ಇಂಗ್ಲೆಂಡ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆಲ್ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ ಟೂರ್ನಿಯ ಬಗ್ಗೆ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.
- " class="align-text-top noRightClick twitterSection" data="">
ಹಾರ್ದಿಕ್ ಪಾಂಡ್ಯ ವಿಶ್ವಕಪ್ ಟೂರ್ನಿ ಕುರಿತು ತಮ್ಮ ಯೋಚನೆ ಏನು ಎಂದು ಹಂಚಿಕೊಂಡಿರುವ ವಿಡಿಯೋವನ್ನ ಐಸಿಸಿ ತನ್ನ ಯೂಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಮಾತನಾಡಿರುವ ಹಾರ್ದಿಕ್ ಟೀಂ ಇಂಡಿಯಾಗೆ ಆಡುವುದು ನನ್ನ ಕನಸಾಗಿತ್ತು. ಅದರಲ್ಲೂ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದು, ನನಗೆ ಅತೀವ ಆನಂದ ಉಂಟುಮಾಡಿದೆ ಎಂದು ಹಾರ್ದಿಕ್ ಹರ್ಷ ವ್ಯಕ್ತಪಡಿಸಿದ್ದಾರೆ.
2011ರ ವಿಶ್ವಕಪ್ ಗೆದ್ದಾಗ ಗೆಳೆಯರೊಂದಿಗೆ ನಾನು ಕೂಡ ರಸ್ತೆಯಲ್ಲೇ ಸಂಭ್ರಮಾಚರಣೆ ನಡೆಸಿದ್ದೇ. ಇಂದು ನಾನು ಕೂಡ ವಿಶ್ವಕಪ್ ಆಡುವ ತಂಡದಲ್ಲಿ ಸ್ಥಾನ ಪಡೆದಿದ್ದೇನೆ. ಅಂದು ಕಪ್ ಗೆಲ್ಲಿಸಿಕೊಟ್ಟ ಧೋನಿ ಅವರ ಹೆಗಲಮೇಲೆ ಕೈ ಹಾಕಿಕೊಂಡು ಮಾತನಾಡುತ್ತಿದ್ದೇನೆ ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದಿದ್ದಾರೆ.
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬೇಕು ಎಂದು ಕಳೆದ 3 ವರ್ಷಗಳಿಂದ ಸಾಕಷ್ಟು ಶ್ರಮ ವಹಿಸಿದ್ದೇನೆ. ಅದರಂತೆ ಇಂದು ತಂಡದಲ್ಲಿ ಸ್ಥಾನ ಪಡೆದಿದ್ದೇನೆ. ನನಗೆ ಚಾಲೆಂಜ್ ಎಂದರೆ ತುಂಬಾ ಇಷ್ಟ, ಯಾವುದೇ ಒತ್ತಡವಿಲ್ಲದೇ ಆಟವಾಡಲು ಬಯಸುತ್ತೇನೆ. ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿರಬೇಕು, ಇದೇ ನನ್ನ ಯೋಚನೆ ಮತ್ತು ಗುರಿ ಎಂದಿದ್ದಾರೆ.
ಪಾಕ್ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಂಡ್ಯ ರನ್ ಔಟ್ ಆಗಿದ್ದಕ್ಕೆ ಜಡೇಜಾ ವಿರುದ್ಧ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಪಾಂಡ್ಯ, ನಾನು ಜಡೇಜಾ ಬಳಿ ಕ್ಷಮೆ ಕೇಳಿದ್ದೇನೆ. ಆ ಸಮಯದಲ್ಲಿ ನಾನು ತುಂಬಾ ಹಾಗೆ ರಿಯಾಕ್ಟ್ ಮಾಡಿದ್ದು ತಪ್ಪು ಎಂದಿದ್ದಾರೆ. ಜಡ್ಡು ಕೂಡ ಹಾರ್ದಿಕ್ ಬಗ್ಗೆ ಮಾತನಾಡಿದ್ದು, ಹಾರ್ದಿಕ್ ಯಾವುದೇ ಒತ್ತಡವಿಲ್ಲದೇ ಬ್ಯಾಟ್ ಬೀಸುತ್ತಾರೆ. ಅವರೊಬ್ಬ ರಾಕ್ಸ್ಟಾರ್ ಎಂದಿದ್ದಾರೆ.
ಸದ್ಯ ಪ್ರಸಕ್ತ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 7 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದ್ರೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 27 ಎಸೆತಗಳಲ್ಲಿ 4 ಬೌಡರಿ ಮತ್ತು 3 ಸಿಕ್ಸರ್ ಸಹಿತ 48 ರನ್ ಸಿಡಿಸಿದ್ದಾರೆ.