ಅಬುಧಾಬಿ: ಅತ್ಯುತ್ತುಮ ಟಿ20 ಬೌಲಿಂಗ್ ಬಳಗವನ್ನು ಹೊಂದಿರುವ ಅಫ್ಘಾನಿಸ್ತಾನ ತಂಡ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದೆ. ಇಡೀ ವಿಶ್ವಕಪ್ನಲ್ಲಿ ಎಲ್ಲ ತಂಡಗಳೂ ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಅಫ್ಘಾನಿಸ್ತಾನ ಮಾತ್ರ ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುತ್ತಿದೆ.
ಈ ಪಂದ್ಯ ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಅಫ್ಘನ್ ಅವರಿಗೆ ವಿದಾಯದ ಪಂದ್ಯವಾಗಿದೆ. ಅವರು ನಮೀಬಿಯಾ ವಿರುದ್ಧದ ಪಂದ್ಯದ ನಂತರ ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು.
ಇನ್ನು ಈ ಪಂದ್ಯದಲ್ಲಿ ಗಾಯಗೊಂಡಿರುವ ಪ್ರಮುಖ ಬೌಲರ್ ಮುಜೀಬ್ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ವೇಗಿ ಹಮೀದ್ ಹಸನ್ ಅವರಿಗೆ ಅವಕಾಶ ನೀಡಲಾಗಿದೆ.
ಚೊಚ್ಚಲ ಟೂರ್ನಿಯಲ್ಲೇ ಸೂಪರ್ 12 ಪ್ರವೇಶಿಸಿರುವ ನಮೀಬಿಯಾ ಸೆಮಿಫೈನಲ್ಸ್ ಆಸೆಯನ್ನಿಟ್ಟುಕೊಳ್ಳದಿದ್ದರೂ ಅಚ್ಚರಿಯ ಫಲಿತಾಂಶ ನೀಡಲು ಎದುರು ನೋಡುತ್ತಿದೆ. ಇಂದು ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.
ನಮೀಬಿಯಾ (ಪ್ಲೇಯಿಂಗ್ XI): ಕ್ರೇಗ್ ವಿಲಿಯಮ್ಸ್, ಮೈಕೆಲ್ ವ್ಯಾನ್ ಲಿಂಗೆನ್, ಜೇನ್ ಗ್ರೀನ್ (ವಿಕೀ), ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಡೇವಿಡ್ ವೀಸ್, ಜೆಜೆ ಸ್ಮಿತ್, ಜಾನ್ ಫ್ರಿಲಿಂಕ್, ಪಿಕ್ಕಿ ಯಾ ಫ್ರಾನ್ಸ್, ಜಾನ್ ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕಾಲ್ಟ್ಜ್
ಅಫ್ಘಾನಿಸ್ತಾನ (ಪ್ಲೇಯಿಂಗ್ XI): ಹಜರತುಲ್ಲಾ ಝಾಜೈ, ಮೊಹಮ್ಮದ್ ಶಹಜಾದ್(ವಿಕೀ), ರಹಮಾನುಲ್ಲಾ ಗುರ್ಬಾಜ್, ನಜೀಬುಲ್ಲಾ ಜಾದ್ರನ್, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬಿ(ನಾಯಕ), ಗುಲ್ಬದಿನ್ ನೈಬ್, ರಶೀದ್ ಖಾನ್, ಕರೀಂ ಜನತ್, ಹಮೀದ್ ಹಸನ್, ನವೀನ್-ಉಲ್-ಹಕ್
ಇದನ್ನು ಓದಿ: ವಿರಾಟ್ vs ವಿಲಿಯಮ್ಸನ್: ಇಂದಿನ ಪಂದ್ಯ ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಹಾದಿ ಸುಗಮ