ಲಂಡನ್ : ಭಾರತದ ಆರಂಭಿಕ ಬ್ಯಾಟ್ಸ್‌ಮೆನ್ ರೋಹಿತ್ ಅತ್ಯಂತ ವೇಗವಾಗಿ ಆಸ್ಟ್ರೇಲಿಯಾ ವಿರುದ್ಧ 2 ಸಾವಿರ ರನ್ ಗಳಿಸಿ ವಿಶ್ವದಾಖಲೆ ಮಾಡಿದ್ದಾರೆ. ನಿನ್ನೆಯ ಪಂದ್ಯಕ್ಕೂ ಮುನ್ನ ಈ ರೆಕಾರ್ಡ್ ಮಾಡೋದಕ್ಕೆ ರೋಹಿತ್‌ಗೆ ಬರೀ 20ರನ್ ಮಾತ್ರ ಬೇಕಿತ್ತು.
ಕಾಂಗರೂಗಳ ವಿರುದ್ಧ ವೇಗವಾಗಿ 2 ಸಾವಿರ ರನ್!
ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ಸಾವಿರ ರನ್ ಪೇರಿಸಿದ ಕೀರ್ತಿಗೆ ಭಾಜನರಾಗಲು ಮುಂಬೈಕರ್ ರೋಹಿತ್ ಶರ್ಮಾಗೆ ಬರೀ 20 ರನ್ ಮಾತ್ರ ಬೇಕಿತ್ತು. 12ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಭರ್ಜರಿ ಬೌಂಡರಿ ಸಿಡಿಸಿದ ರೋಹಿತ್, ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದನ್ನ ಸಮರ್ಥಿಸಿಕೊಂಡರು. ಅಷ್ಟೇ ಅಲ್ಲ, ಅದೇ ಬೌಂಡರಿ ಮೂಲಕ ವೇಗವಾಗಿ 2 ಸಾವಿರ ರನ್‌ನ ಆಸೀಸ್ ವಿರುದ್ಧ ಪೇರಿಸಿ ರೆಕಾರ್ಡ್ ಮಾಡಿದರು. ಕಾಂಗರೂಗಳ ವಿರುದ್ಧ 37 ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ವೇಗವಾಗಿ 2 ಸಾವಿರ ರನ್ ಗಳಿಸಿದ್ದಾರೆ.
37 ಇನ್ನಿಂಗ್ಸ್‌ನಲ್ಲೇ ದಾಖಲೆ ಬರೆದರು ರೋಹಿತ್ ಶರ್ಮಾ!
ಆದರೆ, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಆಸೀಸ್ ವಿರುದ್ಧ ಇದೇ ರೆಕಾರ್ಡ್ ಮಾಡಲು 51 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆಸೀಸ್ ವಿರುದ್ಧ ಈ ಮೊದಲು ಸಚಿನ್, ವೆಸ್ಟ್ ಇಂಡೀಸ್‌ನ ವಿವಿ ರಿಚರ್ಡ್ಸ್‌ಸನ್ ಮತ್ತು ಡೆಸ್ಮಂಡ್ ಹೇನ್ಸ್ ವೇಗವಾಗಿ 2 ಸಾವಿರ ರನ್ ಆಸೀಸ್ ವಿರುದ್ಧ ಸಿಡಿಸಿದ್ದಾರೆ. ಅವರ ಬಳಿಕ ಈಗ ರೋಹಿತ್ ಶರ್ಮಾ ಅತೀ ವೇಗವಾಗಿ ಕಡಿಮೆ ಇನ್ನಿಂಗ್ಸ್‌ಗಳಲ್ಲೇ ದಾಖಲೆ ಬರೆದಿದ್ದಾರೆ. ಸಚಿನ್ (51), ರಿಚರ್ಡ್ಸ್‌ಸನ್ (45), ಹಾಗೂ ಡೆಸ್ಮಂಡ್ ಹೇನ್ಸ್ (59) ಇನ್ನಿಂಗ್ಸ್‌ನಲ್ಲಿ ಆಸೀಸ್ ವಿರುದ್ಧ 2 ಸಾವಿರ ರನ್ ಪೇರಿಸಿದ್ದರು.
ಆಸೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಕೀರ್ತಿಯೂ ಸಿಕ್ಕಿತು!
ರೋಹಿತ್ ಆಸೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಅನ್ನೋ ಶ್ರೇಯ ಕೂಡ ಪಡೆದಿದ್ದಾರೆ. ಜತೆಗೆ ಆಸೀಸ್ ವಿರುದ್ಧ ಅತೀ ಹೆಚ್ಚು ಸೆಂಚುರಿ ಭಾರಿಸಿದ 3ನೇ ಭಾರತೀಯ ಆಟಗಾರನೆಂಬ ಹೆಮ್ಮೆ ಕೂಡ ಮುಂಬೈಕರ್ ಪಾಲಾಗಿದೆ. ಆಸೀಸ್ ವಿರುದ್ಧ ಸಚಿನ್ (9), ವಿರಾಟ್ ಕೊಹ್ಲಿ (8) ಹಾಗೂ ರೋಹಿತ್ ಶರ್ಮಾ (7) ಶತಕಗಳನ್ನ ಸಿಡಿಸಿದ್ದಾರೆ. ನಿನ್ನೆಯ ಆಸೀಸ್ ವಿರುದ್ಧದ ಪಂದ್ಯದಲ್ಲಿ 70 ಬಾಲ್‌ಗೆ ಅದ್ಭುತ 57 ರನ್ ಸಿಡಿಸಿದ ರೋಹಿತ್, ನತನ್ ಕಲ್ಟರ್ ಬೌಲ್‌ನಲ್ಲಿ ಫ್ಲಿಕ್ ಮಾಡಲು ಯತ್ನಿಸಿ ಕೀಪರ್ ಅಲೆಕ್ಸ್ ಕ್ಯಾರಿ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ, ಭಾರತ ತಂಡ ಅದ್ಭುತ ಆರಂಭವನ್ನೇ ಪಡೆಯಿತು. ಶಿಖರ್ ಧವನ್ ಜತೆಗೆ ಸೇರಿ 127 ರನ್ ಸೇರಿಸಿದ್ದರು ರೋಹಿತ್ ಶರ್ಮಾ.