ಮುಂಬೈ: ವಿಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಯಾವುದೇ ಪತ್ರಿಕಾಗೋಷ್ಠಿ ನಡೆಸದಿರಲು ಕೊಹ್ಲಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಸೋಮವಾರ ಟಿ20 ಕ್ರಿಕೆಟ್ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಅಮೇರಿಕಕ್ಕೆ ಪ್ರಯಾಣ ಬೆಳಸಲಿದ್ದಾರೆ. ಆದರೆ ಇದಕ್ಕೂ ಮುನ್ನ ನಡೆಸಬೇಕಿದ್ದ ಸುದ್ದಿಗೋಷ್ಠಿಯನ್ನು ಕೊಹ್ಲಿ ನಡೆಸದಿರಲು ನಿರ್ಧರಿಸಿದ್ದಾರೆ. ರೋಹಿತ್ ಮತ್ತು ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಗುಸುಗುಸು ದಿನದಿಂದ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ವಿಶ್ವಕಪ್ನಂತರ ಭಾರತ ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿದೆ ಎನ್ನಲಾಗಿದ್ದು, ಜೊತೆಗೆ ಆಟಗಾರರು ಕೂಡ ಎರಡು ಗುಂಪುಗಳಾಗಿ ರೋಹಿತ್ ಮತ್ತು ಕೊಹ್ಲಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ದೇಶಾದ್ಯಂತ ಮಾಧ್ಯಮಗಳಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ. ಈ ವಿಚಾರಗಳಿಂದ ಬೇಸತ್ತಿರುವ ನಾಯಕ ಕೊಹ್ಲಿ ಪತ್ರಿಕಗೋಷ್ಠಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.
ಶನಿವಾರ ಪ್ರೋ ಕಬಡ್ಡಿ ಪ್ರಮೋಷನ್ನಲ್ಲಿ ರಾಷ್ಟ್ರಗೀತೆಯಾಡಲು ಅತಿಥಿಯಾಗಿ ಆಗಮಿಸಿದ್ದ ವಿರಾಟ್ ಕೊಹ್ಲಿ ಮಾಧ್ಯಮದಿಂದ ದೂರವೇ ಉಳಿದಿದ್ದರು. ಇತ್ತ ರೋಹಿತ್ ಕೂಡ ವಿಶ್ವಕಪ್ನಂತರ ಯಾವುದೇ ಸಂದರ್ಶನ ನೀಡಿಲ್ಲ.
ಈ ಇಬ್ಬರ ಆಟಗಾರರ ನಡುವಿನ ಶೀತಲ ಸಮರ ದಿನೇ ದಿನೇ ತಾರಕಕ್ಕೇರುತ್ತಿದ್ದು, ಇದಕ್ಕೆ ಅವರಿಬ್ಬರೇ ಉತ್ತರ ಕೊಡಬೇಕಿದೆ. ಇಲ್ಲವಾದರೆ ಈ ಒಳಜಗಳ ತಂಡದ ಮೇಲೆ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.