ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ, ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ಜೋ ರೂಟ್ ಪಡೆ 3 ವಿಕೆಟ್ ನಷ್ಟಕ್ಕೆ 119 ರನ್‌ಗಳಿಸಿ 245 ರನ್‌ಗಳ ಹಿನ್ನಡೆಯಲ್ಲಿದೆ. 15ನೇ ಓವರ್‌ನಲ್ಲಿ ಆಂಗ್ಲನ್ನರ ಆರಂಭಿಕ ಜೋಡಿಯನ್ನು ಸಿರಾಜ್ ಮುರಿದರು. 11 ರನ್ ಗಳಿಸಿದ್ದ ಡೊಮಿನಿಕ್ ಸಿಬ್ಲಿ, ಸಿರಾಜ್ ಬೌಲಿಂಗ್‌ನಲ್ಲಿ ಕೆ.ಎಲ್ ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಬಳಿಕ ರೋರಿ ಬರ್ನ್ಸ್ ಜೊತೆಗೂಡಿದ ಹಸೀಬ್ ಹಮೀದ್(0) ಖಾತೆ ತೆರೆಯುವ ಮುನ್ನವೇ ಸಿರಾಜ್ ಬೌಲ್ಡ್ ಮಾಡಿ ಪೆವಿಲಿಯನ್ ದಾರಿ ತೋರಿಸಿ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದರು. 41ನೇ ಓವರ್ ಎಸೆಯಲು ಬಂದ ಮಹಮ್ಮದ್ ಶಮಿ, 49 ರನ್‌ಗಳಿಸಿ ಅರ್ಧ ಶತಕದಂಚಿನಲ್ಲಿದ್ದ ಬರ್ನ್ಸ್‌ರನ್ನು ಎಲ್‌ಬಿ ಬಲೆ ಬೀಳಿಸುವಲ್ಲಿ ಯಶಸ್ವಿಯಾದರು. 48 ರನ್ ಗಳಿಸಿರುವ ನಾಯಕ ಜೋ ರೂಟ್ ಹಾಗೂ ಜಾನಿ ಬೆಸ್ಟೊ 3ನೇ ದಿನದಾಟವನ್ನು ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: 70 ವರ್ಷದ ಟೆಸ್ಟ್ ಇತಿಹಾಸದಲ್ಲಿ 5 ವಿಕೆಟ್ ಕಿತ್ತು ವಿಶೇಷ ಸಾಧನೆ ಮಾಡಿದ ಆ್ಯಂಡರ್ಸನ್!
ಇನ್ನು, ಮೊದಲ ದಿನದಾಟದಲ್ಲಿ ಭಾರತ ತಂಡ ಕನ್ನಡಿಕ ಕೆ.ಎಲ್.ರಾಹುಲ್ ಶತಕದ ಬಲದಿಂದ ಮೂರು ವಿಕೆಟ್‌ಗಳಿಗೆ 276 ರನ್ ಗಳಿಸಿತ್ತು. ಎರಡನೇ ದಿನದಾಟದಲ್ಲಿ ಕೇವಲ 88 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ತಂಡವು ಕಳೆದು ಕೊಂಡಿತು. ರಿಷಭ್ ಪಂತ್ (37 ರನ್) ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ (40) ತಂಡಕ್ಕೆ ನೆರವಾದರು. ಕೊಹ್ಲಿ ಪಡೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೂಂಡು 126.1 ಓವರ್‌ಗಳಲ್ಲಿ 364 ರನ್ ಗಳಿಸಿತು. ಇಂಗ್ಲೆಂಡ್ ಪರ 39 ವರ್ಷದ ಆ್ಯಂಡರ್ಸನ್ (62ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್ ಮಾಡಿದರು.