ETV Bharat / sports

ಹೆಸರು ಪ್ರಸ್ತಾಪಿಸದೆ ಈ ಆಟಗಾರನ ವಿರುದ್ಧ ಕೊಹ್ಲಿ ಪರೋಕ್ಷ ಅಸಮಾಧಾನ - ಚೇತೇಶ್ವರ ಪೂಜಾರ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಕೆಲವು ಆಟಗಾರರು ರನ್ ಗಳಿಸಲು ಪ್ರಯತ್ನ ಪಡದಿದ್ದಕ್ಕೆ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್‌​ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Kohli
ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಕ್​ ಕೊಹ್ಲಿ
author img

By

Published : Jun 24, 2021, 10:44 AM IST

ಸೌತಾಂಪ್ಟನ್: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲುಂಡ ಬಳಿಕ ಮುಂದಿನ ಟೆಸ್ಟ್ ಪಂದ್ಯಕ್ಕೆ 'ಸರಿಯಾದ ಮನಸ್ಥಿತಿಯುಳ್ಳ ಸೂಕ್ತ ಆಟಗಾರರನ್ನು ಕರೆತರುವ ಅವಶ್ಯಕತೆಯಿದೆ' ಎಂದು ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಚೇತೇಶ್ವರ ಪೂಜಾರ ಅವರು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 54 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದರು. ಒಂದು ರನ್​ ಸಂಪಾದಿಸಲು 35 ಬಾಲ್​ಗಳನ್ನು ನುಂಗಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 80 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಟೀಂ ಇಂಡಿಯಾಗೆ ದೊಡ್ಡ ಆಘಾತ ನೀಡಿದ್ದರು.

ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಕೆಲವು ಆಟಗಾರರು ರನ್ ಗಳಿಸಲು ಪ್ರಯತ್ನ ಪಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಈ ವೇಳೆ ಅವರು ತಂಡದ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸಲಿಲ್ಲ. ನಮ್ಮ ತಂಡವನ್ನು ಬಲಪಡಿಸಲು ಅಗತ್ಯವಾದ ವಿಷಯಗಳು ಯಾವುವು ಎಂಬುದರ ಕುರಿತು ಚರ್ಚಿಸುತ್ತೇವೆ. ಈ ಬಗ್ಗೆ ಮರು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸುತ್ತೇವೆ. ಈ ಹಿಂದೆ ಅನುಸರಿಸಿದ ಕೆಲವು ಮಾದರಿಗಳನ್ನು ಅನುಸರಿಸುವುದಿಲ್ಲ. ಇದಕ್ಕಾಗಿ ವರ್ಷಗಟ್ಟಲೆ ಕಾಯುವುದಿಲ್ಲ. ನಮ್ಮ ವೈಟ್ ಬಾಲ್ ತಂಡದ ಹುಡುಗರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲ ಬದಲಾವಣೆಗಳು ಬೇಕಿವೆ ಎಂದರು.

ಇದನ್ನೂ ಓದಿ: ವಿಶ್ವ ಟೆಸ್ಟ್‌ ಚಾಂಪಿಯನ್‌ ಕಿರೀಟಕ್ಕೆ ಮುತ್ತಿಟ್ಟ ನ್ಯೂಜಿಲೆಂಡ್‌; ಮುಗ್ಗರಿಸಿದ ಟೀಂ ಇಂಡಿಯಾ

ರನ್ ಗಳಿಸುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಖಂಡಿತವಾಗಿಯೂ ಉತ್ತಮ ಯೋಜನೆಗಳನ್ನು ರೂಪಿಸಬೇಕಾಗಿದೆ. ನಾವು ಆಟದ ಆವೇಗದೊಂದಿಗೆ ಸಿಂಕ್ ಆಗಿರಬೇಕು ಮತ್ತು ಆಟವನ್ನು ಹೆಚ್ಚು ದೂರ ಹೋಗಲು ಬಿಡಬಾರದು. ಇಂತಹ ಯಾವುದೇ ತಾಂತ್ರಿಕ ತೊಂದರೆಗಳಿವೆ ಎಂದು ನಾನು ಭಾವಿಸುವುದಿಲ್ಲ. ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ನಾವು ಹೆಚ್ಚು ಧೈರ್ಯಶಾಲಿಯಾಗಿರಬೇಕು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್​ನ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್‌ ಹಾಗೂ ಭಾರತದ ನಡುವೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಮುಕ್ತಾಯಗೊಂಡಿದ್ದು, ನ್ಯೂಜಿಲೆಂಡ್‌ ಜಯಭೇರಿ ಬಾರಿಸಿದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.