ETV Bharat / sports

IND vs ENG, 4th Test: ಚೊಚ್ಚಲ ಶತಕ ಮಿಸ್​ ಮಾಡಿಕೊಂಡ ವಾಷಿಂಗ್ಟನ್ ಸುಂದರ್​

ಮೂರನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದ ಟೀಮ್​ ಇಂಡಿಯಾದ ಆಲ್​ ರೌಂಡರ್​ ವಾಷಿಂಗ್ಟನ್ ಸುಂದರ್ 96* ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯ ಆಟಗಾರರಿಂದ ಸೂಕ್ತ ಬೆಂಬಲ ಸಿಗದ ಕಾರಣ ಸುಂದರ್ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.

ವಾಷಿಂಗ್ಟನ್, ಅಕ್ಷರ್​ ಪಟೇಲ್
ವಾಷಿಂಗ್ಟನ್, ಅಕ್ಷರ್​ ಪಟೇಲ್
author img

By

Published : Mar 6, 2021, 12:21 PM IST

Updated : Mar 6, 2021, 2:34 PM IST

ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ - ಇಂಗ್ಲೆಂಡ್​ ನಡುವಿನ 4 ನೇ ಟೆಸ್ಟ್​ ಪಂದ್ಯದ ಮೂರನೇ ದಿನದಾಟದಲ್ಲಿ ಅದ್ಭುತವಾಗಿ ಆಡಿದ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 365/10 ರನ್​ಗಳಿಸುವ ಮೂಲಕ, 160 ರನ್‌ಗಳ ಮುನ್ನಡೆ ಸಾಧಿಸಿದೆ.

ಮೂರನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದ ಟೀಮ್​ ಇಂಡಿಯಾದ ಆಲ್​ ರೌಂಡರ್​ ವಾಷಿಂಗ್ಟನ್ ಸುಂದರ್ 96* ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯ ಆಟಗಾರರಿಂದ ಸೂಕ್ತ ಬೆಂಬಲ ಸಿಗದ ಕಾರಣ ಸುಂದರ್ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.

ಸುಂದರ ಇನ್ನಿಂಗ್ಸ್​​ ಕಟ್ಟಿದ್ದ ವಾಷಿಂಗ್ಟನ್​ ಸುಂದರ್ 174 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 96 ರನ್ ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ನಾಲ್ಕು ವಿಕೆಟ್​ ಕಿತ್ತು ಮಿಂಚಿದರೆ, ಜೇಮ್ಸ್ ಆ್ಯಂಡರ್ಸನ್ ಮೂರು ಮತ್ತು ಜ್ಯಾಕ್ ಲೀಚ್ ಎರಡು ವಿಕೆಟ್‌ ಪಡೆದರು.

ಓದಿ : ಮೊಟೇರಾದಲ್ಲಿ ವಾಷಿಂಗ್ಟನ್​ "ಸುಂದರ" ಮನಮೋಹಕ ಆಟ : ಭಾರತ 160 ರನ್​ಗಳ ಮುನ್ನಡೆ​

ಇತ್ತ ಅಕ್ಷರ್ ಪಟೇಲ್ ಏಳು ರನ್ ಅಂತರದಿಂದ ತಮ್ಮ ಚೊಚ್ಚಲ ಟೆಸ್ಟ್​ ಅರ್ಧಶತಕ ತಪ್ಪಿಸಿಕೊಂಡರು. 97 ಎಸೆತಗಳನ್ನ ಎದುರಿಸಿದ ಅಕ್ಷರ್ ಪಟೇಲ್ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ರನೌಟ್‌ಗೆ ಬಲಿಯಾದರು.

ನಂತರದ ಓವರ್‌ನಲ್ಲೇ ಇಶಾಂತ್ ಶರ್ಮಾ (0) ಹಾಗೂ ಮೊಹಮ್ಮದ್ ಸಿರಾಜ್ (0) ಹೊರದಬ್ಬಿದ ಬೆನ್ ಸ್ಟೋಕ್ಸ್ ಭಾರತದ ಇನ್ನಿಂಗ್ಸ್‌ಗೆ ಇತಿ ಶ್ರೀ ಹಾಡಿದರು. ಇದರೊಂದಿಗೆ ಭಾರತ 114.4 ಓವರ್‌ಗಳಲ್ಲಿ 365 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

Last Updated : Mar 6, 2021, 2:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.