ETV Bharat / sports

ಟೀಂ ಇಂಡಿಯಾದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ವೆಂಕಟೇಶ್​ ಅಯ್ಯರ್ ಜೊತೆ Etv ಭಾರತ ಸಂದರ್ಶನ

ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20(T20 Series against new zealand)ಸರಣಿಯಲ್ಲಿ ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ವೆಂಕಟೇಶ್​ ಅಯ್ಯರ್​ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅವರೊಂದಿಗೆ ಈಟಿವಿ ಭಾರತ ವಿಶೇಷ ಸಂದರ್ಶನ ನಡೆಸಿದೆ..

Cricketer Venkatesh Iyer
Cricketer Venkatesh Iyer
author img

By

Published : Nov 12, 2021, 4:54 PM IST

Updated : Nov 12, 2021, 5:11 PM IST

ಇಂದೋರ್​(ಮಧ್ಯಪ್ರದೇಶ): ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮಿಂಚು ಹರಿಸಿ ಎಲ್ಲರ ಗಮನ ಸೆಳೆದಿರುವ ವೆಂಕಟೇಶ್​ ಅಯ್ಯರ್(venkatesh iyer)​ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಬರುವ ನವೆಂಬರ್​ 17ರಿಂದ ನ್ಯೂಜಿಲ್ಯಾಂಡ್(India vs new zealand)​ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ವೆಂಕಟೇಶ್​ ಅಯ್ಯರ್ ಜೊತೆ Etv ಭಾರತ ಸಂದರ್ಶನ

ಟೀಂ ಇಂಡಿಯಾ(Team India cricket team) ಹಿರಿಯರ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಉದಯೋನ್ಮುಖ ಕ್ರಿಕೆಟರ್​ ವೆಂಕಟೇಶ್​ ಅಯ್ಯರ್ ಜೊತೆ ಈಟಿವಿ ಭಾರತ EXCLUSIVE ಸಂದರ್ಶನ ನಡೆಸಿದೆ.

ಮನದಾಳ ಬಿಚ್ಚಿಟ್ಟ ವೆಂಕಟೇಶ್ ಅಯ್ಯರ್​​

ಟೀಂ ಇಂಡಿಯಾ ಪರ ಆಡಬೇಕೆಂಬುದು ನನ್ನ ಕನಸಾಗಿತ್ತು. ಕಠಿಣ ಪರಿಶ್ರಮದಿಂದಾಗಿ ಆ ಕನಸು ನನಸಾಗಿದೆ. ಇಷ್ಟುದಿನ ಸತತ ಹೋರಾಟದ ಫಲವಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವೆ. ಈ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

Cricketer Venkatesh Iyer
ಕ್ರಿಕೆಟರ್ ವೆಂಕಟೇಶ್ ಅಯ್ಯರ್​

ಭಾರತ ತಂಡದಲ್ಲಿ ಆಡಲಿದ್ದೇನೆ ಎಂಬುದು ತುಂಬಾ ಹೆಮ್ಮೆಯ ವಿಚಾರವಾಗಿದೆ. ದೈಹಿಕ ತರಬೇತಿ ಬಗ್ಗೆ ಹೆಚ್ಚಿನ ಕಾಳಜಿವಹಿಸಿದ್ದೇನೆ ಎಂದರು. ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಟ ಆಡುತ್ತೇನೆ. ದೇಶವನ್ನ ಗೆಲ್ಲಿಸಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದಿರುವ ವೆಂಕಟೇಶ್​ ಅಯ್ಯರ್​, ಪ್ರತಿ ಪಂದ್ಯದಲ್ಲಿ ಆಡುವಾಗ ಹೆಚ್ಚಿನ ಅನುಭವ ಪಡೆದುಕೊಳ್ಳಲು ಮುಂದಾಗುತ್ತೇನೆ ಎಂದರು.

ಪದವೀಧರನಾಗಿದ್ದು, ಸಿಎ ತಯಾರಿ ನಡೆದಿತ್ತು. ಇದೇ ವೇಳೆ ರಣಜಿಯಲ್ಲಿ ಅಡಲು ಅವಕಾಶ ಸಿಕ್ಕಿದ್ದರಿಂದ ಅಧ್ಯಯನದತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ.

Cricketer Venkatesh Iyer
ವೆಂಕಟೇಶ್​ ಅಯ್ಯರ್​ ಚಿಕ್ಕ ಬಾಲಕನಾಗಿದ್ದಾಗ

ನಮ್ಮ ದೇಶದಲ್ಲಿ ಕ್ರಿಕೆಟ್​ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಸ್ಟ್ರೀಟ್​​ ಕ್ರಿಕೆಟ್​​ ಆಡಲು ಶುರು ಮಾಡಿದ್ದ ನಾನು ಇದೀಗ ವೃತ್ತಿಪರ ಕ್ರಿಕೆಟಿಗರನಾಗಿದ್ದೇನೆ. ಕ್ರಿಕೆಟಿಗನ ಬದುಕಿನಲ್ಲಿ ಸ್ಟ್ರೀಟ್​ ಕ್ರಿಕೆಟ್​ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂದಿದ್ದಾರೆ.

ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡುತ್ತಿದ್ದೇನೆ. ಹೀಗಾಗಿ, ಇತರೆ ಹಿರಿಯ ಆಟಗಾರರಿಂದ ಹೆಚ್ಚಿನ ಅನುಭವ ಪಡೆದುಕೊಳ್ಳಲು ಬಯಸುತ್ತೇನೆ. ರಾಹುಲ್​ ದ್ರಾವಿಡ್​​(Rahul Dravid) ಅವರಂತಹ ಕೋಚ್​ ನಮ್ಮೊಂದಿಗೆ ಇದ್ದಾರೆ. ಅವರ ಅಡಿಯಲ್ಲಿ ಬಹಳಷ್ಟು ಕಲಿಯುವುದು ಬಾಕಿ ಇದೆ ಎಂದಿದ್ದಾರೆ.

Cricketer Venkatesh Iyer
ಐಪಿಎಲ್​ನಲ್ಲಿ ಮಿಂಚು ಹರಿಸಿರುವ ವೆಂಕಟೇಶ್ ಅಯ್ಯರ್​

ದಾದಾ ಅವರ ದೊಡ್ಡ ಅಭಿಮಾನಿ ಅಯ್ಯರ್​

ನಾನು ಬಾಲ್ಯದಿಂದಲೂ ಸೌರವ್ ಗಂಗೂಲಿ ಅವರನ್ನ ಪ್ರೀತಿಸುತ್ತೇನೆ. ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಪ್ರತಿಯೊಂದು ಪಂದ್ಯದಲ್ಲೂ ಅವರ ಶೈಲಿ ನಕಲು ಮಾಡಲು ಪ್ರಯತ್ನಿಸುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ಪರೋಕ್ಷವಾಗಿ ದಾದಾ ಸಾಕಷ್ಟು ಸಹಾಯ ಮಾಡಿದ್ದಾರೆ. ಇತ್ತೀಚೆಗಷ್ಟೇ ನಾನು ಅವರನ್ನ ಭೇಟಿಯಾಗಿದ್ದೆ ಎಂದರು.

Last Updated : Nov 12, 2021, 5:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.