ETV Bharat / sports

ಏಕದಿನ ರ‍್ಯಾಂಕಿಂಗ್: 1,258 ದಿನಗಳ ನಂತರ ಅಗ್ರಪಟ್ಟ ಕಳೆದುಕೊಂಡ ಕೊಹ್ಲಿ, ನಂ 1 ಸ್ಥಾನಕ್ಕೇರಿದ ಬಾಬರ್​ - ಏಕದಿನ ಕ್ರಿಕೆಟ್​​ನ ಅಗ್ರಸ್ಥಾನ

ಟೀಂ ಇಂಡಿಯಾದ ನಾಯಕ, ಬ್ಯಾಟಿಂಗ್​ ದಿಗ್ಗಜ ವಿರಾಟ್​ ಕೊಹ್ಲಿ ಏಕದಿನದ ನಂಬರ್​ ಒನ್​ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇವರ ಸ್ಥಾನಕ್ಕೆ ಪಾಕ್​ ಆಟಗಾರ ಬಾಬರ್ ಅಜಮ್ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಮೂರು ವರ್ಷಗಳ ಬಳಿಕ ಕೊಹ್ಲಿ ನಂಬರ್​​​ವನ್​​ ಸ್ಥಾನ ಕಳೆದುಕೊಂಡಿದ್ದಾರೆ.

Babar dethrones King Kohli, ends his 3-year-long reign as top ODI batsman
ಬಾಬರ್ ಅಜಮ್ ಮತ್ತು ವಿರಾಟ್​ ಕೊಹ್ಲಿ
author img

By

Published : Apr 14, 2021, 5:19 PM IST

Updated : Apr 14, 2021, 7:02 PM IST

ದುಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ 1258 ದಿನಗಳ ನಂತರ ಏಕದಿನದ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಪಟ್ಟವನ್ನು ಕಳೆದುಕೊಂಡಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನೂತನ ನಂಬರ್ 1 ಬ್ಯಾಟ್ಸ್​ಮನ್ ಆಗಿ ಹೊರ ಹೊಮ್ಮಿದ್ದಾರೆ. ಬುಧವಾರ ಪುರುಷರ ಏಕದಿನ ಕ್ರಿಕೆಟ್​ನ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು ಬಾಬರ್ ನಂಬರ್​ ಒನ್​ ಸ್ಥಾನಕ್ಕೇರಿದ ಪಾಕಿಸ್ತಾನದ 4ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

  • For the first time in his career, @babarazam258 has become the No.1 ODI batsman 🙌

    Read the story of his incredible rise to the top 📰👇

    — ICC (@ICC) April 14, 2021 " class="align-text-top noRightClick twitterSection" data=" ">

ಟೀಂ ಇಂಡಿಯಾದ ರನ್​ ಮಿಷನ್​ ವಿರಾಟ್ ಕೊಹ್ಲಿ ನಾಲ್ಕು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದರು. ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪಾಕ್​ ತಂಡದ ನಾಯಕ ಬಾಬರ್ ಅಜಮ್ ಉತ್ತಮ ಪ್ರದರ್ಶನ ತೋರಿದ್ದು ಶತಕ 3 ಪಂದ್ಯಗಳಿಂದ 250+ ರನ್​ಗಳಿಸಿದ್ದರು. ಅವರ ಈ ಪ್ರದರ್ಶನವೇ ಕೊಹ್ಲಿಯನ್ನು ಹಿಂದಿಕ್ಕಲು ನೆರವಾಗಿದೆ.

ವಿರಾಟ್ ಕೊಹ್ಲಿ ಅವರು 2017 ಜೂನ್​​ನಿಂದ ಇಲ್ಲಿಯವೆಗೂ ಸುಮಾರು 41 ತಿಂಗಳು ಅಥವಾ 1258 ದಿನಗಳ ಕಾಲ ಪ್ರಥಮ ಸ್ಥಾನದಲ್ಲಿದ್ದರು. ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ.

Last Updated : Apr 14, 2021, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.