ETV Bharat / sports

ಪಾಕ್​ ಕ್ರಿಕೆಟ್​ ತಂಡದ ನಾಯಕ ಅಜರ್ ಅಲಿ ತಮ್ಮ ಫಾರ್ಮ್​ಗೆ ಮರಳಬೇಕು: ಯೂನಿಸ್​ ಸಲಹೆ

ಇಂಗ್ಲೆಂಡ್ ವಿರುದ್ಧದ ಉಳಿದ 2 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡದ ನಾಯಕ ಅಜರ್ ಅಲಿ ತಮ್ಮ ಫಾರ್ಮ್​ಗೆ ಮರಳಬೇಕು ಎಂದು ಪಾಕಿಸ್ತಾನದ ವೇಗದ ಬೌಲಿಂಗ್ ಕೋಚ್ ವಕಾರ್ ಯೂನಿಸ್ ಹೇಳಿದ್ದಾರೆ.

Waqar Younis backs 'experienced' Azhar Ali
ಅಜರ್ ಅಲಿಗೆ ವಕಾರ್ ಯೂನಿಸ್​ ಸಲಹೆ
author img

By

Published : Aug 13, 2020, 12:40 PM IST

ಲಂಡನ್: ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿ ತಮ್ಮ ಫಾರ್ಮ್​ಗೆ ಮರಳಿ ಇಂಗ್ಲೆಂಡ್ ವಿರುದ್ಧ ಉಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಬೇಕು ಎಂದು ಪಾಕಿಸ್ತಾನದ ವೇಗದ ಬೌಲಿಂಗ್ ತರಬೇತುದಾರ ವಕಾರ್ ಯೂನಿಸ್ ಹೇಳಿದ್ದಾರೆ.

Waqar Younis backs 'experienced' Azhar Ali
ಅಜರ್ ಅಲಿ ಟೆಸ್ಟ್ ಸಾಧನೆ

ನಾಯಕನಾಗಿ ಉನ್ನತ ಕ್ರಮಾಂಕದಲ್ಲಿ ಆಡುವುದು ಸುಲಭವಲ್ಲ. ಅಜರ್ ಮೊದಲು ನಾಯಕನಾಗಿದ್ದಾರೆ. ಆದ್ದರಿಂದ ಇದನ್ನು ಅರ್ಥಮಾಡಿಕೊಂಡು ಆಡಬೇಕು. ನೀವು ಕೆಟ್ಟ ಪ್ರದರ್ಶನ ನೀಡುವುದು ಉತ್ತಮವಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ನಾನೂ ಕೂಡ ನಾಯಕನಾಗಿದ್ದರಿಂದ ಅದರ ಕಷ್ಟ ನನಗೆ ತಿಳಿದಿದೆ. ನಿಮಗೆ ಇನ್ನೂ ಹಲವಾರು ಜವಾಬ್ದಾರಿಗಳಿವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಬ್ಯಾಟಿಂಗ್‌ನತ್ತಲೂ ನೀವು ಗಮನ ಹರಿಸಬೇಕು ಎಂದು ಯೂನಿಸ್ ಹೇಳಿದ್ದಾರೆ.

ನಾವು ಈ ಪಂದ್ಯವನ್ನು ಗೆದ್ದರೆ ಆಟಗಾರರು ಹೆಚ್ಚಿನ ಪ್ರೋತ್ಸಾಹ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತಾರೆ. ಅಜರ್ ಅಲಿ 80 ಟೆಸ್ಟ್ ಪಂದ್ಯಗಳನ್ನು ಆಡಿ ಇಂಗ್ಲೆಂಡ್‌ನಲ್ಲೂ ಉತ್ತಮ ರನ್ ಗಳಿಸಿದ ಒಬ್ಬ ನುರಿತ ಆಟಗಾರ. ಹೇಗೆ ಫಾರ್ಮ್​ಗೆ ಮರಳಬೇಕು ಎಂದು ತಿಳಿದಿದ್ದಾರೆ. ಮುಂಬರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ ಎಂದಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್‌ನಲ್ಲಿ ಅಲಿ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 0 ಮತ್ತು 18 ರನ್ ಗಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.