ETV Bharat / sports

ಅಹಮದಾಬಾದ್ - ಚೆನ್ನೈ  ಪಿಚ್​ಗಳು "ತರಕಾರಿ ಬೆಳೆಯುವ ಕ್ಷೇತ್ರಗಳಿದ್ದಂತೆ": ಕರ್ಸನ್ ಗಾವ್ರಿ ಕಿಡಿ - ಕರ್ಸನ್ ಗಾವ್ರಿ

ಕರ್ಸನ್ ಗಾವ್ರಿ ಭಾರತ ಪರ 39 ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳನ್ನಾಡಿರುವ ಇವರು, ಟೆಸ್ಟ್​ ನಲ್ಲಿ 109 ವಿಕೆಟ್​ ಪಡೆದರೆ ಏಕದಿನ ಕ್ರಿಕೆಟ್​ನಲ್ಲಿ 15 ವಿಕೆಟ್ ಒಡೆದು​ ಮಿಂಚಿದ್ದಾರೆ.

Pitches at Motera and Chennai were like fields to grow vegetables, says Karsan Ghavri
ಅಹಮದಾಬಾದ್ ಮತ್ತು ಚೆನ್ನೈ ನ ಪಿಚ್
author img

By

Published : Mar 3, 2021, 10:39 AM IST

ಹೈದರಾಬಾದ್: ಭಾರತ ತಂಡದ ಮಾಜಿ ಆಟಗಾರ ಕರ್ಸನ್ ಗಾವ್ರಿ, ಅಹಮದಾಬಾದ್ ಮತ್ತು ಚೆನ್ನೈ ನ ಪಿಚ್​ಗಳು "ತರಕಾರಿಗಳನ್ನು ಬೆಳೆಯುವ ಕ್ಷೇತ್ರಗಳಿದಂತೆ" ಎಂದು ಹೇಳಿದ್ದಾರೆ.

ಕರ್ಸನ್ ಗಾವ್ರಿ ಭಾರತ ಪರ 39 ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳನ್ನಾಡಿರುವ ಇವರು, ಟೆಸ್ಟ್​ ನಲ್ಲಿ 109 ವಿಕೆಟ್​ ಪಡೆದರೆ ಏಕದಿನ ಕ್ರಿಕೆಟ್​ನಲ್ಲಿ 15 ವಿಕೆಟ್​ ಮಿಂಚಿದ್ದಾರೆ.

ಈ ಟಿವಿ ಭಾರತ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಅಹಮದಾಬಾದ್ ಮತ್ತು ಚೆನ್ನೈ ನ ಪಿಚ್​ಗಳು "ತರಕಾರಿಗಳನ್ನು ಬೆಳೆಯುವ ಕ್ಷೇತ್ರಗಳಿದಂತೆ" ಎಂದು ಹೇಳಿದ್ದಾರೆ. ಈ ಟೆಸ್ಟ್​ ಪಂದ್ಯಗಳಲ್ಲಿ ಇಂಗ್ಲೆಂಡ್​ ತಂಡಕ್ಕೆ ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದೂ ಹೇಳಿದ್ದಾರೆ. ಏಕೆಂದರೆ ನಮ್ಮ ಭಾರತೀಯ ಕ್ರಿಕೆಟ್ ಪ್ರಿಯರು ಕ್ರೀಡಾಂಗಣ ಮತ್ತು ದೂರದರ್ಶನದ ಮೂಲಕ ಆಟ ನೋಡುವ ಜನರು. ಐದು ದಿನಗಳ ಆಟವು ಕೇವಲ ಎರಡು ದಿನಗಳಲ್ಲಿ ಕೊನೆಗೊಂಡರೆ, ಅದು ಆಟವನ್ನು ಕೊಲ್ಲುತ್ತದೆ ಇದರಿಂದ ಪ್ರೇಕ್ಷಕರಿಗೆ ನಿರಾಸೆಯಾಗುತ್ತದೆ. ಪಿಚ್​ಗಳು ಮೊದಲ ಎರಡು ದಿನಗಳಲ್ಲಿ ಬ್ಯಾಟ್ಸಮನ್​ ಮತ್ತು ಬೌಲರ್ ಇಬ್ಬರಿಗೂ ಉತ್ತಮವಾಗಿರಬೇಕು. ಆದರೆ, ಚೆನ್ನೈ ಮತ್ತು ಅಹಮದಾಬಾದ್​​ನ ಪಿಚ್​ಗಳು ತರಕಾರಿಗಳನ್ನು ಬೆಳೆಯುವ ಕ್ಷೇತ್ರಗಳಿದಂತೆ ಇದ್ದವು, ಇದರಿಂದ ಬ್ಯಾಟ್ಸ್‌ಮನ್‌ಗೆ ರನ್ ಗಳಿಸುವುದ ಬಹಳ ಕಷ್ಟಕರವಾಗಿತ್ತು. ಇದು ಎರಡೂ ತಂಡಗಳಿಗೆ ಸಾಕಷ್ಟು ಅನ್ಯಾಯವಾಗಿದೆ ಎಂದರು.

ಓದಿ : 4ನೇ ಟೆಸ್ಟ್​ ಪಂದ್ಯದಲ್ಲಿ ನಾವು ಗೆದ್ದರೆ ಅದು ’’ನಂಬಲಸಾಧ್ಯವಾದ ಚಳಿಗಾಲ’’ ವಾಗಲಿದೆ : ಜಾಕ್​​​​ ಕ್ರಾವ್ಲೆ

ಆ ರೀತಿಯ ಪಿಚ್‌ನಲ್ಲಿ ಸ್ಕೋರ್ ಮಾಡುವುದು ಕಷ್ಟಕರವಾಗಿತ್ತು. ಅಂತಹ ಸಂದರ್ಭಗಳಲ್ಲಿ, ಆಕ್ರಮಣ ಮಾಡುವುದು ಉತ್ತಮ ಮಾರ್ಗವಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 49 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆಡಿದ ಮತ್ತು ರನ್ ಗಳಿಸಿದ ರೀತಿ ನನ್ನ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಅವರು ಸಿಂಗಲ್ಸ್ ಮತ್ತು ಡಬಲ್ಸ್ ಮೂಲಕ ಅಲ್ಲ ಬೌಂಡರಿ ಮತ್ತು ಸಿಕ್ಸರ್ ಮೂಲಕ ರನ್​ ಕಲೆಹಾಕಿದರು. ಇದು ಇಂಗ್ಲೆಂಡ್​ ತಂಡಕ್ಕೆ ಮಾರಕವಾಗಿ ಪರಿಣಮಿಸಿತು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.