ETV Bharat / sports

ಮಾರಕ ಬೌಲರ್​ಗೆ ಟೀಂ ಇಂಡಿಯಾ ಮಣೆ.. T-20 ವಿಶ್ವಕಪ್​​ ನೆಟ್​​ ಬೌಲರ್​ ಆಗಿ ಉಮ್ರಾನ್ ಮಲಿಕ್​ ಆಯ್ಕೆ

ಐಪಿಎಲ್​ನಲ್ಲಿ ತನ್ನ ವೇಗದ ಬೌಲಿಂಗ್​ನಿಂದ ಕ್ರಿಕೆಟ್​ ಪ್ರಿಯರನ್ನು ಬೆರಗುಗೊಳಿಸಿರುವ ಸನ್​ರೈಸರ್ಸ್​ ಹೈದರಾಬಾದ್​ ವೇಗಿ ಉಮ್ರಾನ್​ ಮಲಿಕ್ ಇದೀಗ ವಿಶ್ವಕಪ್​ಗಾಗಿ ಟೀಂ ಇಂಡಿಯಾದ ನೆಟ್​ ಬೌಲರ್​ ಆಗಿ ಆಯ್ಕೆಯಾಗಿದ್ದಾರೆ.

Umran Malik
Umran Malik
author img

By

Published : Oct 9, 2021, 10:06 PM IST

ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ಹೊಸ ಪ್ರತಿಭೆ ಉಮ್ರಾನ್​ ಮಲಿಕ್​ ಇದೀಗ ಭಾರೀ ಸದ್ದು ಮಾಡ್ತಿದ್ದು, ದಾಖಲೆಯ 153 ಕಿ.ಮೀ ವೇಗದಲ್ಲಿ ಬೌಲ್​ ಮಾಡಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಪ್ರತಿಭೆಗೆ ಇದೀಗ ಟೀಂ ಇಂಡಿಯಾ ಮಣೆ ಹಾಕಿದೆ.

ಸನ್​ರೈಸರ್ಸ್​​​ ಹೈದರಾಬಾದ್​​ ತಂಡದ ವೇಗಿ ಟಿ. ನಟರಾಜನ್​​ ಕೊರೊನಾ ಸೋಂಕಿಗೊಳಗಾಗುತ್ತಿದ್ದಂತೆ ಬದಲಿ ಆಟಗಾರನಿಗೆ ಮಣೆ ಹಾಕಿದ್ದ SRH ಅನ್​ಕ್ಯಾಪ್ಡ್​, ಮಧ್ಯಮ ವೇಗಿ ಉಮ್ರಾನ್​ ಮಲಿಕ್​​ಗೆ ಮಣೆ ಹಾಕಿತ್ತು. 21 ವರ್ಷದ ಮಲಿಕ್​​ ಈಗಾಗಲೇ ಲಿಸ್ಟ್​ A ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಪರ ಏಕೈಕ ಟಿ - 20 ಪಂದ್ಯವನ್ನಾಡಿ 4 ವಿಕೆಟ್​ ಪಡೆದಿದ್ದಾರೆ. ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿ ನೆಟ್​ ಬೌಲರ್​ ಆಗಿ ಗುರುತಿಸಿಕೊಂಡಿದ್ದ ಇವರು, ಆಡಿರುವ 3 ಪಂದ್ಯಗಳಿಂದ 2 ವಿಕೆಟ್ ಪಡೆದುಕೊಂಡಿದ್ದಾರೆ.

ವೇಗದ ಬೌಲಿಂಗ್​​ನಿಂದಲೇ ಎಲ್ಲರ ಗಮನ ಸೆಳೆದಿರುವ ಜಮ್ಮು - ಕಾಶ್ಮೀರದ ವೇಗಿ ಉಮ್ರಾನ್​ ಮಲಿಕ್​, ಇದೀಗ ಟಿ -20 ವಿಶ್ವಕಪ್​ಗಾಗಿ ಟೀಂ ಇಂಡಿಯಾ ನೆಟ್​ ಬೌಲರ್​​ ಆಗಿ ಆಯ್ಕೆಯಾಗಿದ್ದಾರೆ. 153 ಕಿ.ಮೀ ವೇಗದಲ್ಲಿ ಬೌಲ್​ ಮಾಡಿ ದಾಖಲೆ ಬರೆದಿರುವ ಉಮ್ರಾನ್ ಬಗ್ಗೆ ಈಗಾಗಲೇ ವಿರಾಟ್​​ ಕೊಹ್ಲಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಜೊತೆಗೆ ಮಲಿಕ್​ ಜರ್ಸಿಗೆ ಕೊಹ್ಲಿ ಸಹಿ ಕೂಡ ಮಾಡಿದ್ದಾರೆ.

ಇದನ್ನೂ ಓದಿರಿ: ಉಮ್ರಾನ್ ಮಲಿಕ್ ಪ್ರಗತಿಯನ್ನು ಗಮನಿಸಬೇಕಾದ ಅಗತ್ಯವಿದೆ: ವಿರಾಟ್ ಕೊಹ್ಲಿ

23 ವರ್ಷದ ವೇಗದ ಬೌಲರ್​ ಉಮ್ರಾನ್​ ಮಲಿಕ್ ಈಗಾಗಲೇ ರಣಜಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗಿಯಾಗಿದ್ದು, ಇವರ ಬೌಲಿಂಗ್​ ಪ್ರದರ್ಶನದಿಂದ ಆಕರ್ಷಿತವಾದ ಹೈದರಾಬಾದ್​ ತಂಡ ನೆಟ್​​ ಬೌಲರ್​​ ಆಗಿ ಆಯ್ಕೆ ಮಾಡಿತ್ತು. ಇದೀಗ ವಿಶ್ವಕಪ್​​ಗಾಗಿ ನೆಟ್ ಬೌಲರ್​ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.