ಇಸ್ಲಾಮಾಬಾದ್(ಪಾಕಿಸ್ತಾನ): ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಾಮೆಂಟ್ ಆರಂಭಗೊಳ್ಳಲಿದೆ. ಇದಕ್ಕಾಗಿ ಎಲ್ಲ ದೇಶಗಳ ಕ್ರಿಕೆಟ್ ಬೋರ್ಡ್ ಸಜ್ಜುಗೊಂಡಿವೆ. ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕೂಡ ಭಾಗಿಯಾಗಲಿದೆ. ಆದರೆ, ಅದರ ನಡೆಗೆ ಇದೀಗ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿದೆ.
ಈ ಸಲದ ಟಿ-20 ವಿಶ್ವಕಪ್ ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದ್ರೀಗ ಕೋವಿಡ್ನಿಂದಾಗಿ ದುಬೈನಲ್ಲಿ ಆಯೋಜಿಸಲಾಗ್ತಿದ್ರೂ ಇದಕ್ಕೆ ಆತಿಥ್ಯ ಮಾತ್ರ ಭಾರತದ್ದಾಗಿದೆ. ಹೀಗಾಗಿ, ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಎಲ್ಲ ತಂಡಗಳು ತಮ್ಮ ತಮ್ಮ ಜರ್ಸಿ ಮೇಲೆ 'ICC'Men's T20 World Cup India '021' ಎಂದು ಬರೆದುಕೊಳ್ಳಬೇಕು.
ಆದರೆ, ಪಾಕಿಸ್ತಾನ ಮಾತ್ರ ತಮ್ಮ ಜರ್ಸಿ ಮೇಲೆ 'T20 World Cup UAE 2021' ಎಂದು ಬರೆಯಿಸಿಕೊಂಡಿದೆ ಎನ್ನಲಾಗಿದೆ. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
Pakistan 🇵🇰 T20 World Cup Kit 🙂 pic.twitter.com/AaTWIl63EI
— Thakur (@hassam_sajjad) October 6, 2021 " class="align-text-top noRightClick twitterSection" data="
">Pakistan 🇵🇰 T20 World Cup Kit 🙂 pic.twitter.com/AaTWIl63EI
— Thakur (@hassam_sajjad) October 6, 2021Pakistan 🇵🇰 T20 World Cup Kit 🙂 pic.twitter.com/AaTWIl63EI
— Thakur (@hassam_sajjad) October 6, 2021
ಇದನ್ನೂ ಓದಿರಿ: 2021ರ IPLನಲ್ಲಿ ಮೂಡಿ ಬಂತು ಸ್ಫೋಟಕ ಫಿಫ್ಟಿ.. 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇಶನ್ ಆರ್ಭಟ
ಪಾಕಿಸ್ತಾನದ ಈ ನಡೆಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಕಿಕೊಂಡಿರುವ ಜರ್ಸಿ ಫೋಟೋ ಶೇರ್ ಮಾಡಿದ್ದಾರೆ. ಇದರ ಮೇಲೆ 'ICC'Men's T20 World Cup India '021' ಎಂದು ಬರೆಯಲಾಗಿದೆ.
-
Australia leaked T20 World Cup 2021 jersey😍
— SportsTiger (@sportstigerapp) September 27, 2021 " class="align-text-top noRightClick twitterSection" data="
Picture Credit: CA/Glenn Maxwell#GlennMaxwell #AustraliaCricket #T20WorldCup2021 #SportsTiger pic.twitter.com/RFX25QfIEg
">Australia leaked T20 World Cup 2021 jersey😍
— SportsTiger (@sportstigerapp) September 27, 2021
Picture Credit: CA/Glenn Maxwell#GlennMaxwell #AustraliaCricket #T20WorldCup2021 #SportsTiger pic.twitter.com/RFX25QfIEgAustralia leaked T20 World Cup 2021 jersey😍
— SportsTiger (@sportstigerapp) September 27, 2021
Picture Credit: CA/Glenn Maxwell#GlennMaxwell #AustraliaCricket #T20WorldCup2021 #SportsTiger pic.twitter.com/RFX25QfIEg
ಐಸಿಸಿ ಟಿ-20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೊಬರ್ 24 ರಂದು ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭ ಮಾಡಲಿದೆ.