ETV Bharat / sports

ಮೂರನೇ ಅಂಪೈರ್ ಎಡವಟ್ಟು: ಇಂಗ್ಲೆಂಡ್​ಗೆ ಡಿಆರ್​​ಎಸ್​ ಮರಳಿಸಿದ ಅನಿಲ್​ ಚೌಧರಿ

ಮೂರನೇ ಅಂಪೈರ್ ಅನಿಲ್ ಚೌಧರಿ ಅವರ ಎಡವಟ್ಟಿನಿಂದಾಗಿ ಇಂಗ್ಲೆಂಡ್ ಪಡೆದಿದ್ದ ಅಂಪೈರ್ ತೀರ್ಮಾನ ಪುನರ್‌ಪರಿಶೀಲನಾ ಪದ್ಧತಿ (ಡಿಆರ್​​ಎಸ್)​ ಅನ್ನು ಪುನಃ ತಂಡಕ್ಕೆ ಮರಳಿಸಲಾಯಿತು.

Joe root
ಜೋ ರೂಟ್
author img

By

Published : Feb 13, 2021, 9:52 PM IST

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಮೂರನೇ ಅಂಪೈರ್ ಅನಿಲ್ ಚೌಧರಿ ಅವರ ಎಡವಟ್ಟಿನಿಂದಾಗಿ ಇಂಗ್ಲೆಂಡ್ ಪಡೆದಿದ್ದ ಅಂಪೈರ್ ತೀರ್ಮಾನ ಪುನರ್‌ಪರಿಶೀಲನಾ ಪದ್ಧತಿ (ಡಿಆರ್​​ಎಸ್)​ ಅನ್ನು ಪುನಃ ತಂಡಕ್ಕೆ ಮರಳಿಸಲಾಯಿತು.

ಎಡಗೈ ಸ್ಪಿನ್ನರ್ ಜ್ಯಾಕ್ ಲೀಚ್ ಎಸೆದ 75ನೇ ಓವರ್‌ನ 2ನೇ ಎಸೆತದಲ್ಲಿ ಅಜಿಂಕ್ಯ ರಹಾನೆ ಅದನ್ನು ಮುಂದಕ್ಕೆ ಬಂದು ಶಾರ್ಟ್-ಲೆಗ್ ಫೀಲ್ಡರ್​​ನತ್ತ ಬಾರಿಸಿದರು. ಇಂಗ್ಲೆಂಡ್ ಆಟಗಾರರು ಮನವಿ ಮಾಡಿದರೆ, ಅಂಪೈರ್ 'ನಾಟೌಟ್​' ಎಂದು ಘೋಷಿಸಿದರು. ಬಳಿಕ ಡಿಆರ್​​ಎಸ್​ ಪಡೆದರು.

ಚೆಂಡು ಬ್ಯಾಟ್​ನ ಒಳ ಅಂಚಿಗೆ ತಗುಲಿರುವ ಕುರಿತು ಸ್ನಿಕೋಮೀಟರ್​​​ನಲ್ಲಿ ತೋರಿಸಲಿಲ್ಲ. ಏಕಾಏಕಿ ನಿರ್ಧರಿಸಿ ಮೂರನೇ ಅಂಪೈರ್​ ನಾಟೌಟ್​ ಎಂದು ತೀರ್ಪು ನೀಡಿದರು. ಅಂಪೈರ್ ಸಂಪೂರ್ಣವಾಗಿ ಮರು ಪರಿಶೀಲನೆ ನಡೆಸದೆ ಚೆಂಡು ಫೀಲ್ಡರ್​ನತ್ತ ಹೋಗುವುದನ್ನು ಮಾತ್ರ ತೋರಿಸಿದರು. 149 ಎಸೆತಗಳನ್ನು ಎದುರಿಸಿದ ರಹಾನೆ 67 ರನ್​ ಗಳಿಸಿದ್ದರು.

ಅಂಪೈರ್​ ನೀಡಿದ ನಿರ್ಧಾರದಿಂದ ರಹಾನೆಗೆ ಜೀವದಾನ ಸಿಕ್ಕಿತು. ಈ ಮೂಲಕ ಇಂಗ್ಲೆಂಡ್ ತಮ್ಮ ಮೂರು ಡಿಆರ್​​ಎಸ್​​ಗಳನ್ನು ಕಳೆದುಕೊಂಡಿತು. ಅಂಪೈರ್ ಮಾಡಿದ ದೋಷದಿಂದಾಗಿ ರಹಾನೆ ಇನ್ನೂ ಒಂದು ರನ್​​ಅನ್ನು ತಮ್ಮ ಖಾತೆಗೆ ಹಾಕಿಕೊಂಡರು. ಸರಿಯಾಗಿ ಪರಿಶೀಲಿಸದೆ ತೀರ್ಮಾನ ಕೈಗೊಂಡ ಅಂಪೈರ್​ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ಅದಾದ ನಂತರ ಡಿಆರ್​ಎಸ್​ ಅನ್ನು ತಂಡಕ್ಕೆ ಮರಳಿಸಲಾಯಿತು.

ಸ್ನಿಕೋ ಮೀಟರ್ ಕುರಿತ ಮಾಹಿತಿ: ಸ್ನಿಕೋ ಮೀಟರ್ ಎಂದರೆ ಶಬ್ದ ಮತ್ತು ವೀಡಿಯೋ ಚಿತ್ರಣದ ಮೂಲಕ ಆಟಗಾರ ಔಟ್ ಆಗಿದ್ದಾರೋ ಇಲ್ಲವೋ ಎಂಬುದನ್ನು ಕಂಡು ಹಿಡಿಯಲು ಬಳಸಲಾಗುತ್ತದೆ. ಚೆಂಡು ಬ್ಯಾಟಿಗೆ ತಗುಲಿದೆಯೋ ಇಲ್ಲವೋ ಎಂಬುದನ್ನು ಸ್ನಿಕೋಮೀಟರ್ ಸ್ಪಷ್ಟವಾಗಿ ತಿಳಿಸುತ್ತದೆ.

ಪ್ರಥಮ ಇನ್ನಿಂಗ್ಸ್​​ನ ಮೊದಲ ದಿನಕ್ಕೆ 6 ವಿಕೆಟ್ ಕಳೆದುಕೊಂಡು 300 ರನ್​ ಗಳಿಸಿರುವ ಭಾರತ, ಎರಡನೇ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.