ಮುಂಬೈ: ಐಸಿಸಿ ಟಿ-20 ವಿಶ್ವಕಪ್ಗಾಗಿ ಘೋಷಣೆಯಾಗಿರುವ ಟೀಂ ಇಂಡಿಯಾದಲ್ಲಿ ಇದೀಗ ಮಹತ್ವದ ಬದಲಾವಣೆಯಾಗಿದ್ದು, ಆಲ್ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ವೇಗಿ ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಲಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದು ಇನ್ನೂ ಖಾತ್ರಿಯಾಗಿಲ್ಲವಾದ್ದರಿಂದ ಆಯ್ಕೆ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ.
-
🚨 NEWS 🚨: Shardul Thakur replaces Axar Patel in #TeamIndia's World Cup squad. #T20WorldCup
— BCCI (@BCCI) October 13, 2021 " class="align-text-top noRightClick twitterSection" data="
More Details 🔽
">🚨 NEWS 🚨: Shardul Thakur replaces Axar Patel in #TeamIndia's World Cup squad. #T20WorldCup
— BCCI (@BCCI) October 13, 2021
More Details 🔽🚨 NEWS 🚨: Shardul Thakur replaces Axar Patel in #TeamIndia's World Cup squad. #T20WorldCup
— BCCI (@BCCI) October 13, 2021
More Details 🔽
ಟೀಂ ಇಂಡಿಯಾ ಟೆಸ್ಟ್ ಹಾಗೂ ಏಕದಿನದಲ್ಲೂ ಮಿಂಚು ಹರಿಸಿರುವ ಈ ಪ್ಲೇಯರ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ವಿಶ್ವಕಪ್ಗಾಗಿ ಘೋಷಣೆಯಾಗಿದ್ದ ತಂಡದಲ್ಲಿ ಅವರು ಮೀಸಲು ಆಟಗಾರರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅವರು, ಹೌದು, ನನಗೆ ನಿರಾಸೆಯಾಗಿದ್ದು ನಿಜ ಎಂದು ಹೇಳಿಕೊಂಡಿದ್ದರು. ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ನಲ್ಲಿ ಸಿಎಸ್ಕೆ ಪರ ಕಣಕ್ಕಿಳಿಯುತ್ತಿರುವ ಶಾರ್ದೂಲ್ ಆಡಿರುವ 15 ಪಂದ್ಯಗಳಿಂದ 18 ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದು, ಪ್ರಮುಖ ಬ್ಯಾಟರ್ಗಳ ವಿಕೆಟ್ ಕಿತ್ತು ಮಿಂಚಿದ್ದಾರೆ.
ಇದನ್ನೂ ಓದಿರಿ: T20 World cup : ವಿಶ್ವಕಪ್ಗಾಗಿ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ
ಟೀಂ ಇಂಡಿಯಾ ತಂಡ: ವಿರಾಟ್ ಕೊಹ್ಲಿ(ಕ್ಯಾಪ್ಟನ್) ,ರೋಹಿತ್ ಶರ್ಮಾ(ಉಪನಾಯಕ), ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ರಾಹುಲ್ ಚಹರ್, ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹರ್, ಅಕ್ಷರ್ ಪಟೇಲ್
ಇದರ ಜೊತೆಗೆ ವೇಗದ ಬೌಲರ್ಗಳಾದ ಆವೇಶ್ ಖಾನ್, ಉಮ್ರಾನ್ ಮಲಿಕ್, ಹರ್ಷಲ್ ಪಟೇಲ್, ವೆಂಕಟೇಶ್ ಅಯ್ಯರ್, ಕರಣ್ ಶರ್ಮಾ, ಶಹ್ಬಾದ್ ಅಹ್ಮದ್ ಹಾಗೂ ಕೆ. ಗೌತಮ್ ನೆಟ್ ಪ್ಲೇಯರ್ಗಳಾಗಿ ಆಯ್ಕೆಯಾಗಿದ್ದಾರೆ.
ಟೀಂ ಇಂಡಿಯಾ ಅಕ್ಟೋಬರ್ 24ರಂದು ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದ್ದು, ಅದಕ್ಕೂ ಮುಂಚಿತವಾಗಿ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಲಿದ್ದಾರೆ.