ETV Bharat / sports

ಟೀಕೆಗಳಿಗೆ ಉತ್ತರ ಕೊಡಲು ವಾರ್ನರ್​ಗೆ ಐಪಿಎಲ್​ ಉತ್ತಮ ವೇದಿಕೆ.. ವ್ಯಾಟ್ಸನ್ - ETV Bharath Kannada news

ಡೇವಿಡ್​ ವಾರ್ನರ್​ ರನ್​ ವೈಫಲ್ಯಕ್ಕೆ ಉತ್ತರ ಕೊಡಲು ಮತ್ತು ತಮ್ಮನ್ನು ಸಾಬೀತುಪಡಿಸಲು ಐಪಿಎಲ್​ ವೇದಿಕೆಯಾಗಿದೆ ಎಂದು ವ್ಯಾಟ್ಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

says Shane Watson
ವ್ಯಾಟ್ಸನ್ ಇಂಗಿತ
author img

By

Published : Mar 24, 2023, 10:16 PM IST

ಮುಂಬೈ: ಮಾರ್ಚ್ 31 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಂಡದ ಹೊಸ ನಾಯಕ ಡೇವಿಡ್ ವಾರ್ನರ್ ಅವರು "ತಮ್ಮನ್ನು ಸಾಬೀತುಪಡಿಸಲು ಅವಕಾಶ" ಹೊಂದಿರುತ್ತಾರೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಮತ್ತು ದೆಹಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಹೇಳಿದ್ದಾರೆ. 2022ರ ಡಿಸೆಂಬರ್​ 30 ರಂದು ಕಾರು ಅಪಘಾತದಲ್ಲಿ ಪಂತ್ ಗಾಯಗೊಂಡ ನಂತರ 2023ರ ಐಪಿಎಲ್​ಗೆ ಡೆಲ್ಲಿ ನಾಯಕತ್ವವನ್ನು ವಾರ್ನರ್​ಗೆ ನೀಡಲಾಗಿದೆ.

ವಾರ್ನರ್ ಈ ಹಿಂದೆ ಡೆಲ್ಲಿ ಫ್ರಾಂಚೈಸಿಯ ಆಗಿನ ಡೆಲ್ಲಿ ಡೇರ್‌ಡೆವಿಲ್ಸ್‌ಗೆ ನಾಯಕರಾಗಿದ್ದರು. ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗೆ ಐಪಿಎಲ್‌ನಲ್ಲಿ ನಾಯಕರಾಗಿ ಯಶಸ್ವಿಯಾಗಿದ್ದರು. 2016ರ ಆವೃತ್ತಿಯಲ್ಲಿ ಎಸ್​ಆರ್​ಹೆಚ್​ಗೆ ಪ್ರಶಸ್ತಿ ಗೆಲುವಿಗೆ ಕಾರಣರಾದರು. ವಾರ್ನರ್ ಹೈದರಾಬಾದ್​ ತಂಡದಲ್ಲಿ ಯಶಸ್ಸನ್ನು ಹೊಂದಿದ್ದರು, ಆದರೆ ಬ್ಯಾಟ್‌ನೊಂದಿಗೆ ಅವರ ಕಳಪೆ ಫಾರ್ಮ್​ನಿಂದಾಗಿ ಮತ್ತು ಸತತ ಸೋಲಿನ ಕಾರಣ 2021ರ ಆವೃತ್ತಿಯಲ್ಲಿ ನಾಯಕತ್ವ ಕಳೆದುಕೊಂಡರು.

ಐಪಿಎಲ್​ನಲ್ಲಿ 5,881 ರನ್‌ಗಳೊಂದಿಗೆ ಹೆಚ್ಚು ಮೊತ್ತಗಳಿಸಿದವರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಅವರ ಬ್ಯಾಡ್​ ಫಾರ್ಮ್​ನಿಂದ ಕಳೆದ ಸೀಸನ್​ನಲ್ಲಿ ನಾಯಕತ್ವ ಕಳೆದುಕೊಂಡರು. ಜೊತೆಗೆ, ಕೆಲ ಪಂದ್ಯದಲ್ಲಿ ಬೆಂಚ್​ ಕಾದಿದ್ದಾರೆ. 2022ರ ಮೆಗಾ ಹರಾಜಿಗೂ ಮುನ್ನ ಸನ್​ ರೈಸರ್ಸ್​ ವಾರ್ನರ್​ ಅವರನ್ನು ಕೈಬಿಟ್ಟಿತ್ತು, ಡೇವಿಡ್​ ಮತ್ತೆ ಡೆಲ್ಲಿ ಪಳಯ ಸೇರಿಕೊಂಡಿದ್ದಾರೆ.

ಭಾರತ ಪ್ರವಾಸದಲ್ಲಿ ವೈಫಲ್ಯ: ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ನಾಲ್ಕು ಟೆಸ್ಟ್​ ಮತ್ತು ಮೂರು ಏಕದಿನ ಸರಣಿಯನ್ನು ಆಡಲು ಭಾರತಕ್ಕೆ ಬಂದಿತ್ತು. ಮೊದಲೆರಡು ಟೆಸ್ಟ್​ನಲ್ಲಿ ರನ್​ ಗಳಿಸುವಲ್ಲಿ ವಾರ್ನರ್​ ವಿಫಲರಾಗಿದ್ದರು. ಎರಡನೇ ಟೆಸ್ಟ್​ ವೇಳೆ ಗಾಯಗೊಂಡು ಆಸಿಸ್​ಗೆ ಮರಳಿದ್ದರು. ಚೇತರಿಸಿಕೊಂಡು ಕೊನೆಯ ಏಕದಿನ ಪಂದ್ಯಕ್ಕೆ ತಂಡಕ್ಕೆ ಸೇರಿದ್ದರು. ಏಕದಿನ ಪಂದ್ಯದಲ್ಲಿ 23ರನ್​ಗೆ ಔಟ್​ ಆಗಿದ್ದರು. ಟೆಸ್ಟ್​ನ ಮೂರು ಇನ್ನಿಂಗ್ಸ್​ನಲ್ಲಿ ವಿಫಲತೆ ಕಂಡಿದ್ದ ವಾರ್ನರ್​ ಫಾರ್ಮ್​ ಬಗ್ಗೆ ಟೀಕೆಗಳು ಬಂದಿದ್ದವು.

ವಾರ್ನರ್​ ಸಾಬೀತು ಪಡಿಸುತ್ತಾರೆ: ಸಂದರ್ಶನ ಒಂದರಲ್ಲಿ ವಾರ್ನರ್​ ಬಗ್ಗೆ ಮಾತನಾಡಿದ ವ್ಯಾಟ್ಸನ್,"ಡೇವಿಡ್ ವಾರ್ನರ್ ಕೇವಲ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವುದಲ್ಲ, ಅಗ್ರಸ್ಥಾನದಲ್ಲಿ ರನ್​ ಗಳಿಸಲಿದ್ದಾರೆ. ಅವರು ಸಾಬೀತುಪಡಿಸಲು ಒಂದು ಅಂಶ ಬೇಕಿದೆ. ಅವರ ಬೆನ್ನು ಹತ್ತಿ ಎಲ್ಲರೂ ಬರುವಂತೆ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಐಪಿಎಲ್​​ನಲ್ಲಿ ಈಗಾಗಲೇ ಹೆಚ್ಚು ರನ್​ ಗಳಿಸಿದ್ದಾರೆ. ಆಗಲೂ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಈಗಲೂ ಅದೇ ಜಾಗದಲ್ಲಿ ತಮ್ಮ ಹಳೆ ಬ್ಯಾಟಿಂಗ್​ ಫಾರ್ಮ್​ನ್ನು ಮುಂದುವರೆಸಲಿದ್ದಾರೆ. ಅವರು ಒಂದು ಪ್ಲಾಟ್​ಪಾರ್ಮ್​ ಸೆಟ್​ ಮಾಡುವುದು ಬಹಳಾ ಮುಖ್ಯವಾಗಿದೆ" ಎಂದಿದ್ದಾರೆ.

"ಮಿಚೆಲ್ ಮಾರ್ಷ್​ಗೆ ಇದು ಮತ್ತೊಂದು ದೊಡ್ಡ ಸೀಸನ್ ಆಗಲಿದೆ. ಅವರು ಬ್ಯಾಟಿಂಗ್​​ನಲ್ಲಿ ಮಾತ್ರ ಅದ್ಭುತ ಕೌಶಲ್ಯವನ್ನು ಹೊಂದಿದ್ದಾರೆ. ಮಾರ್ಷ್​ ಬ್ಯಾಟಿಂಗ್​ ಮತ್ತು ಆಟದಿಂದ ಈ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಅವರ ಜೊತೆಗೆ ದಕ್ಷಿಣ ಆಫ್ರಿಕಾ ಆಟಗಾರ ರಿಲೀ ರೊಸ್ಸೌವ್ ಕೂಡ ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಪರವಾಗಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್​ನಲ್ಲಿ ಅವರ ಆಟವನ್ನು ಕಂಡಿದ್ದೇನೆ. ಅವರು ವಿಶ್ವ ದರ್ಜೆಯ ಹಿಟ್ಟರ್​" ಎಂದು ವ್ಯಾಖ್ಯಾನಿಸಿದ್ದಾರೆ.

2023ರ ಆವೃತ್ತಿಯಲ್ಲಿ ಡೆಲ್ಲಿ ಹೆಚ್ಚು ಆಲ್​ರೌಂಡರ್​ಗಳನ್ನು ಹೊಂದಿದೆ. ಹಲವು ಪ್ರತಿಭಾವಂತ ಆಟಗಾರರಿದ್ದಾರೆ. ಕಮಲೇಶ್ ನಾಗರಕೋಟಿ ಮತ್ತು ಚೇತನ್ ಸಕರಿಯಾ ಹೆಚ್ಚಿನ ಭರವಸೆ ಇದೆ. ಅವರ ಜೊತೆಗೆ ನಮ್ಮ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸಹ ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ. ತಂಡ ಎಲ್ಲಾ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ರಿಷಬ್​ ಪಂತ್​ ಅವರು ತಂಡಕ್ಕೆ ದೊಡ್ಡ ನಷ್ಟವಾಗಿದ್ದಾರೆ. ಅವರ ಜಾಗಕ್ಕೆ ಪರ್ಯಾಯ ಸೂಚಿಸುವುದು ಕಷ್ಟ ಎಂದಿದ್ದಾರೆ.

ಇದನ್ನೂ ಓದಿ: "ರಿಷಬ್​ ಜೊತೆಗಿನ ಕ್ಷಣಗಳು ಮಿಸ್​ ಆಗುತ್ತವೆ": ಡೆಲ್ಲಿ ಕ್ಯಾಪಿಟಲ್ಸ್​ ಪಾಳಯ ಸೇರಿದ ನಾಯಕ ವಾರ್ನರ್​ ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.