ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದ ವೇಳೆ ಚೆಂಡು ತಲೆಗೆ ಬಡಿದ ಪರಿಣಾಮ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಬದಲಿಗೆ ಕನ್ಕ್ಯೂಸನ್ ಸಬ್ಸ್ಟಿಟ್ಯೂಟ್ ಆಗಿ ಯುಜ್ವೇಂದ್ರ ಚಹಾಲ್ರನ್ನು ಆಯ್ಕೆ ಮಾಡಿದ್ದಕ್ಕೆ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಹೆನ್ರಿಕ್ಸ್ ಪ್ರಶ್ನಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಪಂದ್ಯದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದ ಕಾರಣ ಅವರ ಬದಲಿಗೆ ಕನ್ಕ್ಯೂಸನ್ ಸಬ್ಸ್ಟಿಟ್ಯೂಟ್ ಆಗಿ ಸ್ಪಿನ್ನರ್ ಚಹಾಲ್ರನ್ನು ತಂಡಕ್ಕೆ ಸೇರಿಸಿಕೊಂಡು ಬೌಲಿಂಗ್ ಮಾಡಿಸಲಾಗಿತ್ತು. ಆದರೆ ಇದಕ್ಕೆ ಆ ಸಮಯದಲ್ಲಿ ಆಸೀಸ್ ಕೋಚ್ ಲ್ಯಾಂಗರ್ ಅಪಸ್ವರ ಎತ್ತಿದ್ದರು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್‌ರೌಂಡರ್ ಮೋಯಿಸಸ್ ಹೆನ್ರಿಕ್ಸ್ ಕೂಡ ಚಹಾಲ್ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮುಂದಿದೆ ಸರಣಿ ಗೆಲುವಿನ ಗುರಿ... ತಿರುಗಿ ಬೀಳುವ ಆಲೋಚನೆಯಲ್ಲಿ ಕಾಂಗರೂ ಪಡೆ
"ರವೀಂದ್ರ ಜಡೇಜಾ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಐಸಿಸಿ ನಿಯಮದಡಿ ಕನ್ಕ್ಯೂಸನ್ ತೆಗೆದುಕೊಳ್ಳಬಹುದು. ಇದರಲ್ಲಿ ನಮಗೆ ಯಾವುದೇ ಅನುಮಾನ ಕಂಡು ಬಂದಿಲ್ಲ. ಆದರೆ ಇಲ್ಲಿ ಬದಲಿ ಆಟಗಾರನ ಆಯ್ಕೆ ಮಾಡಿರುವುದು ನಮ್ಮ ಪ್ರಶ್ನೆಯಾಗಿದೆ"
-
A game-changing performance from the substitute? #AUSvIND
— cricket.com.au (@cricketcomau) December 4, 2020 " class="align-text-top noRightClick twitterSection" data="
">A game-changing performance from the substitute? #AUSvIND
— cricket.com.au (@cricketcomau) December 4, 2020A game-changing performance from the substitute? #AUSvIND
— cricket.com.au (@cricketcomau) December 4, 2020
ಏಕೆಂದರೆ ಜಡೇಜಾ ಆಲ್‌ರೌಂಡರ್ ಆಗಿದ್ದಾರೆ. ಆದರೆ ಅವರ ಬದಲಿಗೆ ಬಂದ ಚಹಾಲ್ ಸಂಪೂರ್ಣ ಸ್ಪಿನ್ ಬೌಲರ್. ಅವಿರಬ್ಬರು ಹೇಗೆ ಸರಿಸಮನಾದ ಬದಲಿ ಆಟಗಾರರಾಗುತ್ತಾರೆಂಬುದು ನಮ್ಮ ಪ್ರಶ್ನೆಯಾಗಿದೆ ಎಂದು 30 ರನ್ ಗಳಿಸಿದ್ದಲ್ಲದೆ, ಬೌಲಿಂಗ್ನಲ್ಲೂ 3 ವಿಕೆಟ್ ಪಡೆದಿದ್ದ ಹೆನ್ರಿಕ್ಸ್ ಹೇಳಿದ್ದಾರೆ.
ಐಸಿಸಿ ನಿಯಮವೂ ಚೆನ್ನಾಗಿದೆ. ನಾನು ಇಲ್ಲಿ ನಿಯಮದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಕನ್ಕ್ಯೂಸನ್ ಆಟಗಾರನ ಆಯ್ಕೆಯ ಕುರಿತು ಮಾತನಾಡುತ್ತಿದ್ದೇವೆ. ಈ ವಿಷಯದಲ್ಲಿ ಯಾವ ರೀತಿ ನಿರ್ಧರಿಸಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಬದಲಿ ಆಟಗಾರನನ್ನು ಆಯ್ಕೆ ಮಾಡಬೇಕಲ್ಲವೇ ಎಂದು 33 ವರ್ಷದ ಹೆನ್ರಿಕ್ಸ್ ಕೇಳಿದ್ದಾರೆ.
ಜಡೇಜಾ ಬದಲು ಮೈದಾನಕ್ಕಿಳಿದ ಚಾಹಲ್ 4 ಓವರ್ ಎಸೆದು 25 ರನ್ ನೀಡಿ ಫಿಂಚ್, ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ವಿಕೆಟ್ ಪಡೆದಿದ್ದರು.