ಸಿಡ್ನಿ: ಐಪಿಎಲ್ ವೇಳೆ ಗಾಯಗೊಂಡಿದ್ದ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಬುಧವಾರ ಭಾರತ ತಂಡದ ಜೊತೆಗೆ ನೆಟ್ಸ್ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.
ಅವರ ಫಿಟ್ನೆಸ್ ಬಗ್ಗೆ ಇನ್ನು ಯಾವುದೇ ಖಚಿತವಾದ ಮಾಹಿತಿ ತಿಳಿದು ಬಂದಿಲ್ಲವಾದರೂ, ಬುಧವಾರ ತಂಡದ ತರಬೇತುದಾರರೊಂದಿಗೆ 36 ವರ್ಷದ ಸಹಾ ಬ್ಯಾಟಿಂಗ್ ಮಾಡುವ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
-
Look who is batting in the nets today. Hello @Wriddhipops! 💪 #TeamIndia pic.twitter.com/GEzLKcSdVF
— BCCI (@BCCI) November 18, 2020 " class="align-text-top noRightClick twitterSection" data="
">Look who is batting in the nets today. Hello @Wriddhipops! 💪 #TeamIndia pic.twitter.com/GEzLKcSdVF
— BCCI (@BCCI) November 18, 2020Look who is batting in the nets today. Hello @Wriddhipops! 💪 #TeamIndia pic.twitter.com/GEzLKcSdVF
— BCCI (@BCCI) November 18, 2020
"ನೋಡಿ ಇಂದು ನೆಟ್ಸ್ನಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೆಲೋ ವೃದ್ಧಿಮಾನ್ ಸಹಾ" ಎಂದು ಟ್ವೀಟ್ನಲ್ಲಿ ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದೆ.
ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದ ಸಹಾ ನವೆಂಬರ್ 3ರಂದು ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಹ್ಯಾಮ್ಸ್ಟ್ರಿಂಗ್ನಿಂದ ಬಳಲಿದ್ದರು.
ನಂತರ 2 ಪಂದ್ಯಗಳಲ್ಲಿ ಅವರು ತಂಡದಿಂದ ಹೊರಬಿದ್ದಿದ್ದರು. ಆದರೆ, ಬಿಸಿಸಿಐ ಅವರ ಫಿಟ್ನೆಸ್ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು. ಗಂಗೂಲಿ ಕೂಡ ವೃದ್ದಿ ಟೆಸ್ಟ್ ಸರಣಿ ವೇಳೆಗೆ ಫಿಟ್ ಆಗಲಿದ್ದಾರೆ ಎಂದು ತಿಳಿಸಿದ್ದರು. ಐಪಿಎಲ್ನಲ್ಲಿ ಕೇವಲ 4 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸಹಾ 2 ಅರ್ಧಶತಕಗಳ ಸಹಿತ 214 ರನ್ ಗಳಿಸಿದ್ದರು.