ಕಿಂಗ್ಸ್ಟನ್: ಕೊನೆಯ ಟೆಸ್ಟ್ ಪಂದ್ಯವನ್ನಾದರೂ ಗೆಲ್ಲಲೇಬೇಕು ಎಂದು ಲೆಕ್ಕಾಚಾರ ಹಾಕಿದ್ದ ಆತಿಥೇಯರಿಗೆ ಕೊಹ್ಲಿ ಬಳಗ ಬೃಹತ್ ಗುರಿ ನೀಡಿದ್ದು, ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಎದುರಾಗಿದೆ. ಇನ್ನೆರಡು ದಿನದ ಆಟ ಬಾಕಿ ಇದ್ದು, ಎಂಟು ವಿಕೆಟ್ಗೆ 423 ರನ್ ಗಳಿಸಬೇಕಿದೆ.
ವಿಂಡೀಸ್ ತಂಡವನ್ನು 117 ರನ್ಗಳಿಗೆ ಕಟ್ಟಿಹಾಕಿ ಫಾಲೋಆನ್ ಹೇರದೆ ವಿರಾಟ್ ಪಡೆ ದ್ವಿತೀಯ ಇನ್ನಿಂಗ್ಸ್ ಆಡಿತ್ತು. ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್ನಲ್ಲಿ ಶತಕವೀರ ಹನುಮ ವಿಹಾರಿ ಮತ್ತೆ ತಂಡಕ್ಕೆ ಆಸರೆಯಾದರು.
-
🚨 India declare on 168/4 🚨
— ICC (@ICC) 1 September 2019 " class="align-text-top noRightClick twitterSection" data="
West Indies require 468 runs to win! pic.twitter.com/77HgtnaB9g
">🚨 India declare on 168/4 🚨
— ICC (@ICC) 1 September 2019
West Indies require 468 runs to win! pic.twitter.com/77HgtnaB9g🚨 India declare on 168/4 🚨
— ICC (@ICC) 1 September 2019
West Indies require 468 runs to win! pic.twitter.com/77HgtnaB9g
ಕನ್ನಡಿಗ ಕೆ.ಎಲ್.ರಾಹುಲ್ ಆರು ರನ್ಗೆ ಔಟಾಗಿ ಮತ್ತೆ ನಿರಾಸೆ ಮೂಡಿಸಿದರು. ಮತ್ತೋರ್ವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ನಾಲ್ಕು ರನ್ಗೆ ಪೆವಿಲಿಯನ್ ಸೇರಿದರು. ಚೇತೇಶ್ವರ ಪೂಜಾರ ಆಟ 27 ರನ್ಗೆ ಕೊನೆಯಾಯಿತು. ನಾಯಕ ಕೊಹ್ಲಿ ಶೂನ್ಯ ಸುತ್ತಿದರು.
ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕ (64) ಹಾಗೂ ಹನುಮ ವಿಹಾರಿ (53) ಅಜೇಯರಾಗುಳಿದರು. ಟೀಂ ಇಂಡಿಯಾ 164 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ವಿಂಡೀಸ್ ಗೆಲುವಿಗೆ 468 ರನ್ಗಳ ಗುರಿ:
ಗೆಲುವಿಗೆ ಬೃಹತ್ ಗುರಿ ಪಡೆದ ಆತಿಥೇಯರು ಆರಂಭದಲ್ಲೇ ಆಘಾತ ಅನುಭವಿಸಿದರು. 9 ರನ್ ಆಗಿದ್ದಾಗ ಕ್ರೆಗ್ ಬ್ರಾತ್ವೈಟ್(3) ಶಮಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇನ್ನೋರ್ವ ಓಪನರ್ ಜಾನ್ ಕ್ಯಾಂಪ್ಬೆಲ್(16) ಆಟ ಸಹ ಹೆಚ್ಚು ಹೊತ್ತು ನಡೆಯಲಿಲ್ಲ. ಎರಡನೇ ವಿಕೆಟ್ ಇಶಾಂತ್ ಪಾಲಾಯಿತು.
-
Stumps and day three belongs to India.
— ICC (@ICC) 1 September 2019 " class="align-text-top noRightClick twitterSection" data="
They will require eight wickets to win the second Test match as West Indies finish the day 45/2, chasing 468 for victory! pic.twitter.com/nQw9yFOMAe
">Stumps and day three belongs to India.
— ICC (@ICC) 1 September 2019
They will require eight wickets to win the second Test match as West Indies finish the day 45/2, chasing 468 for victory! pic.twitter.com/nQw9yFOMAeStumps and day three belongs to India.
— ICC (@ICC) 1 September 2019
They will require eight wickets to win the second Test match as West Indies finish the day 45/2, chasing 468 for victory! pic.twitter.com/nQw9yFOMAe
ಡಾರೆನ್ ಬ್ರಾವೋ(18) ಹಾಗೂ ಶಮಾರ ಬ್ರೂಕ್ಸ್(4) ರನ್ ಗಳಿಸಿ ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಇಂದಿನ ಆಟದಲ್ಲಿ ಬಹುತೇಕ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ಸದ್ಯ ಕೊನೆಯ ಟೆಸ್ಟ್ ವಿರಾಟ್ ಪಡೆ ಹಿಡಿತದಲ್ಲಿದ್ದು, ಸರಣಿ ಕ್ಲೀನ್ ಸ್ವೀಪ್ ಸಾಧ್ಯತೆ ನಿಚ್ಚಳವಾಗಿದೆ.