ಮುಂಬೈ: 2020ರಲ್ಲಿ ಕೋವಿಡ್ 19 ಸಾಂಕ್ರಾಮಿಕಕ್ಕೆ ಸಿಲುಕಿ ಕ್ರೀಡಾ ಜಗತ್ತು ನಲುಗಿ ಹೋಗಿದೆ. ಆದರೂ ಕೆಲವು ಕ್ರೀಡಾ ಲೋಕದಲ್ಲಿ ಮರೆಯಾಗದ ನೆನಪುಗಳ ಅಭಿಮಾನಿಗಳ ಮನದಲ್ಲಿ ಉಳಿದುಕೊಂಡಿವೆ. ಅದರಲ್ಲಿ ಸಿಹಿ ನೆನಪು ಒಂದು ಕಡೆಯಾದರೆ, ಕೆಲವು ಕಹಿ ಘಟನೆಗಳು ಅಭಿಮಾನಿಗಳನ್ನು ಭಾದಿಸಿವೆ.
ಸಾನಿಯಾ ಮಿರ್ಜಾ ಕಮ್ಬ್ಯಾಕ್
![ಸಾನಿಯಾ ಮಿರ್ಜಾ](https://etvbharatimages.akamaized.net/etvbharat/prod-images/mirza_1801newsroom_1579330611_472_2412newsroom_1608804971_492.jpg)
ಭಾರತ ಪ್ರಸಿದ್ಧ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 2 ವರ್ಷಗಳ ನಂತರ ಟೆನ್ನಿಸ್ಗೆ ಮರಳಿದ್ದರು. ಅವರು ನಡಿಯಾ ಕಿಚನೋಕ್ ಅವರ ಜೊತೆಗೂಡಿ ಹೋಬರ್ಟ್ ಅಂತಾರಾಷ್ಟ್ರೀಯ ಕಪ್ ಗೆದ್ದಿದ್ದರು.
ಭಜರಂಗ್ ಪೂನಿಯಾಗೆ ಚಿನ್ನ
ಭಾರತದ ಭರವಸೆಯ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಮತ್ತು ವೀನಸ್ ಪೋಗಟ್ ರೋಮ್ ರ‍್ಯಾಂಕಿಂಗ್ ಸಿರೀಸ್ನಲ್ಲಿ ಚಿನ್ನದ ಪದಕ ಪಡೆದಿದ್ದರು.
ಕೋಬ್ ಬ್ರಿಯಾಂಟ್ ಸಾವು
![ಕೋಬ್ ಬ್ರಿಯಾಂಟ್](https://etvbharatimages.akamaized.net/etvbharat/prod-images/768-512-6856891-21-6856891-1587296137754_2412newsroom_1608804971_690.jpg)
ಅಮೆರಿಕದ ಬ್ಯಾಸ್ಕೆಟ್ ಬಾಲ್ ಆಟಗಾರ ಕೋಬ್ ಬ್ರಿಯಾಂಟ್ ಹಾಗೂ ಅವರ 13 ವರ್ಷದ ಮಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು. ಹೊಸ ವರ್ಷದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಈ ಸುದ್ದಿ ಆಘಾತ ತಂದಿತ್ತು. ಈ ದುರ್ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದರು.
ಆಸ್ಟ್ರೇಲಿಯನ್ ಓಪನ್
ವರ್ಷಾರಂಭದಲ್ಲಿ ಆರಂಭವಾಗಿದ್ದ ಆಸ್ಟ್ರೇಲಿಯನ್ ಓಪನ್ನಲ್ಲಿ ಸರ್ಬಿಯನ್ ಸ್ಟಾರ್ ನೊವಾಕ್ ಜೊಕೋವಿಕ್ ತಮ್ಮ 17ನೇ ಗ್ರ್ಯಾಂಡ್ಸ್ಲಾಮ್ ಮುಡಿಗೇರಿಸಿಕೊಂಡರೆ ಮತ್ತು ಅಮೇರಿಕಾದ ಸೋಫಿಯಾ ಕೆನಿನ್ ತಮ್ಮ ಚೊಚ್ಚಲ ಸಿಂಗಲ್ಸ್ ಗ್ರ್ಯಾಂಡ್ಸ್ಲಾಮ್ನಲ್ಲಿ ಚಾಂಪಿಯನ್ ಆಗುವ ಮೂಲಕ ಶುಭಾರಂಭ ಮಾಡಿದ್ದರು.
ಶರಪೋವಾ ನಿವೃತ್ತಿ
![ಮರಿಯಾ ಶರಪೋವಾ](https://etvbharatimages.akamaized.net/etvbharat/prod-images/6213221_maria-sharapova-2019-australian-open-getty_2412newsroom_1608804971_597.jpg)
ರಷ್ಯಾದ ಖ್ಯಾತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಫೆಬ್ರವರಿ 26 2020ರಂದು ತಮ್ಮ ಟೆನ್ನಿಸ್ ವೃತ್ತಿ ಬದುಕಿಗೆ ಗುಡ್ಬೈ ಹೇಳಿದರು. ಆಟದ ಜೊತೆಗೆ ತಮ್ಮ ಸೌಂದರ್ಯದಿಂದ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಶರಪೋವಾ 33 ವರ್ಷಕ್ಕೆ ನಿವೃತ್ತಿ ಘೋಷಿಸಿದ್ದು, ನಿಜಕ್ಕೂ ಆಶ್ಚರ್ಯ ತರಿಸಿತು.
ಕೋವಿಡ್ 19 ಭೀತಿಯಿಂದ 2020ರ ಟೋಕಿಯೋ ಒಲಿಂಪಿಕ್ ಮುಂದೂಡಿಕೆ
4 ವರ್ಷಗಳಿಗೊಮ್ಮೆ ಬರುವ ಮಹಾಕ್ರೀಡಾಕೂಟವಾದ ಒಲಿಂಪಿಕ್ಸ್ ಕೋವಿಡ್ 2020ಕ್ಕೆ ಟೋಕಿಯೋನಲ್ಲಿ ಆಯೋಜನೆಗೊಳ್ಳಬೇಕಿತ್ತು. ಆದರೆ, ಮಹಾಮಾರಿ ಕೊರೊನಾದಿಂದ ಒಂದು ವರ್ಷದ ಅವಧಿಗೆ ಮುಂದೂಡುವಂತಾಯಿತು. ಇದರ ಪರಿಣಾಮ 2.8 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೆಚ್ಚುವರಿ ವೆಚ್ಚ ಮಾಡುವಂತಾಗಿದೆ.
ಎಂ.ಎಸ್ ಧೋನಿ ನಿವೃತ್ತಿ
![ಎಂಸ್ ಧೋನಿ](https://etvbharatimages.akamaized.net/etvbharat/prod-images/768-512-9701137-thumbnail-3x2-ms_2412newsroom_1608804971_1091.jpg)
ಅಂತಾರಾಷ್ಟ್ರೀಯ ಕ್ರಿಕೆಟ್ ಭಾರತ ತಂಡದ ಮಾಜಿನ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದರು. ಅವರು ಆಗಸ್ಟ್ 15ರಂದು ಸಂಜೆ 19:29ಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿಯಾದ ಬೆನ್ನಲ್ಲೇ ಭಾರತ ತಂಡದ ಮತ್ತೊಬ್ಬ ಸ್ಟಾರ್ ಆಲ್ರೌಂಡರ್ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಟಿ-20 ವಿಶ್ವಕಪ್ ರದ್ದು
ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಕೋವಿಡ್ 19 ಕಾರಣದಿಂದ ರದ್ದಾಯಿತು. ಈ ವಿಶ್ವಕಪ್ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಬೇಕಿತ್ತು. ಬಿಸಿಸಿಐ ಜೊತೆಗಿನ ಸಂಬಂಧ ಘಟ್ಟಿಗೊಳಿಸಿಕೊಳ್ಳುವುದಕ್ಕೆ ಮತ್ತು ಐಪಿಎಲ್ಗೆ ದಾರಿ ಮಾಡಿಕೊಳ್ಳುವುದಕ್ಕೆ ವಿಶ್ವಕಪ್ ಮುಂದೂಡಲಾಗಿದೆ ಎಂದು ವಿವಾದ ಉಂಟಾಗಿತ್ತು.
ಐಪಿಎಲ್ ಆಯೋಜನೆ
![ಮುಂಬೈ ಇಂಡಿಯನ್ಸ್](https://etvbharatimages.akamaized.net/etvbharat/prod-images/289180_2312newsroom_1608717578_448_2412newsroom_1608804971_913.jpg)
ಜಗತ್ತಿನ ಶ್ರೀಮಿಂತ ಟಿ-20 ಲೀಗ್ ಆಗಿರುವ ಐಪಿಎಲ್ ಅನ್ನು ಬಿಸಿಸಿಐ ಯುಎಇನಲ್ಲಿ ಆಯೋಜನೆ ಮಾಡುವ ಮೂಲಕ ಸುದೀರ್ಘ ಸಮಯದಲ್ಲಿ ಕೋವಿಡ್ನಿಂದ ಬೇಸತ್ತ ಜನರಿಗೆ ಮನರಂಜನೆ ಒದಗಿಸಿತು. ಮುಂಬೈ ಇಂಡಿಯನ್ಸ್ ತಂಡ ದಾಖಲೆಯ 5ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು.
ಫ್ರೆಂಚ್ ಓಪನ್ ಗೆದ್ದು ವಿಶ್ವದಾಖಲೆ ಬರೆದ ನಡಾಲ್
![ರಾಫೆಲ್ ನಡಾಲ್](https://etvbharatimages.akamaized.net/etvbharat/prod-images/n-3-2_0907newsroom_1594298710_638_2412newsroom_1608804971_320.jpg)
ಸ್ಪೇನ್ನ ಟೆನಿಸ್ ಪ್ಲೇಯರ್ 2020ರ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ವಿಶ್ವದಾಖಲೆಯ 20ನೇ ಗ್ರ್ಯಾಂಡ್ಸ್ಲಾಮ್ ಗೆದ್ದರು. ಇವರು ಫೈನಲ್ನಲ್ಲಿ ಜೋಕೊವಿಕ್ ಅವರನ್ನು ಮಣಿಸುವ ಮೂಲಕ 13ನೇ ಫ್ರೆಂಚ್ ಓಪನ್ ಗೆದ್ದು ತಮ್ಮ ದಾಖಲೆ ಉತ್ತಮಪಡಿಸಿಕೊಂಡರು.
ಮರೋಡನಾ ಸಾವು
![ಡಿಯಾಗೋ ಮರಡೋನಾ](https://etvbharatimages.akamaized.net/etvbharat/prod-images/768-512-9734214-488-9734214-1606883175099_2412newsroom_1608804971_855.jpg)
ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ನವೆಂಬರ್ 25ರಂದು ಹೃದಯಾಘಾತದಿಂದ ಮೃತಪಟ್ಟರು. ಇವರು ಮಿದುಳು ಶಸ್ತ್ರಚಿಕಿತ್ಸೆ ಮಾಡಸಿಕೊಂಡಿದ್ದ ಅವರು 2 ವಾರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಫುಟ್ಬಾಲ್ ಲೋಕವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿತು.