ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ 49 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 286 ರನ್ ಗಳಿಸಿದೆ. ನೆದರ್ಲೆಂಡ್ಸ್ ಗೆಲುವಿಗೆ 287 ರನ್ ಬೇಕಿದೆ.
-
A solid partnership between Mohammed Rizwan and Saud Shakeel has stabilized the Pakistan innings 💪#CWC23 | #PAKvNED
— ICC (@ICC) October 6, 2023 " class="align-text-top noRightClick twitterSection" data="
Details 👇https://t.co/md17l3vb7R
">A solid partnership between Mohammed Rizwan and Saud Shakeel has stabilized the Pakistan innings 💪#CWC23 | #PAKvNED
— ICC (@ICC) October 6, 2023
Details 👇https://t.co/md17l3vb7RA solid partnership between Mohammed Rizwan and Saud Shakeel has stabilized the Pakistan innings 💪#CWC23 | #PAKvNED
— ICC (@ICC) October 6, 2023
Details 👇https://t.co/md17l3vb7R
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೇವಲ 15 ಎಸೆತಗಳಲ್ಲಿ 3 ಬೌಂಡರಿಸಹಿತ 12 ರನ್ ಗಳಿಸಿದ ಫಖರ್ ಜಮಾನ್, ನೆದರ್ಲೆಂಡ್ಸ್‌ನ ವ್ಯಾನ್ ಬೀಕ್ ಬೌಲಿಂಗ್ ದಾಳಿಗೆ ಮೊದಲ ಬಲಿಯಾದರು. ಫಖರ್ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಇಮಾಮ್-ಉಲ್-ಹಕ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. 19 ಎಸೆತಗಳಲ್ಲಿ 2 ಬೌಂಡರಿಸಹಿತ 15 ರನ್ ಗಳಿಸಿದ ಅವರು ಭರವಸೆ ಹುಸಿಗೊಳಿಸಿದರು. ತಂಡಕ್ಕೆ ವರದಾನವಾಗಬೇಕಿದ್ದ ನಾಯಕ ಬಾಬರ್ ಅಜಮ್ ಕೂಡ ಬಂದ ದಾರಿಯಲ್ಲಿಯೇ ಹೋದರು. 18 ಬಾಲ್ಗಳನ್ನು ಎದುರಿಸಿದ ಭರವಸೆಯ ಆಟಗಾರ, ಕೇವಲ 5 ರನ್ ಕೊಡುಗೆ ನೀಡಿ ಪಾಕ್ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಜೊತೆಯಾಟ ತಂಡಕ್ಕೆ ಬಲ ನೀಡಿತು. ಇಬ್ಬರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ರನ್ ಕೋಟೆ ಕಟ್ಟಿಕೊಂಡಿತು. 75 ಬಾಲ್ಗಳನ್ನು ಎದುರಿಸಿದ ಮೊಹಮ್ಮದ್ ರಿಜ್ವಾನ್ 8 ಬೌಂಡರಿ ಸಹಿತ 68 ರನ್ ಕಲೆ ಹಾಕಿದರು. 52 ಬಾಲ್ ಎದುರಿಸಿದ ಸೌದ್ ಶಕೀಲ್ 1 ಸಿಕ್ಸ್ ಹಾಗೂ 9 ಬೌಂಡರಿಗಳೊಂದಿಗೆ 68 ರನ್ ಕೊಡುಗೆಯಾಗಿ ನೀಡಿದರು. ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದ ಈ ಜೋಡಿ ಔಟಾದ ಬೆನ್ನಲ್ಲೇ ಪಾಕ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಮೊಹಮ್ಮದ್ ನವಾಜ್ 39, ಶಾದಾಬ್ ಖಾನ್ 32 ರನ್ಗಳ ಹೊರತು ಉಳಿದ ಆಟಗಾರರಾದ ಇಫ್ತಿಕರ್ ಅಹ್ಮದ್ 9, ಹಸನ್ ಅಲಿ 0, ಶಾಹೀನ್ ಅಫ್ರಿದಿ ಔಟಾಗದೇ 13, ಹ್ಯಾರಿಸ್ ರೌಫ್ 16 ರನ್ ನೀಡಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ, ಪಾಕ್ 49 ಓವರ್ಗಳಲ್ಲಿ 286 ರನ್ಗಳಿಗೆ ಆಲೌಟ್ ಆಯಿತು.
-
An inspirational performance from Bas de Leede in the #PAKvNED clash lifts Dutch hopes in their opening #CWC23 game 🤩
— ICC (@ICC) October 6, 2023 " class="align-text-top noRightClick twitterSection" data="
Details 👇https://t.co/nclQHlJ2xP
">An inspirational performance from Bas de Leede in the #PAKvNED clash lifts Dutch hopes in their opening #CWC23 game 🤩
— ICC (@ICC) October 6, 2023
Details 👇https://t.co/nclQHlJ2xPAn inspirational performance from Bas de Leede in the #PAKvNED clash lifts Dutch hopes in their opening #CWC23 game 🤩
— ICC (@ICC) October 6, 2023
Details 👇https://t.co/nclQHlJ2xP
ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ 4 ವಿಕೆಟ್ ಪಡದರೆ, ಕಾಲಿನ್ ಅಕರ್ಮನ್ 2, ಆರ್ಯನ್ ದತ್, ಲೋಗನ್ ವ್ಯಾನ್ ಬೀಕ್, ಪಾಲ್ ವ್ಯಾನ್ ಮೀಕೆರೆನ್ ತಲಾ ಒಂದೊಂದು ವಿಕೆಟ್ ಪಡೆದರು.
ತಂಡಗಳು ಹೀಗಿವೆ:
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್(ನಾಯಕ/ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ಪಾಕಿಸ್ತಾನ (ಪ್ಲೇಯಿಂಗ್ XI): ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್