ದುಬೈ: ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಆರ್ಸಿಬಿ ಪರ 6000 ರನ್ ಪೂರ್ಣಗೊಳಿಸುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಒಂದೇ ತಂಡದ ಪರ ಇಷ್ಟೊಂದು ರನ್ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
5,969 ರನ್ಗಳೊಂದಿಗೆ ಸಿಎಸ್ಕೆ ವಿರುದ್ಧ ಕಣಕ್ಕಿಳಿದಿದ್ದ ಕೊಹ್ಲಿ 31 ರನ್ಗಳಿಸುತ್ತಿದ್ದಂತೆ ಈ ವಿಶ್ವ ದಾಖಲೆಗೆ ಪಾತ್ರರಾದರು. ಈಗಾಗಲೇ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಕೆ ಸರದಾರರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೈನಾಗಿಂತ 300 ಕ್ಕೂ ಹೆಚ್ಚು ರನ್ ಲೀಡಿಂಗ್ನಲ್ಲಿದ್ದಾರೆ.
ಕೊಹ್ಲಿ ಆರ್ಸಿಬಿ ಪರ ಐಪಿಎಲ್ನಲ್ಲಿ 5,635 ರನ್ ಹಾಗೂ ಚಾಂಪಿಯನ್ಸ್ ಲೀಗ್ ಟಿ-20 ಯಲ್ಲಿ 15 ಪಂದ್ಯಗಳಿಂದ 424 ರನ್ಗಳಿಸುವ ಮೂಲಕ 6 ಸಾವಿರ ಪೂರೈಸಿದ್ದಾರೆ.
ಕೊಹ್ಲಿಯನ್ನು ಹೊರೆತುಪಡಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ 5,369, ಸಸೆಕ್ಸ್ ಪರ ಲೂಕ್ ರೈಟ್ 4,51 , ಸಿಎಸ್ಕೆ ಪರ ಎಂ.ಎಸ್ ಧೋನಿ 4,409 ಹಾಗೂ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 4,212 ರನ್ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.