ETV Bharat / sports

ಭಾರತೀಯ ಹಳ್ಳಿ ಹೈದನ ಟಿಕ್​ಟಾಕ್​ ವಿಡಿಯೋಗೆ ಡೇವಿಡ್​ ವಾರ್ನರ್ ಮೆಚ್ಚುಗೆ: ವಿಡಿಯೋ - ಭಾರತೀಯನ ಟಿಕ್​ಟಾಕ್ ವಿಡಿಯೋಗೆ ವಾರ್ನರ್​ ಪ್ರತಿಕ್ರಿಯೆ

ಮೈದಾನದಲ್ಲಿ ಅಭಿಮಾನಿಗಳನ್ನು ಬೌಂಡರಿ, ಸಿಕ್ಸರ್​ಗಳ ಮೂಲಕ ರಂಜಿಸುತ್ತಿದ್ದ ಡೇವಿಡ್ ವಾರ್ನರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಟುವಟಿಕೆಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

David Warner and family react to video of dancer in Indian village
ಡೇವಿಡ್​ ವಾರ್ನರ್
author img

By

Published : Jun 10, 2020, 1:54 PM IST

ಸಿಡ್ನಿ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಕುಟುಂಬದವರ ಜೊತೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಿರುವ ವಿಡಿಯೋಗಳು ಅಭಿಮಾನಿಗಳನ್ನು ರಂಜಿಸುತ್ತಿವೆ.

ಟಿಕ್​ಟಾಕ್​ನಲ್ಲಿ ತೆಲುಗು ಗೀತೆಗೆ ಡ್ಯಾನ್ಸ್​, ತೆಲುಗು ಡೈಲಾಗ್​ ಹೊಡೆಯುತ್ತಿದ್ದ ವಾರ್ನರ್​, ಇದೀಗ ಭಾರತೀಯರ ಟಿಕ್​ಟಾಕ್​ ವಿಡಿಯೋಗಳನ್ನು ಕೂಡ ಪ್ರಮೋಟ್​ ಮಾಡುತ್ತಿದ್ದಾರೆ.

ಬಾಲಿವುಡ್​ ಗೀತೆಗೆ ಹಳ್ಳಿಯ ಯುವಕನೊಬ್ಬ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋವನ್ನು ತಮ್ಮ ಕುಟುಂಬದವರೊಡನೆ ಎಂಜಾಯ್ ಮಾಡಿ ರುವ ವಾರ್ನರ್‌ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಡ್ಯಾನ್​ ಮೂವ್​ಗಳನ್ನು ತೋರಿಸುವ ಮತ್ತೊಂದು ಪ್ರತಿಭೆ. ಉತ್ತಮವಾದ ಕೆಲಸ ದೀಪಕ್​’ ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ತಾವೂ ಕೂಡ ಟಿಕ್​ಟಾಕ್​ ಖಾತೆ ಆರಂಭಿಸಿದ ದಿನದಿಂದ ಮಾಡಿದ್ದ ಎಲ್ಲಾ ವಿಡಿಯೋಗಳನ್ನು ಸೇರಿಸಿ ರಾಮುಲೊ... ರಾಮುಲಾ ಎಂಬ ತೆಲುಗು ಗೀತೆಯನ್ನು ಸಂಯೋಜಿಸಿ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.