ದುಬೈ : ವಿಶ್ವಕಪ್ ಟೂರ್ನಿಯ ಗ್ರೂಪ್ 2 ಸೂಪರ್ 12 ಹಂತದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಆಫ್ಘನ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಫ್ಘನ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 147ರನ್ಗಳಸಿದ್ದು, ಪಾಕ್ ತಂಡಕ್ಕೆ 148 ರನ್ಗಳ ಗುರಿ ನೀಡಿದೆ.
ಆಫ್ಘನ್ ಪರ ಓಪನರ್ ಆಗಿ ಕಣಕ್ಕಿಳಿದ ಹಜರುತುಲ್ಲಾ ಝಾಝಿ ಹಾಗೂ ಮೊಹಮ್ಮದ್ ಶಹಜಾದ್ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲವಾಯಿತು. ಝಾಝಿ ಮೊದಲ ಓವರ್ನಲ್ಲಿ ಶೂನ್ಯಕ್ಕೆ ಶಹೀನ್ ಅಫ್ರೀದಿಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಶಹಜಾದ್ ಕೂಡಾ ಕೇವಲ 8 ರನ್ಗಳಿಸ ಔಟಾದ್ರು. ನಂತರ ಯಾವೊಬ್ಬ ಬ್ಯಾಟರ್ ಕಡೆಯಿಂದ ಉತ್ತಮ ಆಟ ಬರಲಿಲ್ಲ.
ರಹಮಾನುಲ್ಲಾ ಗುರ್ಬಾಜ್ 10,ಅಸ್ಗರ್ ಅಫಘಾನ್ 10, ಕರೀಂ ಜನತ್ 15, ಹಾಗೂ ನಜೀಬುಲ್ಲಾ ಜದ್ರಾನ್ 22 ರನ್ಗಳಿಸಿ ಔಟಾದರು. ಆನಂತರ ಒಂದಾದ ಮೊಹಮ್ಮದ್ ನಬಿ ಹಾಗೂ ಗುಲ್ಬದಿನ್ ನಯಿಬ್ ಜೋಡಿ ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾದರು. ಅಂತಿಮ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಮೊಹಮ್ಮದ್ ನಬಿ 35 ಮತ್ತು ಗುಲ್ಬದಿನ್ ನಯಿಬ್ 35* ರನ್ಗಳಿಸುವ ಮೂಲಕ ತಂಡದ ಮೊತ್ತವನ್ನ 140ರ ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 147ರನ್ಗಳಿಸಿತು.
ಪಾಕ್ ಪರ ಉತ್ತಮ ದಾಳಿ ನಡೆಸಿದ ಇಮಾದ್ ವಾಸೀಂ 2, ಶಹೀನ್ ಅಫ್ರೀದಿ ,ಹ್ಯಾರೀಸ್ ರೌಫ್ ,ಹಸನ್ ಅಲಿ, ಶದಬ್ದ್ ಖಾನ್ ತಲಾ 1 ವಿಕೆಟ್ ಪಡೆದು ಮಿಂಚಿದರು.