ಢಾಕಾ: ಬಾಂಗ್ಲಾದೇಶದ ಇಬ್ಬರು ಮಾಜಿ ಕ್ರಿಕೆಟಿಗರು ಒಂದೇ ದಿನ ಸಾವಿಗೀಡಾಗಿದ್ದಾರೆ. ಬಾಂಗ್ಲಾದೇಶದ ಮೊದಲ ಏಕದಿನ ತಂಡದ ಸದಸ್ಯರಾಗಿದ್ದ ಸಮಿಯುರ್ ರೆಹ್ಮಾನ್(69) ಮತ್ತು ಮುಷರಫ್ ಹೊಸೈನ್(40) ಮಂಗಳವಾರ ನಿಧನರಾಗಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ಬ್ರೈನ್ ಟ್ಯೂಮರ್ಗೆ ಬಲಿಯಾಗಿದ್ದಾರೆ.
ರೆಹ್ಮಾನ್ ಮಂಗಳವಾರ ಢಾಕಾದಲ್ಲಿ ಕೊನೆಯುಸಿರೆಳೆದರು. ಬ್ರೈನ್ ಟ್ಯೂಮರ್ ಜೊತೆಗೆ ಡೆಮೆಂಟಿಯ ಎಂಬ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಗರದಲ್ಲೇ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾದರು. 1986ರಲ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ರೆಹ್ಮಾನ್ ಬಾಂಗ್ಲಾದೇಶವನ್ನು ಪ್ರತಿನಿಧಿಸಿದ್ದರು. ಬೌಲರ್ ಆಗಿದ್ದ ಅವರು 2 ಪಂದ್ಯಗಳಲ್ಲಿ ಆಡಿದ್ದರೂ ಸಹಾ ಒಂದು ವಿಕೆಟ್ ಪಡೆದಿರಲಿಲ್ಲ. ಕ್ರಿಕೆಟಿಗನಾಗಿ ಯಶಸ್ಸು ಕಾಣದ ರೆಹ್ಮಾನ್ ನಂತರ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಬಾಂಗ್ಲಾದೇಶದ ಪರ 5 ಏಕದಿನ ಪಂದ್ಯಗಳನ್ನಾಡಿದ್ದ 40 ವರ್ಷದ ಮುಷರಫ್ ಹೊಸೈನ್ ರುಬೆಲ್ ಕೂಡ ಬ್ರೈನ್ ಟ್ಯೂಮರ್ನಿಂದಲೇ ಮಂಗಳವಾರ ನಿಧನರಾಗಿದ್ದಾರೆ. ಮೂರು ವರ್ಷಗಳಿಂದ ಬ್ರೈನ್ ಟ್ಯೂಮರ್ನಿಂದ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ಮುಷರಫ್ ಸಿಂಗಾಪುರ್, ಭಾರತದಂತಹ ದೇಶಗಳ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ದುರಾದೃಷ್ಟವಶಾತ್ ಆರೋಗ್ಯ ಹದಗೆಟ್ಟು ಇಂದು ನಿಧನರಾಗಿದ್ದಾರೆ.
ಎಡಗೈ ಸ್ಪಿನ್ನರ್ ಆಗಿದ್ದ ಅವರು ಬಾಂಗ್ಲಾದೇಶದ ಪರ 5 ಏಕದಿನ ಪಂದ್ಯಗಳನ್ನಾಡಿ 28 ರನ್ ಜೊತೆಗೆ 4 ವಿಕೆಟ್ ಪಡೆದಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಹೆಚ್ಚಿನ ಸಾಧನೆ ಮಾಡಿದ್ದರು. ದೇಶಿ ಕ್ರಿಕೆಟ್ನಲ್ಲಿ ಲೆಜೆಂಡ್ ಎನಿಸಿಕೊಂಡಿದ್ದರು. ಅವರು 112 ಪ್ರಥಮ ದರ್ಜೆ ಪಂದ್ಯಗಳಿಂದ 3305 ರನ್ ಮತ್ತು 392 ವಿಕೆಟ್, 104 ಲಿಸ್ಟ್ ಎ ಪಂದ್ಯಗಳಿಂದ 1792 ರನ್ ಮತ್ತು 120 ವಿಕೆಟ್ ಹಾಗೂ ಟಿ20 ಯಲ್ಲಿ 56 ಪಂದ್ಯಗಳಿಂದ 60 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ:ದಿನೇಶ್ ಕಾರ್ತಿಕ್ ನನಗೆ ಮತ್ತೆ ಕ್ರಿಕೆಟ್ ಆಡಬೇಕೆಂಬ ಭಾವನೆ ಮೂಡಿಸುತ್ತಿದ್ದಾರೆ: ಎಬಿ ಡಿ