ಲಂಡನ್: ರಿಚರ್ಡ್ ಕೆಟೆಲ್ಬರೊ ಮೈದಾನದಲ್ಲಿ ನಡೆಯುವ ಬಾಂಗ್ಲಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದರೆ ಬಾಂಗ್ಲಾ ತಂಡಕ್ಕೆ 500 ರಿಂದ 600ರನ್ ಟಾರ್ಗೆಟ್ ನೀಡುತ್ತೇವೆ ಎಂದು ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-
Sarfaraz Ahmed "we will try to score 500" #PAKvBAN #CWC19 pic.twitter.com/JPN3sQ5DR8
— Saj Sadiq (@Saj_PakPassion) July 4, 2019 " class="align-text-top noRightClick twitterSection" data="
">Sarfaraz Ahmed "we will try to score 500" #PAKvBAN #CWC19 pic.twitter.com/JPN3sQ5DR8
— Saj Sadiq (@Saj_PakPassion) July 4, 2019Sarfaraz Ahmed "we will try to score 500" #PAKvBAN #CWC19 pic.twitter.com/JPN3sQ5DR8
— Saj Sadiq (@Saj_PakPassion) July 4, 2019
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಫರಾಜ್, 316 ರನ್ಗಳಿಂದ ಜಯಗಳಿಸಬೇಕು ಎಂಬುದ ಸುಲಭದ ಮಾತಲ್ಲ. ಮೊದಲು ಬ್ಯಾಟಿಂಗ್ ಆಯ್ದುಕೊಂಡು 500 ರಿಂದ 600 ರನ್ ಗಳಿಸಿದರೆ ಮಾತ್ರ ಇಷ್ಟು ರನ್ಗಳ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯ. ನಾವು ಕೂಡ ಉತ್ತಮ ಟಾರ್ಗೆಟ್ ನೀಡುತ್ತೇವೆ ಎಂದು ಸರ್ಫರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಪಾಕ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 350 ರನ್ ಗಳಿಸಿದ್ರೆ, 311 ರನ್ಗಳ ಅಂತರದಿಂದ ಜಯ ಸಾಧಿಸಬೇಕು. 400 ರನ್ಗಳಿಸಿದ್ರೆ 316 ರನ್ಗಳ ಅಂತರದಿಂದ ಜಯ ಸಾಧಿಸಬೇಕು. 450 ರನ್ ಗಳಿಸಿದ್ರೆ 321 ರನ್ಗಳ ಅಂತರದಿಂದ ಗೆಲುವು ದಾಖಲಿಸಿದ್ರೆ ಮಾತ್ರ ಉತ್ತಮ ರನ್ರೇಟ್ ಆಧಾರದ ಮೇಲೆ ಸೆಮಿಫೈನಲ್ ತಲುಪುವ ಅವಕಾಶವಿದೆ.
ಬಾಂಗ್ಲಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ್ರೆ ಪಾಕ್ ಔಟ್:
ಬಾಂಗ್ಲಾ ಏನಾದ್ರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡರೆ ಪಾಕಿಸ್ತಾನದ ಸೆಮಿಫೈನಲ್ ಕನಸಿಗೆ ತಣ್ಣೀರು ಬೀಳಲಿದೆ.