥
— ICC (@ICC) January 20, 2022
The 2021 ICC Men's ODI Team of the Year has all the bases covered 🤩 pic.twitter.com/R2SCJl04kQPower-hitters, terrific all-rounders, fiery pacers 🔥
— ICC (@ICC) January 20, 2022
The 2021 ICC Men's ODI Team of the Year has all the bases covered 🤩 pic.twitter.com/R2SCJl04kQ
ಇನ್ನೂ ಮಹಿಳಾ ತಂಡದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಹಿರಿಯ ಬೌಲರ್ ಜೂಲನ್ ಗೋಸ್ವಾಮಿ 11ರ ಬಳಗಲ್ಲಿ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಈ ತಂಡದ ನಾಯಕಿಯಾಗಿ ನೇಮಕಗೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಮೂವರು, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡದಿಂದ ಇಬ್ಬರು, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದಿಂದ ತಲಾ ಒಬ್ಬ ಆಟಗಾರ್ತಿಯರು 2021ರ ವರ್ಷದ ಮಹಿಳಾ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
-
Quality galore 🏏
— ICC (@ICC) January 20, 2022 " class="align-text-top noRightClick twitterSection" data="
The 2021 ICC Women's ODI Team of the Year is here 🙌
Details 👉 https://t.co/4JBq3JIolO pic.twitter.com/BKzSo0ET6T
">Quality galore 🏏
— ICC (@ICC) January 20, 2022
The 2021 ICC Women's ODI Team of the Year is here 🙌
Details 👉 https://t.co/4JBq3JIolO pic.twitter.com/BKzSo0ET6TQuality galore 🏏
— ICC (@ICC) January 20, 2022
The 2021 ICC Women's ODI Team of the Year is here 🙌
Details 👉 https://t.co/4JBq3JIolO pic.twitter.com/BKzSo0ET6T
ವರ್ಷದ ಐಸಿಸಿ ಪುರುಷರ ODI ತಂಡ:
ಬಾಬರ್ ಅಜಮ್ (ನಾಯಕ, ಪಾಕಿಸ್ತಾನ), ಪಾಲ್ ಸ್ಟಿರ್ಲಿಂಗ್(ಐರ್ಲೆಂಡ್), ಜನ್ನೆಮನ್ ಮಲನ್(ದಕ್ಷಿಣ ಆಫ್ರಿಕಾ), ಫಖರ್ ಝಮಾನ್(ಪಾಕಿಸ್ತಾನ), ರಾಸ್ಸಿ ವ್ಯಾನ್ ಡೆರ್ ಡಸೆನ್(ದಕ್ಷಿಣ ಆಫ್ರಿಕಾ), ಶಕಿಬ್ ಅಲ್ ಹಸನ್(ಬಾಂಗ್ಲಾದೇಶ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್, ಬಾಂಗ್ಲಾದೇಶ), ವನಿಡು ಹಸರಂಗ(ಶ್ರೀಲಂಕಾ), ಮುಸ್ತಫಿಜುರ್ ರಹಮಾನ್ (ಬಾಂಗ್ಲಾದೇಶ), ಸಿಮಿ ಸಿಂಗ್(ಐರ್ಲೆಂಡ್), ದುಷ್ಮಂತ ಚಮೀರಾ(ಶ್ರೀಲಂಕಾ).
2021 ರ ಐಸಿಸಿ ಮಹಿಳಾ ಏಕದಿನ ತಂಡ:
ಲಿಜೆಲ್ ಲೀ (ದಕ್ಷಿಣ ಆಫ್ರಿಕಾ), ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ), ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್), ಮಿಥಾಲಿ ರಾಜ್ (ಭಾರತ), ಹೀದರ್ ನೈಟ್ (ನಾಯಕಿ, ಇಂಗ್ಲೆಂಡ್), ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್), ಮರಿಝಾನ್ ಕಾಪ್ ( ದಕ್ಷಿಣ ಆಫ್ರಿಕಾ), ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ), ಫಾತಿಮಾ ಸನಾ (ಪಾಕಿಸ್ತಾನ), ಜೂಲನ್ ಗೋಸ್ವಾಮಿ (ಭಾರತ), ಮತ್ತು ಅನಿಸಾ ಮೊಹಮ್ಮದ್ (ವೆಸ್ಟ್ ಇಂಡೀಸ್).
ಇದನ್ನೂ ಓದಿ:ICC Test Rankings: ಆಸ್ಟ್ರೇಲಿಯಾ ಫಸ್ಟ್.. ಮೂರನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ