ಅಹಮದಾಬಾದ್: ಭಾರತದ ಪಿಚ್‌ಗಳ ಬಗ್ಗೆ ವಿದೇಶಿ ಆಟಗಾರರು ಏನು ಹೇಳುತ್ತಾರೆಂದು ನಾನು ಗಮನ ಹರಿಸುವುದಿಲ್ಲ ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಭಾರತೀಯ ಪಿಚ್‌ಗಳ ಬಗ್ಗೆ ಪ್ರಚಾರ ಪಡೆಯುವವರೆಗೆ ಅವರು ಟೀಕಿಸುತ್ತಲೇ ಇರುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಬಳಸಲಾದ ಪಿಚ್‌ಗಳ ಬಗ್ಗೆ ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್ ಸಾಕಷ್ಟು ಟೀಕಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಗವಾಸ್ಕರ್ "ಚರ್ಚೆಯು ಬೌಲಿಂಗ್ ಮತ್ತು ಬ್ಯಾಟಿಂಗ್ ಸುತ್ತಲೂ ಇರಬೇಕಿತ್ತು. ಬ್ಯಾಟ್ಸ್ಮನ್ಗಳು ಬೌಲ್ಡ್ ಹಾಗೂ ಎಲ್‌ಬಿಡಬ್ಲ್ಯೂಗೆ ಬಲಿಯಾದರೆ ಅದು ಹೇಗೆ ಕೆಟ್ಟ ಪಿಚ್ ಆಗುತ್ತದೆ. ವಿದೇಶಿ ಆಟಗಾರರಿಗೆ ನಾವು ಯಾಕೆ ಹೆಚ್ಚು ಪ್ರಾಮುಖ್ಯತೆ ನೀಡುಬೇಕು? ಅವರು ಏನು ಹೇಳಿದರು ನಾವು ಏಕೆ ಚರ್ಚಿಸಬೇಕು" ಎಂದು ಗವಾಸ್ಕರ್ ಖಾರವಾಗಿಯೆ ಉತ್ತರ ನೀಡಿದ್ದಾರೆ.
ಓದಿ : ರಾಹುಲ್, ಅಗರವಾಲ್ ಕಾಯ್ತಿದ್ದಾರೆ: ಶುಬಮನ್ ಗಿಲ್ ಕಳಪೆ ಪ್ರದರ್ಶನಕ್ಕೆ ಲಕ್ಷ್ಮಣ್ ಆಕ್ರೋಶ
"ಭಾರತವು 36 ರನ್‌ಗಳಿಗೆ ಆಲೌಟ್ ಆದಾಗ, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಅಲ್ಲಿನ ಪಿಚ್ ಮತ್ತು ವಾತಾವರಣದ ಬಗ್ಗೆ ಮಾತನಾಡಿದ್ದರು. ಆಗ ಆ ದೇಶದ ಮಾಧ್ಯಮ ಅಥವಾ ಟಿವಿ ಚಾನೆಲ್ ಗಳು ಈ ಪ್ರತಿಕ್ರಿಯೆಗಳಿಗೆ ಪ್ರಾಮುಖ್ಯತೆ ನೀಡಿದ್ದರೆ..? ಇಲ್ಲವೇ ಇಲ್ಲ. ಹಾಗಾದರೆ ನಾವು ಯಾಕೆ ಅವರಿಗೆ ಪ್ರಾಮುಖ್ಯತೆ ನೀಡಬೇಕು. ನಾವು ಅವರಿಗೆ ಪ್ರಾಮುಖ್ಯತೆ ನೀಡದಿದ್ದಾಗ ಅವರು ಪಾಠ ಕಲಿಯುತ್ತಾರೆ. ಅವರಿಗೆ ಪ್ರಾಮುಖ್ಯತೆ ಮತ್ತು ಪ್ರಚಾರ ಸಿಗುತ್ತದೆ ಎಂದು ಅವರು ತಿಳಿದಿರುವವರೆಗೂ ಅದನ್ನು ಮಾಡುತ್ತಲೇ ಇರುತ್ತಾರೆ. ಪಿಚ್ ಬಗ್ಗೆ ಇಂಗ್ಲೆಂಡ್ ತಂಡವು ದೂರು ನೀಡಲಿಲ್ಲ. ನಾಯಕ ಜೋ ರೂಟ್ ದೂರು ನೀಡಲಿಲ್ಲ ," ಮತ್ಯಾಕೆ ಈ ಬಗ್ಗೆ ನಾವು ಯೋಚಿಸಬೇಕು ಎಂದಿದ್ದಾರೆ.