ದುಬೈ: ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಐಸಿಸಿ ಬಿಡುಗಡೆ ಮಾಡಿದ ಪುರುಷರ T20I ಆಟಗಾರರ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನವನ್ನು ಪಡೆದಿದ್ದಾರೆ. ಭಾರತದ ಸೂರ್ಯಕುಮಾರ್ ಯಾದವ್ ಅವರು ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಈ ವಾರವೂ ಬಲಪಡಿಸಿಕೊಂಡಿದ್ದಾರೆ.
ICC ಪುರುಷರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 23 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದಿದ್ದ ಹಸರಂಗ, ತಮ್ಮ ಒಟ್ಟು 5 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಸ್ಥಾನದಲ್ಲಿದ್ದ ಅಫ್ಘಾನಿಸ್ತಾನದ ಮತ್ತೊಬ್ಬ ಲೆಗ್-ಸ್ಪಿನ್ನರ್ ರಶೀದ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಹಸರಂಗ ಮೊದಲ ಬಾರಿಗೆ ಅಗ್ರಸ್ಥಾನವನ್ನು ವಶಪಡಿಸಿಕೊಂಡಿದ್ದರು.
ಟಿ20 ವಿಶ್ವಕಪ್‌ನಲ್ಲಿ 225 ರನ್ ಕಲೆಹಾಕಿರುವ ಸೂರ್ಯಕುಮಾರ್ ಯಾದವ್, ಬಾಂಗ್ಲಾದೇಶ ವಿರುದ್ಧ 30 ರನ್, ಜಿಂಬಾಬ್ವೆ ವಿರುದ್ಧ 25 ಎಸೆತಗಳಲ್ಲಿ 61 ರನ್ ಸಿಡಿಸಿದ್ದರು. ಒಟ್ಟು 6 ಪಾಯಿಂಟ್ಸ್ ಏರಿಕೆಗೊಂಡು ತನ್ನ ವೃತ್ತಿಜೀವನದ ಬೆಸ್ಟ್ 869 ಪಾಯಿಂಟ್ಸ್ ಕಲೆಹಾಕಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ಗಿಂತ 39 ಪಾಯಿಂಟ್ಸ್ ಹೆಚ್ಚು ಗಳಿಸಿದ್ದಾರೆ.
ಸೂರ್ಯಕುಮಾರ್‌ಗಿಂತ 90 ಪಾಯಿಂಟ್ಸ್ ಕಡಿಮೆ ಇರುವ ನ್ಯೂಜಿಲ್ಯಾಂಡ್ ಆಟಗಾರ ಡೆವೊನ್ ಕಾನ್ವೆ 3ನೇ ಸ್ಥಾನದಲ್ಲಿದ್ದು, ಈತನಿಗಿಂತ 7 ಪಾಯಿಂಟ್ಸ್ ಕಡಿಮೆ ಇರುವ ಪಾಕ್ ತಂಡದ ನಾಯಕ ಬಾಬರ್ ಅಜಮ್ 4ನೇ ಸ್ಥಾನ ಪಡೆದಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ತಲಾ ಎರಡು ವಿಕೆಟ್ ಪಡೆದ ಆಸ್ಟ್ರೇಲಿಯಾ ಬೌಲರ್‌ಗಳಾದ ಜೋಶ್ ಹೇಜಲ್‌ವುಡ್ ಮತ್ತು ಆಡಮ್ ಝಂಪಾ ಅವರು ಅಗ್ರ 10 ರೊಳಗೆ ಏರಿದ್ದಾರೆ. ಹ್ಯಾಜಲ್‌ವುಡ್ ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದರೆ, ಝಂಪಾ ಏಳನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡಿನ ಸ್ಪಿನ್ನರ್ ಆದಿಲ್ ರಶೀದ್ ಕೂಡ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದು, ಭಾರತದ ರವಿಚಂದ್ರನ್ ಅಶ್ವಿನ್ ಜಿಂಬಾಬ್ವೆಯ ಮೂರು ವಿಕೆಟ್ ಕಬಳಿಸಿ 5 ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದ್ದಾರೆ.
-
Hasaranga regains top spot in ICC Men's T20I Player Rankings
— ANI Digital (@ani_digital) November 9, 2022 " class="align-text-top noRightClick twitterSection" data="
Read @ANI Story | https://t.co/dDsUDzX2vn#ICCrankings #Suryakumar #WaninduHasaranga pic.twitter.com/S2lQcnCif1
">Hasaranga regains top spot in ICC Men's T20I Player Rankings
— ANI Digital (@ani_digital) November 9, 2022
Read @ANI Story | https://t.co/dDsUDzX2vn#ICCrankings #Suryakumar #WaninduHasaranga pic.twitter.com/S2lQcnCif1Hasaranga regains top spot in ICC Men's T20I Player Rankings
— ANI Digital (@ani_digital) November 9, 2022
Read @ANI Story | https://t.co/dDsUDzX2vn#ICCrankings #Suryakumar #WaninduHasaranga pic.twitter.com/S2lQcnCif1
ಎಡಗೈ ವೇಗದ ಬೌಲರ್‌ಗಳಾದ ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ ಮತ್ತು ಭಾರತದ ಅರ್ಷದೀಪ್ ಸಿಂಗ್ ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದ ಶಾಹೀನ್, 20 ಸ್ಥಾನ ಮೇಲೇರಿ 22ನೇ ಸ್ಥಾನಕ್ಕೆ ತಲುಪಿದ್ದಾರೆ. ನಾಲ್ಕು ಸ್ಲಾಟ್‌ಗಳನ್ನು ಗಳಿಸಿದ ಅರ್ಶ್‌ದೀಪ್ ವೃತ್ತಿಜೀವನದ ಅತ್ಯುತ್ತಮ 23ನೇ ಸ್ಥಾನದಲ್ಲಿ ಶಾಹೀನ್‌ಗಿಂತ ಒಂದು ಸ್ಥಾನ ಹಿಂದಿದ್ದಾರೆ.
ಬಾಂಗ್ಲಾದೇಶದ ನಸುಮ್ ಅಹ್ಮದ್ 26ನೇ ಸ್ಥಾನ, ನ್ಯೂಜಿಲ್ಯಾಂಡ್ನ ಲಾಕಿ ಫರ್ಗುಸನ್ 30ನೇ ಸ್ಥಾನ, ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ 37ನೇ ಸ್ಥಾನ ಮತ್ತು ಅಫ್ಘಾನಿಸ್ತಾನದ ನವೀನ್ ಉಲ್ ಹಕ್ 41ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಇಂಗ್ಲೆಂಡ್ ವಿರುದ್ಧ 67 ರನ್ ಗಳಿಸಿ 10ನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲ್ಯಾಂಡ್ನ ಫಿನ್ ಅಲೆನ್ 6 ಸ್ಥಾನಗಳ ಪ್ರಗತಿಯೊಂದಿಗೆ 15ನೇ ಸ್ಥಾನಕ್ಕೆ ತಲುಪಿದ್ದಾರೆ. ಇನ್ನು ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಆಟಗಾರ ಕೆಎಲ್ ರಾಹುಲ್ 5 ಸ್ಥಾನಗಳನ್ನು ಮೇಲಕ್ಕೆತ್ತಿ 16ನೇ ಸ್ಥಾನಕ್ಕೆ ತಲುಪಿದ್ದಾರೆ.
ಬಾಂಗ್ಲಾದೇಶದ ಲಿಟ್ಟನ್ ದಾಸ್ (5 ಸ್ಥಾನ ಮೇಲೇರಿ 31ನೇ ಸ್ಥಾನಕ್ಕೆ) ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ (7 ಸ್ಥಾನ ಮೇಲೇರಿ 33ನೇ ಸ್ಥಾನ) ಕೂಡ ಮೇಲಕ್ಕೇರಿದ್ದು, ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಶ್ರೀಲಂಕಾ ವಿರುದ್ಧ 47 ರನ್ ಗಳಿಸಿ 36 ಸ್ಥಾನ ಮೇಲೇರಿ 34ನೇ ಸ್ಥಾನ ಪಡೆದಿದ್ದಾರೆ.
ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ವೃತ್ತಿ ಜೀವನದ ಬೆಸ್ಟ್ ಶ್ರೇಯಾಂಕ ತಲುಪಿದ್ದು, ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ರಾಜಾ 10 ವಿಕೆಟ್ ಪಡೆದಿದ್ದಲ್ಲದೆ, 219 ರನ್ ಕಲೆಹಾಕಿದರು.
ಇದನ್ನೂ ಓದಿ: ಇಂಗ್ಲೆಂಡ್ ತಂಡವನ್ನು ಈಗಾಗಲೇ ಸೋಲಿಸಿದ್ದೇವೆ: ಸೆಮಿಫೈನಲ್ ಗೆಲ್ಲುವ ಆತ್ಮವಿಶ್ವಾಸದಲ್ಲಿ ರೋಹಿತ್ ಶರ್ಮಾ