ಸೌಥಾಂಪ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಇಂಗ್ಲೆಂಡ್ ತಲುಪಿದ್ದು, ಅಲ್ಲಿನ ಮಾರ್ಗಸೂಚಿ ಪ್ರಕಾರ ಕ್ವಾರಂಟೈನ್ಗೆ ಒಳಗಾಗಿದೆ.
ತಂಡವು ಮೂರು ದಿನಗಳ ಹೋಟೆಲ್ವೊಂದರಲ್ಲಿ ಕ್ವಾರಂಟೈನ್ ಪೂರ್ಣಗೊಳಿಸುವುದು ಕಡ್ಡಾಯ. ಅಲ್ಲಿಯವರೆಗೆ ಯಾವುದೇ ಆಟಗಾರರು ಯಾರನ್ನೂ ಭೇಟಿ ಮಾಡುವ ಹಾಗಿಲ್ಲ ಎಂದು ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಅಲ್ಲಿನ ಕಾಯ್ದೆ ಹಾಗೂ ಕಾನೂನಿನ ಬಗ್ಗೆ ಮಾಹಿತಿ ನೀಡಿದ್ದಾರೆ.
![Indian players not allowed to meet each other for three days in Southampton](https://etvbharatimages.akamaized.net/etvbharat/prod-images/1991285fbe44518d625ab7717e85f200_2905a_1622286514_1066.jpg)
ನಾವು ಮೂರು ದಿನಗಳವರೆಗೆ ಒಬ್ಬರನ್ನೊಬ್ಬರು ಭೇಟಿಯಾಗುವಂತಿಲ್ಲ. ಕಡ್ಡಾಯ ಕ್ವಾರಂಟೈನ್ ಬಳಿಕವೇ ನಮ್ಮ ಭೇಟಿ ಆಗಲಿದೆ ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಅಕ್ಷರ್ ಪಟೇಲ್ ಹೇಳಿದ್ದಾರೆ.
ಜೂನ್ 18 ರಿಂದ ಪ್ರಾರಂಭವಾಗಲಿರುವ ಸರಣಿಗೆ ಟೀಂ ಇಂಡಿಯಾದ ಆಟಗಾರರು ಈಗಾಗಲೇ ಲಂಡನ್ಗೆ ಬಂದಿಳಿದಿದ್ದಾರೆ. ಈ ಎಲ್ಲ ಆಟಗಾರರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯ ಕ್ವಾರಂಟೈನ್ ಪೂರ್ಣಗಳಿಸಿದ ಬಳಿಕವೇ ಅಭ್ಯಾಸಕ್ಕೆ ಬರುವಂತೆ ಅನುವು ಮಾಡಿಕೊಡಲಾಗಿದೆ.
![Indian players not allowed to meet each other for three days in Southampton](https://etvbharatimages.akamaized.net/etvbharat/prod-images/01:40:17:1619165417_axar_2304newsroom_1619165356_933.jpg)
ಭಾರತ ತಂಡ ಪ್ರವಾಸಕ್ಕೂ ಮುನ್ನ ಮುಂಬೈನಲ್ಲಿ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಿತ್ತು. ಇದನ್ನು ಪೂರ್ಣಗೊಳಿಸಿದ ಬಳಿಕವೇ ಟೀಂ ಇಂಡಿಯಾದ ಆಟಗಾರರು ವಿಮಾನ ಏರಿದ್ದಾರೆ. ಈಗಾಗಲೇ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲೇ ಕಿವೀಸ್ ಬ್ಯಾಟ್ಸ್ಮನ್ ಡಿವೋನ್ ಕಾನ್ವೆ ದ್ವಿಶತಕ ಬಾರಿಸಿ ಹಲವು ದಾಖಲೆ ಬರೆದಿದ್ದಾರೆ.