ನವದೆಹಲಿ: ಭಾರತದ ಲೆಗ್ಸ್ಪಿನ್ನರ್ ಯಜುವೇಂದ್ರ ಚಾಹಲ್ ವಿಶ್ವದ ಅತ್ಯುತ್ತಮ ಸ್ಪಿನ್ನರ್ ಆಗಿದ್ದಾರೆ. ಅವರು ಕ್ರೀಸ್ಅನ್ನು ಬಳಸಿಕೊಂಡರೆ ಇನ್ನು ಹೆಚ್ಚಿನ ಪರಿಣಾಮಕಾರಿಯಾಗಬಲ್ಲರು ಎಂದು ಪಾಕಿಸ್ತಾನದ ಮಾಜಿ ಸ್ಪಿನ್ ಬೌಲರ್ ಮುಷ್ತಾಕ್ ಅಹ್ಮದ್ ತಿಳಿಸಿದ್ದಾರೆ.
ಪಾಕಿಸ್ತಾನದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮುಷ್ತಾಕ್, ಭಾರತ ತಂಡದ ಪರ ಸೀಮಿತ ಓವರ್ಗಳ ಪಂದ್ಯದಲ್ಲಿ ಮಧ್ಯಮ ಓವರ್ಗಳಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಗೇಮ್ ಚೇಂಜರ್ಗಳಾಗಿದ್ದಾರೆ.
ಚಾಹಲ್ ಅತ್ಯುತ್ತಮ ಬೌಲರ್ ಆದರೆ ಅವರು ಕ್ರೀಸ್ ಅನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಅವರು ಕೆಲವು ಎಸೆತಗಳನ್ನು ವೈಡ್ ಆಫ್ ದಿ ಕ್ರೀಸ್ನಲ್ಲಿ ಮಾಡಬೇಕು. ಇಂತಹ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳನ್ನು ಗೊಂದಲಕ್ಕೀಡು ಮಾಡಬಹುದು. ಹಾಗೆಯೇ ಫ್ಲಾಟ್ ಫಿಚ್ ಆದರೆ ಸ್ಟಂಪ್ ಟು ಸ್ಟಂಪ್ ಬೌಲಿಂಗ್ ಮಾಡಬಹುದು ಎಂದು ಪಾಕಿಸ್ತಾನ ಸ್ಪಿನ್ನರ್ ಚಾಹಲ್ಗೆ ಸಲಹೆ ನೀಡಿದ್ದಾರೆ.
ಇನ್ನು ಚಾಹಲ್ ಹಾಗೂ ಕುಲ್ದೀಪ್ ಯಾದವ್ ಹಾಗೂ ಚಾಹಲ್ ಸೀಮಿತ ಓವರ್ಗಳಲ್ಲಿ ಯಶಸ್ಸು ಕಾಣಲು ವಿಕೆಟ್ ಕೀಪರ್ ಧೋನಿ ನೀಡುತ್ತಿದ್ದ ಕೆಲವು ಸಲಹೆಗಳು ಕಾರಣ ಎಂದು ಪಾಕ್ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಪ್ರಸ್ತುತ ಚಾಹಲ್ ಜೊತೆಗೆ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಹಾಗೂ ಶದಾಬ್ ಖಾನ್ ಕೂಡ ಪ್ರಸ್ತುತ ಅತ್ಯುತ್ತಮ ಸ್ಪಿನ್ನರ್ಗಳಾಗಿದ್ದಾರೆ ಎಂದಿದ್ದಾರೆ
2016ರಲ್ಲಿ ಜಿಂಬಾಬ್ವೆ ವಿರುದ್ಧ ವೃತ್ತಿ ಜೀವನಕ್ಕೆ ಕಾಲಿಟ್ಟ ಚಾಹಲ್ 52 ಏಕದಿನ ಪಂದ್ಯಗಳಿಂದ 91 ವಿಕೆಟ್, 42 ಟ್ವೆಂಟಿ-20 ಪಂದ್ಯಗಳಲ್ಲಿ 55 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 42ಕ್ಕೆ 6,ಟಿ20 25ಕ್ಕೆ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.