ETV Bharat / sports

ರೋಹಿತ್​​​-ರಾಹುಲ್​​​ ಅಬ್ಬರ... ಬಾಂಗ್ಲಾಕ್ಕೆ 315 ರನ್​​​ ಟಾರ್ಗೆಟ್​ ನೀಡಿದ ಟೀಂ ಇಂಡಿಯಾ - undefined

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶಕ್ಕೆ 315 ರನ್​​ಗಳ ಗೆಲುವಿನ ಗುರಿ ನೀಡಿದೆ.

ಇಂಡಿಯಾ
author img

By

Published : Jul 2, 2019, 6:56 PM IST

ಬರ್ಮಿಂಗ್​ಹ್ಯಾಮ್​: ಉಪ ನಾಯಕ ರೋಹಿತ್​ ಶರ್ಮಾರ ಅಮೋಘ ಶತಕ ಹಾಗೂ ಕೆ.ಎಲ್​.ರಾಹುಲ್​ರ​ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ, ಬಾಂಗ್ಲಾದೇಶ ಗೆಲುವಿಗೆ 315 ರನ್​ಗಳ ಟಾರ್ಗೆಟ್​ ನೀಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್​ ಶರ್ಮಾ ಹಾಗೂ ಕೆ.ಎಲ್. ರಾಹುಲ್​ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 180 ರನ್​ ಸೇರಿಸಿದ ಈ ಜೋಡಿ ಬಾಂಗ್ಲಾ ಬೌಲಿಂಗ್​ನ್ನು ಸಮರ್ಥವಾಗಿ ಎದುರಿಸಿತು. ಈ ಮಧ್ಯೆ ರೋಹಿತ್​ ಶರ್ಮಾ ಈ ವಿಶ್ವಕಪ್​ನಲ್ಲಿ ದಾಖಲೆಯ 4ನೇ ಶತಕ ಸಿಡಿಸಿದರು. 92 ಎಸೆತಗಳಲ್ಲಿ 104 ರನ್​ ಬಾರಿಸಿದ ರೋಹಿತ್,​ ಸೌಮ್ಯ ಸರ್ಕಾರ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು.

  • That's the end of the innings – India finish on 314/9.

    Rohit Sharma was the star once again, his fourth century of #CWC19 leading the way for India. Mustafizur Rahman was the pick of the Bangladesh bowlers with 5/59!#BANvIND | #CWC19 pic.twitter.com/O6FWQwjLHl

    — Cricket World Cup (@cricketworldcup) July 2, 2019 " class="align-text-top noRightClick twitterSection" data=" ">

ಇನ್ನು ಮತ್ತೊಂದೆಡೆ ಸಮಯೋಚಿತ ಬ್ಯಾಟಿಂಗ್​ ನಡೆಸಿದ ರಾಹುಲ್​ 77 ರನ್​ ಗಳಿಸಿ ಬೃಹತ್​ ಮೊತ್ತ ದಾಖಲಿಸುವಲ್ಲಿ ಎಡವಿದರು. ಇನ್ನುಳಿದಂತೆ ನಾಯಕ ವಿರಾಟ್​ ಕೊಹ್ಲಿ 26 ಹಾಗೂ ರಿಷಭ್​ ಪಂತ್​ 48 ರನ್​ ಗಳಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು. ಈ ಮಧ್ಯೆ ಹಾರ್ದಿಕ್​ ಪಾಂಡ್ಯ ಶೂನ್ಯಕ್ಕೆ ಔಟ್​ ಆಗಿದ್ದು ಭಾರತದ ರನ್​ ವೇಗಕ್ಕೆ ಕಡಿವಾಣ ಬಿದ್ದಂತಾಯಿತು.

ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಅವಕಾಶ ಪಡೆದ ದಿನೇಶ್​ ಕಾರ್ತಿಕ್​ ನಿರಾಸೆ ಮೂಡಿಸಿದರು. ತಂಡದ ಕೊನೆಯ ಓವರ್​ಗಳಲ್ಲಿ ರನ್​ ಗತಿ ಏರಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಕಾರ್ತಿಕ್ ಕೇವಲ 8 ರನ್​ಗೆ ಔಟ್​ ಆದರು. ಕೊನೆಯ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದ ಧೋನಿ 35 ರನ್​ ಗಳಿಸಿದರು. ಒಟ್ಟಾರೆ ಟೀಂ ಇಂಡಿಯಾಗೆ 180 ರನ್​ಗಳ ಭರ್ಜರಿ ಆರಂಭ ಸಿಕ್ಕರೂ ಕೂಡ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 314 ರನ್ ಪೇರಿಸಿತು.

ಬಾಂಗ್ಲಾದೇಶ ಪರ ಮುಸ್ತಾಫಿಜರ್​ ರಹಮಾನ್​ 5 ಹಾಗೂ ಶಕಿಬ್​ ಅಲ್​ ಹಸನ್, ರುಬೆಲ್​ ಹುಸೇನ್​ ಹಾಗೂ ​ಸೌಮ್ಯ ಸರ್ಕಾರ್​ ತಲಾ 1 ವಿಕೆಟ್ ಪಡೆದರು.

Intro:Body:

cricket

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.