ETV Bharat / sports

ಕೆಎಲ್​ ರಾಹುಲ್​ಗೆ ನಾಯಕತ್ವ ಕೌಶಲ್ಯಗಳ ಕೊರತೆಗಳಿವೆ: ಅಜಯ್ ಜಡೇಜಾ - ರಾಹುಲ್​ಗೆ ನಾಯಕತ್ವದ ಗುಣವಿಲ್ಲ

ಕಳೆದ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದರೂ ರಾಹುಲ್​ ಒಮ್ಮೆಯೂ ಪ್ಲೇ ಆಫ್​ ತಲುಪಲು ಸಾಧ್ಯವಾಗಿಲ್ಲ. ಅವರ ನಾಯಕತ್ವದಲ್ಲಿ ಪಂಜಾಬ್​ 11ರಲ್ಲಿ ಗೆಲುವು ಸಾಧಿಸಿದ್ದರೆ, 14 ಪಂದ್ಯಗಳಲ್ಲಿ ಸೋಲು ಕಂಡಿದೆ. 2020ರಲ್ಲಿ 6ನೇ ಸ್ಥಾನ ಪಡೆದರೆ, ಈ ಬಾರಿಯೂ ಆಡಿರುವ 13 ಪಂದ್ಯಗಳಲ್ಲಿ 5ರಲ್ಲಿ ಮಾತ್ರ ಜಯ ಸಾಧಿಸಿ ಟೂರ್ನಿಯಿಂದ ಹೊರಬಿದ್ದಿದೆ.

KL Rahul captainship
ಕೆಎಲ್ ರಾಹುಲ್ ನಾಯಕತ್ವ
author img

By

Published : Oct 4, 2021, 4:25 PM IST

ಮುಂಬೈ: ಪಂಜಾಬ್​ ಕಿಂಗ್ಸ್ ತಂಡದ ನಾಯಕ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಅವರಿಗೆ ಸಾಕಷ್ಟು ನಾಯಕತ್ವ ಕೌಶಲ್ಯಗಳ ಕೊರತೆಯಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವಿಶ್ಲೇಷಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದರೂ ರಾಹುಲ್​ ಒಮ್ಮೆಯೂ ಪ್ಲೇ ಆಫ್​ ತಲುಪಲು ಸಾಧ್ಯವಾಗಿಲ್ಲ. ಅವರ ನಾಯಕತ್ವದಲ್ಲಿ ಪಂಜಾಬ್​ 11ರಲ್ಲಿ ಗೆಲುವು ಸಾಧಿಸಿದ್ದರೆ, 14 ಪಂದ್ಯಗಳಲ್ಲಿ ಸೋಲು ಕಂಡಿದೆ. 2020ರಲ್ಲಿ 6ನೇ ಸ್ಥಾನ ಪಡೆದರೆ, ಈ ಬಾರಿಯೂ ಆಡಿರುವ 13 ಪಂದ್ಯಗಳಲ್ಲಿ 5ರಲ್ಲಿ ಮಾತ್ರ ಜಯ ಸಾಧಿಸಿ ಟೂರ್ನಿಯಿಂದ ಹೊರಬಿದ್ದಿದೆ. ಕರ್ನಾಟಕ ಬ್ಯಾಟರ್​ ರಾಹುಲ್​ ನಾಯಕನಾಗಿ ತುಂಬಾ ಅನುಸರಿಸುವ ಗುಣಕ್ಕೆ ಮಾರು ಹೋಗಿದ್ದಾರೆ. ಮೃದುವಾಗಿ ಮಾತನಾಡುತ್ತಾರೆ ಅವರಲ್ಲಿ ಚುರುಕುತನವಿಲ್ಲ ಎಂದು ಜಡೇಜಾ ಅಭಿಪ್ರಾಯ ಪಟ್ಟಿದ್ದಾರೆ.

" ರಾಹುಲ್ ಕಳೆದ ಎರಡು ಆವೃತ್ತಿಗಳಲ್ಲಿ ಪಂಜಾಬ್​ ಕಿಂಗ್ಸ್​ ತಂಡವನ್ನು ಮುನ್ನಡೆಸಿರುವುದನ್ನು ನೋಡಿದ್ದೇವೆ. ಆದರೆ, ನನಗೆ ಅವರು ಒಬ್ಬ ನಿಜವಾದ ಲೀಡರ್​ ಎಂಬ ಭಾವನೆ ಯಾವಾಗಲೂ ಅನ್ನಿಸಿಲ್ಲ. ಈ ತಂಡವೂ ಉತ್ತಮವಾಗಿ ಅಥವಾ ಕೆಟ್ಟದಾಗಿ ಪ್ರದರ್ಶನ ತೋರಿದಾಗ ನಮಗೆ ಆಡುವ 11ರ ಬಳಗವನ್ನು ಕೆಎಲ್​ ರಾಹುಲ್ ಆಯ್ಕೆ ಮಾಡಿರಬಹುದು ಎಂದೂ ಅನ್ನಿಸುವುದಿಲ್ಲ, ನಿಮಗೆ ಅನ್ನಿಸುತ್ತದೆಯೇ?" ಎಂದು ಕ್ರಿಕ್​ ಬಜ್​ ಸಂವಾದದ ವೇಳೆ ತಿಳಿಸಿದ್ದಾರೆ.

" ಭಾರತದ ನಾಯಕನಾಗಬೇಕು ಎನ್ನುವವರು ತಮ್ಮದೇ ಆದ ಫಿಲಾಸಫಿ ಹೊಂದಿರುತ್ತಾರೆ. ಆದರೆ, ಕೆಎಲ್​ ರಾಹುಲ್​ರಲ್ಲಿ ಅಂತಹ ಯಾವುದೇ ಗುಣವನ್ನು ನಾನು ನೋಡಿಲ್ಲ. ಏಕೆಂದರೆ ಅವರೂ ತುಂಬಾ ಮೃದುವಾಗಿ ಮಾತನಾಡುತ್ತಾರೆ. ಎಲ್ಲದರಲ್ಲೂ ಹೊಂದಿಕೊಳ್ಳಲು ಬಯಸುತ್ತಾರೆ. ನಾಯಕನಾಗಿ ಎಲ್ಲವನ್ನು ಹೊಂದಿಕೊಳ್ಳುವುದಕ್ಕೆ ಹೋಗುವವರೂ ದೀರ್ಘಕಾಲದವರಗೆ ನಾಯಕನಾಗುತ್ತಾರೆ. ಆದರೆ, ಈ ಗುಣದ ಜೊತೆಗೆ ತಮ್ಮದೇ ಆದ ಫಿಲಾಸಫಿಯನ್ನು ಆತ ಹೊಂದಿರಬೇಕು. ಏಕೆಂದರೆ ಐಪಿಎಲ್ ತಂಡದ ನಾಯಕತ್ವ ಮತ್ತು ಭಾರತ ತಂಡದ ನಾಯಕತ್ವದ ನಡುವೆ ಬಹಳ ವ್ಯತ್ಯಾಸವಿದೆ" ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್​ ಮೈದಾನದಲ್ಲೇ ಲೆಜೆಂಡರಿ ನಾಯಕ ಎಂಎಸ್​ ಧೋನಿಯಷ್ಟೇ ತಾಳ್ಮೆಯಿಂದಿರುತ್ತಾರೆ. ಅದು ಒಳ್ಳೆಯ ವಿಷಯ. ಆದರೆ ನೀವೊಬ್ಬ ನಾಯಕನಾಗಬೇಕಾದರೆ ನಿಮ್ಮ ನಿರ್ಧಾರಗಳ ಬಗ್ಗೆ ಚರ್ಚಿಸುತ್ತಿರಬೇಕು. ಆದರೆ, ರಾಹುಲ್​ ತಂಡದ ಆಯ್ಕೆ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಅವರು ತಂಡವನ್ನು ನಡೆಸಲು ಬೇರೆಯವರಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ.

ಇದನ್ನು ಓದಿ:ಗುಡ್​ನ್ಯೂಸ್​: ಮೈದಾನದಲ್ಲಿ ಕುಳಿತುಕೊಂಡು T 20 ವಿಶ್ವಕಪ್​ ವೀಕ್ಷಣೆಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.