ಬೆಂಗಳೂರು: ಕಳೆದ ಐಪಿಎಲ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಾನು ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡಿದ್ದು, ನನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು ಎಂದು ವೇಗಿ ಹರ್ಷಲ್ ಪಟೇಲ್ ಹೇಳಿದ್ದಾರೆ.
ಹರ್ಷಲ್ ಪಟೇಲ್ 2020ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. 2021 ಆವೃತ್ತಿ ವೇಳೆ ಡೆಲ್ಲಿ ಅವರನ್ನು ಆರ್ಸಿಬಿಗೆ ವರ್ಗಾವಣೆ ಮಾಡಿತ್ತು. ಕಳೆದ ಆವೃತ್ತಿಯಲ್ಲಿ ಪಟೇಲ್ 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು.
ನಾನು ನನ್ನ ಐಪಿಎಲ್ ಕೆರಿಯರ್ನ ಆರಂಭದ 6 ವರ್ಷಗಳನ್ನು ಆರ್ಸಿಬಿಯಲ್ಲೇ ಕಳೆದಿದ್ದೆ. ನಂತರ ಮೂರು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದೆ. ಅವರು ನನ್ನನ್ನು ಕಳೆದ ವರ್ಷ ಆರ್ಸಿಬಿಗೆ ಟ್ರೇಡ್ ಮಾಡಿದ್ದರು. ಆದರೆ, ಇದು ನನಗೆ ಆಶ್ಚರ್ಯ ತಂದಿತ್ತು. ಡೆಲ್ಲಿ ನನ್ನನ್ನು ಬ್ಯಾಕ್ಅಪ್ ಆಯ್ಕೆಯಾಗಿ ಇಟ್ಟುಕೊಳ್ಳಲಿದೆ ಎಂದು ನಾನು ಭಾವಿಸಿದ್ದೆ ಎಂದು ಹರ್ಷಲ್ ಪಟೇಲ್ ಆರ್ಸಿಬಿ ಪೋಡ್ಕಾಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ನನ್ನನ್ನು ಅವರು ಬಿಡುತ್ತಾರೆ ಎಂದು ಭಾವಿಸಿರಲಿಲ್ಲ, ಆದರೆ ನನ್ನ ಅದೃಷ್ಟ ಅವರು ನನ್ನನ್ನು ಬಿಡಲು ನಿರ್ಧರಿಸಿದರು. ನಾನು ಕೇಳಿದಂತೆ ಆರ್ಸಿಬಿ ಕೂಡ ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಉತ್ಸುಕವಾಗಿತ್ತಿತ್ತಂತೆ. ನಂತರ ನನಗೆ ಡೆತ್ ಬೌಲರ್ ಪಾತ್ರವನ್ನು ನೀಡಿದರು. ಈ ನಿರ್ಧಾರ, ಖಂಡಿತ ನನ್ನ ವೃತ್ತಿ ಜೀವನವನ್ನೇ ಬದಲಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.
2021ರ ಆವೃತ್ತಿಯಲ್ಲಿ 32 ವಿಕೆಟ್ ಪಡೆದುಕೊಂಡಿದ್ದರೂ, ಆರ್ಸಿಬಿ ಹರ್ಷಲ್ರನ್ನು ರಿಟೈನ್ ಮಾಡಿಕೊಂಡಿರಲಿಲ್ಲ. ಆದರೆ ಮೆಗಾ ಹರಾಜಿನಲ್ಲಿ ಬರೋಬ್ಬರಿ 10.75 ಕೋಟಿ ರೂ ನೀಡಿ ಖರೀದಿಸಿತು.
ಇದನ್ನೂ ಓದಿ:ಆರ್ಸಿಬಿಗೆ ಆಘಾತಕಾರಿ ಸುದ್ದಿ ನೀಡಿದ ಗ್ಲೇನ್ ಮ್ಯಾಕ್ಸ್ವೆಲ್