ಅಹ್ಮದಾಬಾದ್: ಮೊದಲ ಟೆಸ್ಟ್ ಪಂದ್ಯದಲ್ಲಿ 227 ರನ್ಗಳಿಂದ ಸೋಲು ಕಂಡಿದ್ದ ಭಾರತ ತಂಡ ನಂತರ ತಿರುಗಿಬಿದ್ದು, 2 ಮತ್ತು 3 ನೇ ಟೆಸ್ಟ್ ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಭಾರತ ತಿರುಗಿಬಿದ್ದುದಕ್ಕಿಂತ ಹೆಚ್ಚು ಪಿಚ್ಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
2ನೇ ಟೆಸ್ಟ್ ಮೂರೂವರೆ ದಿನಕ್ಕೆ ಮುಗಿದರೆ, 3ನೇ ಟೆಸ್ಟ್ ಎರಡೇ ದಿನಕ್ಕೆ ಮುಗಿದಿತ್ತು. ಭಾರತ ಕ್ರಮವಾಗಿ 317 ಮತ್ತು 10 ವಿಕೆಟ್ಗಳಿಂದ ಜಯ ಸಾಧಿಸಿತ್ತು.
ಗುರುವಾರ 4ನೇ ಪಂದ್ಯಕ್ಕೂ ಮುನ್ನ ವಿರಾಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಟೆಸ್ಟ್ ಪಂದ್ಯ ಸ್ಪಿನ್ ಸ್ನೇಹಿಯಾಗಿರುವುದರಿಂದ 5 ದಿನಗಳಿಗೆ ಮುಗಿಯದಿರುವುದರ ಬದಲು 2 -3 ದಿನಗಳಿಗೆ ಮುಗಿಯುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಸ್ಪಿನ್ ಪಿಚ್ಗಳ ಬಗ್ಗೆ ತುಂಬಾ ಹೆಚ್ಚು ಮಾತನಾಡಲಾಗುತ್ತಿದೆ ಎಂದು ವಿರಾಟ್ ಕಿಡಿಕಾರಿದರು.
ಟೆಸ್ಟ್ ಪಂದ್ಯ 2 ಅಥವಾ 3 ಪಂದ್ಯಗಳಿಗೆ ಕೊನೆಗೊಳ್ಳಬಾರದಲ್ಲವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಕೊಹ್ಲಿ, ನೀವು ಟೆಸ್ಟ್ ಪಂದ್ಯವನ್ನಾಡುವುದು ಗೆಲ್ಲುವುದಕ್ಕೊ ಅಥವಾ 5 ದಿನಗಳವರೆಗೆ ತೆಗೆದುಕೊಂಡು ಹೋಗಿ ಮನರಂಜನೆ ನೀಡುವುದಕ್ಕೋ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಭಾರತ ಹೆಚ್ಚು ಸ್ಪಿನ್ ಸ್ನೇಹಿ ಪಿಚ್ಗಳನ್ನು ನಿರ್ಮಿಸುತ್ತಿದೆ ಎಂಬ ವಾದವನ್ನು ಸಮರ್ಥಿಸಿಕೊಂಡಿರುವ ಕೊಹ್ಲಿ, ಈಗಾಗಲೆ ಸ್ಪಿನ್ ಟ್ರ್ಯಾಕ್ ಬಗ್ಗೆ ಸಾಕಷ್ಟು ಮಾತು ಮತ್ತು ಚರ್ಚೆ ನಡೆಸಲಾಗುತ್ತಿದೆ. ವಿದೇಶಗಳಲ್ಲಿ ಸೀಮ್ ಪಿಚ್ನಲ್ಲಿ 2 ಅಥವಾ 3 ದಿನಗಳಿಗೆ ಪಂದ್ಯಗಳು ಮುಗಿದಿವೆ. ಆದರೆ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ, ಕೇವಲ ಸ್ಪಿನ್ ಟ್ರ್ಯಾಕ್ ಬಗ್ಗೆ ಮಾತ್ರ ಟೀಕಿಸುವುದು ನ್ಯಾಯ ಸಮ್ಮತವಲ್ಲ ಎಂದಿದ್ದಾರೆ.
ಇದನ್ನು ಓದಿ:'ನ್ಯೂಜಿಲ್ಯಾಂಡ್ನಲ್ಲಿ 3ನೇ ದಿನ 36 ಓವರ್ಗಳಲ್ಲಿ ಸೋತಿದ್ದೆವು, ಅಂದು ಯಾರೂ ಪಿಚ್ ಬಗ್ಗೆ ಟೀಕಿಸಲಿಲ್ಲ'