ETV Bharat / sports

ಮಹೇಂದ್ರ ಸಿಂಗ್​ ಧೋನಿ ಹೆಸರಲ್ಲಿ ಸೈಬರ್​ ಕ್ರೈಂ ... ಇಬ್ಬರ ಬಂಧನ - Froud finance company

ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ ಹೆಸರಿನಲ್ಲಿ ನಕಲಿ ಫೈನಾನ್ಸ್​ ಕಂಪನಿ ಆರಂಭಿಸಿ ವಂಚಿಸಿದ ಘಟನೆ ಬಿಹಾರದಲ್ಲಿ ನಡೆದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

disclosure-of-cyber-crime-in-patna
ಮಹೇಂದ್ರ ಸಿಂಗ್​ ದೋನಿ ಹೆಸರಿನಲ್ಲಿ ಸೈಬರ್​ ಕ್ರೈಂ
author img

By

Published : Dec 20, 2022, 1:50 PM IST

ಪಾಟ್ನಾ(ಬಿಹಾರ): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನಿಂದ ದೂರವಿದ್ದರೂ, ಅವರ ಬ್ರ್ಯಾಂಡ್​ ವ್ಯಾಲ್ಯೂ ಮಾತ್ರ ಕಮ್ಮಿಯಾಗಿಲ್ಲ. ಇದನ್ನೇ ಬಳಸಿಕೊಂಡ ದುಷ್ಕರ್ಮಿಗಳು ಅವರ ಹೆಸರಿನಲ್ಲಿ ಸೈಬರ್​ ಕ್ರೈಂ ಎಸಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ಫೈನಾನ್ಸ್​ ಕಂಪನಿಯೊಂದಕ್ಕೆ ಎಂಎಸ್​ ಧೋನಿ ರಾಯಭಾರಿ ಎಂದು ನಂಬಿಸಿ ಹಣ ಹೂಡಿಕೆ ಮಾಡಿಸುಕೊಂಡು ವಂಚಿಸಿದ್ದು, ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣವೇನು?: ಪಾಟ್ನಾದಲ್ಲಿ ಕೆಲ ದುಷ್ಕರ್ಮಿಗಳು ಆನ್‌ಲೈನ್‌ನಲ್ಲಿ ನಕಲಿ ಫೈನಾನ್ಸ್ ಕಂಪನಿಯನ್ನು ಆರಂಭಿಸಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಕಂಪನಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ ರಾಯಭಾರಿ ಎಂದು ಜನರನ್ನು ನಂಬಿಸಿದ್ದಾರೆ.

ಧೋನಿ ರಾಯಭಾರಿ ಎಂದು ನಂಬಿದ ಕೆಲವರು ನಕಲಿ ಫೈನಾನ್ಸ್​ ಕಂಪನಿಯಿಂದ ಸಾಲ ಪಡೆಯುವ ಮೊದಲು ಪ್ರೊಸೆಸಿಂಗ್​ ಫೀ, ಇನ್ಶೂರೆನ್ಸ್​, ಜಿಎಸ್​ಟಿ ರೂಪದಲ್ಲಿ ಹಣ ಪಾವತಿಸಿದ್ದಾರೆ. ಬಳಿಕ ಸಾಲದ ಹಣ ನೀಡದೇ ವಂಚಿಸಿದ್ದಾರೆ. ಈ ಬಗ್ಗೆ ವಂಚನೆಗೆ ಒಳಗಾದವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕೇಸ್​ ದಾಖಲಿಸಿಕೊಂಡು ತನಿಖೆಗೆ ನಡೆಸಿದ ಪೊಲೀಸರು, ಮೊದಲು ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಇನ್ನೊಬ್ಬನನ್ನು ಬಂಧಿಸಿದ್ದಾರೆ.

ಓದಿ: 'ನಾಯಿ' ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ; ಕ್ಷಮೆಯಾಚಿಸಲ್ಲ ಎಂದ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.