ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಗ್ಲೆಂಡ್ ನೀಡಿದ್ದ 338 ರನ್ಗಳ ಬೃಹತ್ ಗುರಿ ನೀಡಿದಾಗಲೇ ಪಾಕಿಸ್ತಾನ ತಂಡ ವಿಶ್ವಕಪ್ನ ಸೆಮೀಸ್ ರೇಸ್ನಿಂದ ಹೊರ ಬಿದ್ದಿತ್ತು. ಮೊದಲ ಎರಡು ವಿಕೆಟ್ ಪತನದ ನಂತರ ಐಸಿಸಿ ಅಧಿಕೃತವಾಗಿ ಬಾಬರ್ ಪಡೆ ವಿಶ್ವಕಪ್ ಸೆಮೀಸ್ ರೇಸ್ನಿಂದ ಹೊರಬಿದ್ದಿದೆ ಎಂದು ಪ್ರಕಟಿಸಿತು. ಪಾಕಿಸ್ತಾನ ವಿರುದ್ಧ ಗೆದ್ದ ಇಂಗ್ಲೆಂಡ್ ಅಂಕ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಭದ್ರ ಪಡಿಸಿಕೊಂಡು, 2025ರ ಚಾಂಪಿಯನ್ಸ್ ಟ್ರೋಫಿಗೆ ತನ್ನ ಸ್ಥಾನವನ್ನು ಖಾತರಿ ಪಡಿಸಿಕೊಂಡಿತು.
ವಿಶ್ವಕಪ್ ಸೆಮೀಸ್ ಪ್ರವೇಶಕ್ಕೆ ಅಚ್ಚರಿಯ ಗೆಲುವನ್ನು ಎದುರು ನೋಡುತ್ತಿದ್ದ ಪಾಕಿಸ್ತಾನ ಟಾಸ್ ಸೋತಿತ್ತು. ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಜಾನಿ ಬೈರ್‌ಸ್ಟೋವ್ (59), ಜೋ ರೂಟ್ (60) ಮತ್ತು ಬೆನ್ ಸ್ಟೋಕ್ಸ್ (84) ಆಟದ ನೆರವಿನಿಂದ 50 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 337 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 43.3 ಓವರ್ಗೆ 244 ರನ್ ಗಳಿಸಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದ ಇಂಗ್ಲೆಂಡ್ 93 ರನ್ಗಳ ಗೆಲುವು ದಾಖಲಿಸಿತು.
-
We end our 2023 World Cup campaign with a win ✅ #EnglandCricket | #CWC23 pic.twitter.com/82QB4hxbrv
— England Cricket (@englandcricket) November 11, 2023 " class="align-text-top noRightClick twitterSection" data="
">We end our 2023 World Cup campaign with a win ✅ #EnglandCricket | #CWC23 pic.twitter.com/82QB4hxbrv
— England Cricket (@englandcricket) November 11, 2023We end our 2023 World Cup campaign with a win ✅ #EnglandCricket | #CWC23 pic.twitter.com/82QB4hxbrv
— England Cricket (@englandcricket) November 11, 2023
ಬಾಬರ್ ನಿರೀಕ್ಷೆ ಹುಸಿಗೊಳಿಸಿದ ಫಖರ್: ರನ್ರೇಟ್ ಒತ್ತಡದಲ್ಲಿ ಬೃಹತ್ ಮೊತ್ತವನ್ನು ಬೇಗ ಭೇದಿಸುವ ಬರದಲ್ಲಿದ್ದ ಪಾಕಿಸ್ತಾನ ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ಫಾಖರ್ ಜಮಾನ್ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ, ಫಾಖರ್ ಜಮಾನ್ 9 ಬಾಲ್ ಆಡಿ 1 ರನ್ಗೆ ವಿಕೆಟ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಇದಕ್ಕೂ ಮುನ್ನ ಅಬ್ದುಲ್ಲಾ ಶಫೀಕ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಪಾಕಿಸ್ತಾನ ವಿಶ್ವಕಪ್ನಿಂದ ಅಧಿಕೃತವಾಗಿ ಹೊರಬಿತ್ತು.
ವಿಶ್ವಕಪ್ನಲ್ಲಿ ಪಾಕ್ ನಾಯಕ ಫ್ಲಾಫ್: ಪಾಕಿಸ್ತಾನ ನಾಯಕ ಬಾಬರ್ ಅಜಮ್ ತವರು ಮೈದಾನದಲ್ಲಿ ಸಣ್ಣ ಪುಟ್ಟ ತಂಡಗಳ ವಿರುದ್ಧ ಶತಕ ಗಳಿಸಿದ್ದರು. ಆದರೆ ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ದೊಡ್ಡ ತಂಡಗಳ ಮುಂದೆ ರನ್ ಮಾಡುವಲ್ಲಿ ಎಡವಿದರು. ಇಂದು ಜವಾಬ್ದಾರಿಯುತವಾಗಿ ಆಡಬೇಕಿದ್ದ ಬಾಬರ್ 38ಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ದಾರಿ ಹಿಡಿದರು. ನಂತರ ಅವರ ಬೆನ್ನಲ್ಲೇ ಮೊಹಮ್ಮದ್ ರಿಜ್ವಾನ್ (36) ಮತ್ತು ಸೌದ್ ಶಕೀಲ್ (29) ಸಹ ಔಟ್ ಆದರು.
- " class="align-text-top noRightClick twitterSection" data="">
ಅಘಾ ಸಲ್ಮಾನ್ ಗೆಲುವಿನ ಪ್ರಯತ್ನ: ಮಧ್ಯಮ ಕ್ರಮಾಂಕದಲ್ಲಿ ಅಘಾ ಸಲ್ಮಾನ್ (51) ತಂಡ ಸೆಮೀಸ್ಗೆ ಪ್ರವೇಶಿಸದಿದ್ದರೂ ಗೆಲ್ಲಲಿ ಎಂದು ಹೋರಾಡಿದರು. ಆದರೆ ಅವರ ಹೋರಾಟ ಅರ್ಧಶತಕಕ್ಕೆ ನಿಂತಿತು. ಕೊನೆಯಲ್ಲಿ ಗೆಲುವಿಗಾಗಿ ಇಫ್ತಿಕರ್ ಅಹ್ಮದ್ (3), ಶಾದಾಬ್ ಖಾನ್ (4), ಶಾಹೀನ್ ಅಫ್ರಿದಿ (25) ಮತ್ತು ಹ್ಯಾರಿಸ್ ರೌಫ್ (35) ಗೆಲುವಿನ ಹುಡುಕಾಟ ಮಾಡಿದರಾದರೂ ಆಂಗ್ಲ ಬೌಲರ್ಗಳ ಮುಂದೆ ನಡೆಯಲಿಲ್ಲ.
ಆಂಗ್ಲರ ಪರ 3 ವಿಕೆಟ್ ಪಡೆದ ಡೇವಿಡ್ ವಿಲ್ಲಿ ಪಂದ್ಯ ಶ್ರೇಷ್ಠ ಪ್ರಸ್ತಿಗೆ ಭಾಜನರಾದರು. ಉಳಿದಂತೆ ಇಂಗ್ಲೆಂಡ್ ಪರ ಆದಿಲ್ ರಶೀದ್, ಗುಸ್ ಅಟ್ಕಿನ್ಸನ್, ಮೊಯಿನ್ ಅಲಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ತಂಡದಲ್ಲಿ ಯಾರಿಗೂ ವಿಶ್ರಾಂತಿ ಇಲ್ಲ, ಅದೇ ತಂಡ ಮುಂದುವರೆಯಲಿದೆ: ಕೋಚ್ ದ್ರಾವಿಡ್