ಲಂಡನ್: ಕನ್ನಡಿಗ ಕೆ.ಎಲ್.ರಾಹುಲ್ (108) ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (113) ಅವರ ಆಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ 2ನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 95 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ, ಟೀಂ ಇಂಡಿಯಾವನ್ನ ಬ್ಯಾಟಿಂಗ್ಗೆ ಆಹ್ವಾನಿಸಿತು. ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕ ಆಟಗಾರರು ರನ್ ಗಳಿಸಲು ಪರದಾಡಿದರು. ರೋಹಿತ್ ಶರ್ಮಾ 42 ಎಸೆತಗಳಲ್ಲಿ 19 ಹಾಗೂ ಧವನ್ 9 ಎಸೆತಗಳಲ್ಲಿ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ 47 ಹಾಗೂ ವಿಜಯ್ ಶಂಕರ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗೆ ತಂಡ 102 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ರಾಹುಲ್ ಹಾಗೂ ಧೋನಿ 5ನೇ ವಿಕೆಟ್ಗೆ 164 ರನ್ಗಳ ಜೊತೆಯಾಟದ ಮೂಲಕ ಭರ್ಜರಿ ಶತಕಗಳನ್ನು ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಧೋನಿ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 73 ಎಸೆತಗಳಲ್ಲಿ ಶತಕ ಬಾರಿಸಿದರೆ, ರಾಹುಲ್ 99 ಬಾಲ್ಗಳಲ್ಲಿ 108 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ಗಳ ಬೃಹತ್ ಮೊತ್ತ ಪೇರಿಸಿತು.
-
That's that from Cardiff, #TeamIndia win by 95 runs. pic.twitter.com/tuDveXagSp
— BCCI (@BCCI) May 28, 2019 " class="align-text-top noRightClick twitterSection" data="
">That's that from Cardiff, #TeamIndia win by 95 runs. pic.twitter.com/tuDveXagSp
— BCCI (@BCCI) May 28, 2019That's that from Cardiff, #TeamIndia win by 95 runs. pic.twitter.com/tuDveXagSp
— BCCI (@BCCI) May 28, 2019
360 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ 49 ರನ್ಗೆ 2 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ಸೌಮ್ಯ ಸರ್ಕಾರ್ (25) ಹಾಗೂ ಅನುಭವಿ ಶಕಿಬ್ (0) ಔಟ್ ಆದರು. ಆದರೆ ಬಳಿಕ ಮತ್ತೊಬ್ಬ ಓಪನರ್ ಲಿಟನ್ ದಾಸ್ (73) ಹಾಗೂ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಹೀಮ್ (90) ಮೂರನೇ ವಿಕೆಟ್ಗೆ 120 ರನ್ ಸೇರಿಸಿ ಬಾಂಗ್ಲಾ ಗೆಲುವಿಗೆ ಹೋರಾಡಿದರು.
ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಬಾಂಗ್ಲಾ ಕುಸಿತದ ಹಾದಿ ಹಿಡಿಯಿತು. ಇನ್ನುಳಿದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದ ಕಾರಣ ಅಂತಿಮವಾಗಿ ಬಾಂಗ್ಲಾದೇಶ 49.3 ಓವರ್ಗಳಲ್ಲಿ 266 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 95 ರನ್ಗಳಿಂದ ಸೋಲುಂಡಿತು.
ಭಾರತದ ಪರ ವೇಗಿ ಬುಮ್ರಾ 2, ಸ್ಪಿನ್ನರ್ಗಳಾದ ಕುಲದೀಪ್ ಹಾಗೂ ಚಹಲ್ ತಲಾ 3 ಮತ್ತು ಜಡೆಜಾ 1 ವಿಕೆಟ್ ಕಬಳಿಸಿದರು. ಇನ್ನು ಮೊದಲ ಅಭ್ಯಾಸ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ವಿರಾಟ್ ಪಡೆ ಈ ಗೆಲುವಿನ ಮೂಲಕ ಆತ್ಮವಿಶ್ವಾಸಕ್ಕೆ ಮರಳಿದೆ.