ಲಂಡನ್: ನೆಟ್ಟಿಗರಲ್ಲಿ ಕೆಲವರು ಧೋನಿ ಅವರ ನಿಧಾನಗತಿ ಆಟದ ಬಗ್ಗೆ ಟೀಕೆಗಳ ಸುರಿಮಳೆಯನ್ನೇ ಹರಿಸುತ್ತಿದ್ದರೆ, ಅತ್ತ ಆಸ್ಟ್ರೇಲಿಯಾ ತಂಡದ ಮಾಜಿ ಕ್ಯಾಪ್ಟನ್ ಸ್ಟೀವ್ ವಾ ಮಾಹಿ ಬೆಂಬಲಕ್ಕೆ ನಿಂತುಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ಗೆ ಧೋನಿ ಇಲ್ಲದೇ ಹೋಗಿದ್ದರೂ ಟಪ್ ಕಾಂಪಿಟೇಷನ್ ನೀಡಲು ಹಾಗೂ ಗೆಲ್ಲಲೂ ಸಹ ಸಾಧ್ಯವಾಗ್ತಿರಲಿಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಧೋನಿ ಬಗ್ಗೆ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿದ ವಾ ಮಹೇಂದ್ರ ಸಿಂಗ್ ಬಗ್ಗೆ ಟೀಕೆಗಳು ಸರಿಯಲ್ಲ ಎಂದಿದ್ದಾರೆ. ಭಾರತದ ಪರ ಧೋನಿ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಅನೇಕ ಮಹತ್ವದ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಸೆಮಿಫೈನಲ್ ಮ್ಯಾಚ್ನಲ್ಲಿ ಭಾರತ ಇದ್ದ ಸನ್ನಿವೇಶ ವಿಶ್ಲೇಷಣೆ ಮಾಡುವುದಾದರೆ ಅವರಿಲ್ಲದೇ ಪಂದ್ಯ ಗೆಲ್ಲುವ ಸಾಧ್ಯತೆಯೇ ಇರಲಿಲ್ಲ ಎಂದಿದ್ದಾರೆ. ಇದೇ ಗಳಿಗೆಯಲ್ಲಿ ಎಲ್ಲ ಸಮಯದಲ್ಲಿ ಪಂದ್ಯಗಳನ್ನ ಗೆಲ್ಲಲು ಸಾಧ್ಯವೂ ಇಲ್ಲ ಎಂದಿರುವ ಅವರು, ಏಕದಿನ ಪಂದ್ಯಗಳನ್ನ ಬೆನ್ನಟ್ಟಿ ಗೆಲ್ಲುವುದು ಎಷ್ಟು ಕಷ್ಟ ಎಂದು ನಮಗೆ ಗೊತ್ತು. ಆದರೆ ಅಂತಹ ಪಂದ್ಯಗಳನ್ನ ಬೆನ್ನಟ್ಟಿ ಗೆಲ್ಲುವುದರಲ್ಲಿ ಎಲ್ಲರಿಂತ ಅತಿ ಹೆಚ್ಚು ಶ್ರೇಷ್ಠ ಧೋನಿ ಎಂದು ಸ್ಟೀವ್ ಬಣ್ಣನೆ ಮಾಡಿದ್ದಾರೆ.
ಬೌಲರ್ಗಳಾದ ಮ್ಯಾಟ್ ಹೆನ್ರಿ, ಟ್ರೆಂಟ್ ಬೋಲ್ಟ್ ಭಾರತದ ಟಾಪ್ ಆರ್ಡರ್ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು ಎಂದು ವಿಶ್ಲೇಷಣೆ ಮಾಡಿದ್ದಾರೆ.