ಚೆನ್ನೈ: ಇಂಗ್ಲೆಂಡ್ ತಂಡ ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು, ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ತಂಡದ ನಾಯಕನಿಗೆ ಇದು ನೂರನೇ ಟೆಸ್ಟ್ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ರೂಟ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಶಿಷ್ಟ ದಾಖಲೆ ಬರೆದಿದ್ದಾರೆ. ಭಾರತ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಜೋ ರೂಟ್ ಈ ಸಾಧನೆ ಮಾಡಿದ್ದಾರೆ.
-
1️⃣5️⃣0️⃣ for the third Test in a row! Incredible @root66 🙌
— England Cricket (@englandcricket) February 6, 2021 " class="align-text-top noRightClick twitterSection" data="
Scorecard: https://t.co/4gxZ9YZtWn#R100T #INDvENG pic.twitter.com/nnxCvFpsNl
">1️⃣5️⃣0️⃣ for the third Test in a row! Incredible @root66 🙌
— England Cricket (@englandcricket) February 6, 2021
Scorecard: https://t.co/4gxZ9YZtWn#R100T #INDvENG pic.twitter.com/nnxCvFpsNl1️⃣5️⃣0️⃣ for the third Test in a row! Incredible @root66 🙌
— England Cricket (@englandcricket) February 6, 2021
Scorecard: https://t.co/4gxZ9YZtWn#R100T #INDvENG pic.twitter.com/nnxCvFpsNl
ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 20 ಶತಕಗಳನ್ನು ಬಾರಿಸಿರುವ ಜೋ ರೂಟ್ ಈ ಪೈಕಿ 10 ಬಾರಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ. ರೂಟ್ ಕೊನೆಯ ನಾಲ್ಕು ಟೆಸ್ಟ್ ಶತಕಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದಾರೆ.
ಜೋ ರೂಟ್ ಕೊನೆಯ ನಾಲ್ಕು ಟೆಸ್ಟ್ ಶತಕಗಳು: 226, 228, 186 ಮತ್ತು 150*
ಈ ಹಿಂದೆ 2007 ರಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಸತತ 4 ಟೆಸ್ಟ್ ಪಂದ್ಯಗಳಲ್ಲಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ್ದರು. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಶ್ರೇಷ್ಠ ಸಾಧನೆಯಾಗಿದೆ.
ಓದಿ : ಭಾರತ vs ಇಂಗ್ಲೆಂಡ್: ಬೃಹತ್ ಮೊತ್ತದತ್ತ ಜೋ "ರೂಟ್".. ಟೀಂ ಇಂಡಿಯಾ ಬೌಲರ್ಗಳಿಗೆ ಬೆನ್ "ಸ್ಟ್ರೋಕ್"
ವ್ಯಾಲಿ ಹಮ್ಮಾಂಡ್, ಡಾನ್ ಬ್ರಾಡ್ಮನ್, ಜಹೀರ್ ಅಬ್ಬಾಸ್, ಮುದಾಸ್ಸರ್ ನಜರ್ ಹಾಗೂ ಟಾಮ್ ಲ್ಯಾಥಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಮೂರು ಬಾರಿ 150 ಹಾಗೂ ಅದಕ್ಕಿಂತಲೂ ಹೆಚ್ಚು ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಈ ಸಾಲಿಗೀಗ ಇಂಗ್ಲೆಂಡ್ ನಾಯಕ ಜೋ ರೂಟ್ ಸೇರ್ಪಡೆಯಾಗಿದ್ದಾರೆ.
ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ತಮ್ಮ 98 ಹಾಗೂ 99ನೇ ಟೆಸ್ಟ್ ಪಂದ್ಯಗಳಲ್ಲೂ ಜೋ ರೂಟ್ ಶತಕ ಸಾಧನೆ ಮಾಡಿದ್ದರು. ಈ ಮೂಲಕ 98, 99 ಹಾಗೂ 100ನೇ ಟೆಸ್ಟ್ ಪಂದ್ಯಗಳಲ್ಲಿ ಹ್ಯಾಟ್ರಿಕ್ ಶತಕ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂರು ಟೆಸ್ಟ್ ಶತಕಗಳು 2021ನೇ ಸಾಲಿನಲ್ಲಿ ದಾಖಲಾಗಿರುವುದು ಮತ್ತೊಂದು ವಿಶೇಷ.
ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದ ಆಟಗಾರರು:
ಕುಮಾರ ಸಂಗಕ್ಕರ: 4 (2007)
ವ್ಯಾಲಿ ಹಮ್ಮಾಂಡ್: 3 (1928-29)
ಡಾನ್ ಬ್ರಾಡ್ಮನ್: 3 (1937)
ಜಹೀರ್ ಅಬ್ಬಾಸ್: 3 (1982-93)
ಮುದಸ್ಸಾರ್ ನಜರ್: 3 (1983)
ಟಾಮ್ ಲ್ಯಾಥಮ್: 3 (2018-19)
ಜೋ ರೂಟ್: 3 (2021)