ಮೆಲ್ಬೋರ್ನ್: ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪದ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ಅಲ್ಲಿನ ಪ್ರವಾಸ ರದ್ದುಗೊಳಿಸಿದ್ದು, ಇದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಬೇಸರ ವ್ಯಕ್ತಪಡಿಸಿದೆ.
ಮೂರು ಟೆಸ್ಟ್ ಪಂದ್ಯಗಳನ್ನಾಡಲು ಆಸ್ಟ್ರೇಲಿಯಾ ತಂಡ ಇದೇ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಾಗಿತ್ತು. ಅದಕ್ಕಾಗಿ ಕಳೆದ ವಾರ ತಂಡ ಕೂಡ ಪ್ರಕಟಿಸಿತ್ತು. ಆದರೆ, ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿದೆ.
ಕ್ರಿಕೆಟ್ ದಕ್ಷಿಣ ಆಫ್ರಿಕಾ ಸರಣಿ ಮುಂದೂಡಿಕೆಯ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ "ತೀವ್ರ ನಿರಾಸೆಯನ್ನು" ವ್ಯಕ್ತಪಡಿಸಿದೆ. ದಕ್ಷಿಣ ಆಫ್ರಿಕಾದಲ್ಲಿ 1.5 ಮಿಲಿಯನ್ ಕೊರೊನಾ ಸೋಂಕಿತ ಪ್ರಕರಣಗಳಿದ್ದು, 44 ಸಾವಿರ ಜನರು ಸಾವನ್ನಪ್ಪಿದ್ದಾರೆ. ಜತೆಗೆ ನಿತ್ಯ ಹೆಚ್ಚಿನ ಸೋಂಕಿತ ಪ್ರಕರಣ ಅಲ್ಲಿ ಕಾಣ ಸಿಗುತ್ತಿದ್ದು, ಇದೇ ಕಾರಣಕ್ಕಾಗಿ ಪ್ರವಾಸ ರದ್ದುಗೊಳಿಸಲಾಗಿದೆ. ಕ್ರಿಕೆಟರ್ಸ್ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ತಂಡದ ಸಹಾಯಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
"ನಾವು ಈ ಸರಣಿಯನ್ನು ಆತಿಥ್ಯ ವಹಿಸಲು ಪ್ರಸ್ತಾಪಿಸಿದ್ದೇವೆ ಆದರೆ, ಕ್ರಿಕೆಟ್ ದಕ್ಷಿಣ ಆಫ್ರಿಕಾವು ತವು ಸುರಕ್ಷಿತ ಕ್ರಮ ತೆಗೆದುಕೊಂಡು ಸರಣಿ ನಡೆಸುವುದಾಗಿ ಹೇಳಿತ್ತು, ಹಾಗಾಗಿ ನಮ್ಮ ತಂಡ ಅದಕ್ಕೆ ಸನ್ನದವಾಗಿತ್ತು. ಆದರೆ, ಈಗ ಸರಣಿ ಮುಂದುಡಿಕೆ ಮಾಡಿದ್ದು ತೀವ್ರ ಬೇಸರ ತಂದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲೆ ಹೇಳಿದ್ದಾರೆ.
"ನಾವು ಆಟಗಾರರ ಸಂಘದೊಂದಿಗೆ ದೀರ್ಘವಾಗಿ ಮಾತನಾಡಿದ್ದೇವೆ, ನಾನು ತರಬೇತುದಾರರೊಂದಿಗೆ ಮಾತನಾಡಿದ್ದೇನೆ. ಆಟಗಾರರು ನಿರಾಸೆಗೊಂಡಿದ್ದಾರೆ, ಅವರು ಕ್ರಿಕೆಟ್ ಆಡಲು ಬಯಸುತಿದ್ದಾರೆ. ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದಾರೆ "ಎಂದು ಹಾಕ್ಲೆ ಹೇಳಿದರು.
ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ಜಯದೇವ್ ಉನಾದ್ಕತ್
ಇದಕ್ಕೆ ಸ್ಪಷ್ಟನೆ ನೀಡಿರುವ ಕ್ರಿಕೆಟ್ ದಕ್ಷಿಣ ಆಫ್ರಿಕಾ "ಪ್ರವಾಸವನ್ನು ಮುಂದುವರೆಸಲು ನಾವು ಎಲ್ಲವನ್ನು ಮಾಡಿದ್ದೆವು. ಆದರೆ, ಕೊನೆಯಲ್ಲಿ ನಾವು ಅಗಾಧವಾದ ವೈದ್ಯಕೀಯ ಸಲಹೆಯನ್ನು ಕೇಳಬೇಕಾಗಿತ್ತು, ಆದ್ದರಿಂದ ನಾವು ಅದನ್ನು ಐಸಿಸಿಯೊಂದಿಗೆ ಮುಂದುವರಿಸಲು ಸಾಧ್ಯವಾಗದಿದ್ದಕ್ಕೆ ಸರಣಿಯನ್ನ ಮೂಂದುಡಲಾಗಿದೆ ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.