ETV Bharat / sports

ಬಾಲಕನ ಪ್ರತಿಭೆಗೆ ರೋಹಿತ್ ಶರ್ಮಾ ಫಿದಾ... ಅಭ್ಯಾಸದ ವೇಳೆ ಕರೆದು ಬೌಲಿಂಗ್ ಮಾಡಿಸಿಕೊಂಡ ಕ್ಯಾಫ್ಟನ್ - ಬೌಲಿಂಗ್ ಮೂಲಕ ಎಲ್ಲರ ಮನಸೆಳೆದ ಬಾಲಕ

ಈ ಬಾರಿ ಟಿ20 ವಿಶ್ವಕಪ್​ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದು, ಈಗಾಗಲೇ ಎಲ್ಲ ತಂಡಗಳು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿವೆ. ಅದರಂತೆ ಟೀಂ ಇಂಡಿಯಾ ಸಹ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ 11 ವರ್ಷದ ಬಾಲಕನೊಬ್ಬ ರೋಹಿತ್​ ಅವರ ಗಮನ ಸೆಳೆದಿದ್ದಾನೆ.

boy impresses Rohit Sharma  boy impresses Rohit Sharma with his smooth bowling  T20 world cup 2022 in Australia  T20 world cup 2022  ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ  ಟಿ20 ವಿಶ್ವಕಪ್​ ಆಸ್ಟ್ರೇಲಿಯಾ  ಭಾರತದ ನಾಯಕ ರೋಹಿತ್ ಶರ್ಮಾ  ಟೀಂ ಇಂಡಿಯಾ ವಿಶ್ಲೇಷಕ ಪ್ರಸಾದ್ ಮೋಹನ್  ಬೌಲಿಂಗ್ ಮೂಲಕ ಎಲ್ಲರ ಮನಸೆಳೆದ ಬಾಲಕ  ಹುಡುಗನ ಪ್ರತಿಭೆಗೆ ರೋಹಿತ್​ ಶರ್ಮಾ ಫಿದಾ
ಬೌಲಿಂಗ್ ಮೂಲಕ ಎಲ್ಲರ ಮನಸೆಳೆದ ಬಾಲಕ
author img

By

Published : Oct 17, 2022, 10:07 AM IST

Updated : Oct 20, 2022, 10:12 AM IST

ಪರ್ತ್, ಆಸ್ಟ್ರೇಲಿಯಾ: ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದ್ದು, ಪರ್ತ್‌ನಲ್ಲಿ ಅಭ್ಯಾಸ ನಡೆಸಿದರು. ಮೈದಾನದಲ್ಲಿದ್ದ ಮಕ್ಕಳ ಪೈಕಿ 11 ವರ್ಷದ ಬಾಲಕನೊಬ್ಬ ತನ್ನ ಬೌಲಿಂಗ್ ಮೂಲಕ ಎಲ್ಲರ ಮನಸೆಳೆದಿದ್ದಾನೆ. ಭಾರತದ ನಾಯಕ ರೋಹಿತ್ ಶರ್ಮಾ ಅವರು ಉತ್ತಮ ಬೌಲಿಂಗ್ ಮಾಡುತ್ತಿದ್ದ ಎಡಗೈ ವೇಗದ ಪ್ರತಿಭೆಯಿಂದ ಇಂಪ್ರೆಸ್ ಆದರು. ಬಳಿಕ ರೋಹಿತ್​ ಶರ್ಮಾ ನೆಟ್ಸ್‌ನಲ್ಲಿ ಆ ಬಾಲಕನಿಂದ ಬೌಲಿಂಗ್​ ಮಾಡಿಸಿಕೊಂಡರು. ರೋಹಿತ್‌ಗೆ ಬೌಲಿಂಗ್ ಮಾಡುತ್ತಿರುವ ಬಾಲಕ ದೃಶಿಲ್ ಚೌಹಾಣ್ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.

  • 𝗗𝗢 𝗡𝗢𝗧 𝗠𝗜𝗦𝗦!

    When a 11-year-old impressed @ImRo45 with his smooth action! 👌 👌

    A fascinating story of Drushil Chauhan who caught the eye of #TeamIndia Captain & got invited to the nets and the Indian dressing room. 👏 👏 #T20WorldCup

    Watch 🔽https://t.co/CbDLMiOaQO

    — BCCI (@BCCI) October 16, 2022 " class="align-text-top noRightClick twitterSection" data=" ">

ನಾವು ಮಧ್ಯಾಹ್ನದ ಅಭ್ಯಾಸದ ಅವಧಿಗೆ ವಾಕಾಗೆ ಹೋಗಿದ್ದೆವು. ಅಲ್ಲಿ ಮಕ್ಕಳು ಬೆಳಗಿನ ಅವಧಿ ಮುಗಿಸುವುದರಲ್ಲಿ ನಿರತರಾಗಿದ್ದರು. ಡ್ರೆಸ್ಸಿಂಗ್ ರೂಮ್‌ನಿಂದ ಸುಮಾರು 100 ಮಕ್ಕಳು ಆಟವಾಡುವುದನ್ನು ನಾವು ನೋಡಿದ್ದೇವೆ. ಒಬ್ಬ ಹುಡುಗ (ದೃಶಿಲ್) ಎಲ್ಲರ ಗಮನ ಸೆಳೆದ. ಅದರಲ್ಲೂ ರೋಹಿತ್ ಅವರದ್ದು. ಅವರ ರನ್‌ಅಪ್ ಮತ್ತು ಸಹಜ ಪ್ರತಿಭೆ ಎಲ್ಲರನ್ನು ಅಚ್ಚರಿಗೆ ದೂಡಿತು. ಅವರು ಸ್ಥಿರವಾಗಿ ಬೌಲಿಂಗ್ ಮಾಡಿದರು. ರೋಹಿತ್ ಅವರ ಬಳಿ ಹೋಗಿ ನೆಟ್ಸ್​ನಲ್ಲಿ ಬೌಲಿಂಗ್ ಮಾಡುವಂತೆ ಕೇಳಿಕೊಂಡರು ಅಂತಾ ಟೀಂ ಇಂಡಿಯಾ ವಿಶ್ಲೇಷಕ ಪ್ರಸಾದ್ ಮೋಹನ್ ಹೇಳಿದ್ದಾರೆ.

ಇದೆಲ್ಲವೂ ನನಗೆ ಆಶ್ಚರ್ಯವನ್ನುಂಟು ಮಾಡಿತು. ರೋಹಿತ್​ಗೆ ಬೌಲಿಂಗ್ ಮಾಡಲು ನನ್ನ ತಂದೆ ಹೇಳಿದರು. ಇದು ತುಂಬಾ ರೋಮಾಂಚನಕಾರಿ ಎನಿಸಿತು. ಇನ್ಸ್ವಿಂಗ್ ಯಾರ್ಕರ್‌ಗಳು ಮತ್ತು ಔಟ್‌ಸ್ವಿಂಗಿಂಗ್ ಎಸೆತಗಳು ನನ್ನ ಫೇವರಿಟ್ ಎಂದು ದೃಶಿಲ್ ಹೇಳಿದ್ದಾರೆ. “ನೀವು ಪರ್ತ್‌ನಲ್ಲಿ ಇದ್ದೀರಿ. ಭಾರತ ಪರ ಹೇಗೆ ಆಡುತ್ತೀರಿ ಎಂದು ರೋಹಿತ್, ದೃಶಿಲ್ ಅವರನ್ನು ಕೇಳಿದರು. ಆಟವನ್ನು ಕರಗತ ಮಾಡಿಕೊಂಡ ನಂತರ ಭಾರತಕ್ಕೆ ಹೋಗುತ್ತೇನೆ ಎಂದು ದೃಶಿಲ್​ ಉತ್ತರಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಓದಿ: ಐಪಿಎಲ್​ 2023: ಡಿಸೆಂಬರ್​​ನಲ್ಲಿ ಮಿನಿ ಹರಾಜು, ಬಿಡ್ ಮಾಡಲು ತಂಡಗಳ ಬಳಿ ಉಳಿದ ಹಣವೆಷ್ಟು?

Last Updated : Oct 20, 2022, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.