ಸಿಡ್ನಿ: ಭಾರತ ತಂಡ ಐಪಿಎಲ್ ಮುಗಿದ ನಂತರ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಈಗಾಗಲೇ ಕ್ವಾರಂಟೈನ್ನಲ್ಲಿರುವ ಕೊಹ್ಲಿ ಪಡೆ ಕೋವಿಡ್ ಟೆಸ್ಟ್ ಮುಗಿಸಿ ಬಯೋ ಸೆಕ್ಯೂರ್ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾ ಆಟಗಾರರು ಭಾನುವಾರ ಕೋಚ್ ರಾಮಕೃಷ್ಣನ್ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಫೀಲ್ಡಿಂಗ್ ಅಭ್ಯಾಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ್ದಾರೆ. ಈ ವಿಡಿಯೋವನ್ನು ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಇನ್ಸ್ಟಾಗ್ರಾಂ ನಲ್ಲಿ ಫೋಸ್ಟ್ ಮಾಡಿದ್ದು ಕೊಹ್ಲಿ ಫೀಲ್ಡಿಂಗ್ ಕೌಶಲ್ಯಕ್ಕೆ ಅಭಿಮಾನಿಗಳು ಶಹಬ್ಬಾಶ್ ಎನ್ನುತ್ತಿದ್ದಾರೆ.
- " class="align-text-top noRightClick twitterSection" data="
">
ಭಾರತ ತಂಡದಲ್ಲಿರುವ ಅತ್ಯುತ್ತಮ ಕ್ಷೇತ್ರರಕ್ಷಕರಲ್ಲಿ ಒಬ್ಬರಾಗಿರುವ ಕೊಹ್ಲಿ ಇಂದಿನ ಅಭ್ಯಾಸದ ಸಂದರ್ಭದಲ್ಲಿ ಬಲಭಾಗಕ್ಕೆ ಜಿಗಿದು ಚೆಂಡನ್ನು ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಕೊಹ್ಲಿ ಜೊತೆಗೆ ಟೆಸ್ಟ್ ತಂಡದ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಕೂಡ ಕ್ಯಾಚಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಇತರೆ ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ರನ್ನಿಂಗ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಭಾರತ ತಂಡ ನವೆಂಬರ್ 12ರಂದು ಸಿಡ್ನಿ ತಲುಪಿದೆ. ಅಲ್ಲಿನ ಹೋಟೆಲ್ನಲ್ಲಿ 2 ವಾರಗಳ ಕ್ವಾರಂಟೈನ್ ಮುಗಿಯುತ್ತಿದ್ದಂತೆ ನವೆಂಬರ್ 27ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಲಿದೆ. ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ 3 ಏಕದಿನ, 3 ಟಿ20 ಮತ್ತು 4 ಟೆಸ್ಟ್ ಪಂದ್ಯಗಳನ್ನಾಡಲಿದೆ.